ಭಾನುವಾರ ಒಂದೇ ದಿನ ಬಜೆಟ್​ಗೂ ಡಬಲ್ ಕಲೆಕ್ಷನ್ ಮಾಡಿದ ‘ಸು ಫ್ರಮ್ ಸೋ’; ಒಟ್ಟಾರೆ ಗಳಿಕೆ 10 ಪಟ್ಟು

Su From So Collection: ‘ಸು ಫ್ರಮ್ ಸೋ’ ಚಿತ್ರವು ಅಪಾರ ಯಶಸ್ಸನ್ನು ಕಂಡಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರವು ಈಗಾಗಲೇ 35 ಕೋಟಿಗೂ ರೂಪಾಯಿಗೂ ಹೆಚ್ಚು ಗಳಿಸಿದೆ. ಮಲಯಾಳಂನಲ್ಲಿಯೂ ಯಶಸ್ವಿಯಾಗಿದ್ದು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಯಶಸ್ಸು ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಭಾರಿ ಲಾಭ ತಂದಿದೆ.

ಭಾನುವಾರ ಒಂದೇ ದಿನ ಬಜೆಟ್​ಗೂ ಡಬಲ್ ಕಲೆಕ್ಷನ್ ಮಾಡಿದ ‘ಸು ಫ್ರಮ್ ಸೋ’; ಒಟ್ಟಾರೆ ಗಳಿಕೆ 10 ಪಟ್ಟು
ಸು ಫ್ರಮ್ ಸೋ

Updated on: Aug 04, 2025 | 6:50 AM

‘ಸು ಫ್ರಮ್ ಸೋ’ ಚಿತ್ರವನ್ನು (Su From So Movie) ಯಾರೂ ತಡೆಯೋರೆ ಇಲ್ಲ ಎಂಬಂತಾಗಿದೆ. ಸ್ಟಾರ್ ಹೀರೋಗಳ ಸಿನಿಮಾ ಎಂಬ ರೀತಿಯಲ್ಲಿ ಚಿತ್ರ ಕಲೆಕ್ಷನ್ ಮಾಡುತ್ತಿದೆ. ಸದ್ಯ ಸಿನಿಮಾ ಮಲಯಾಳಂ ಭಾಷೆಯಲ್ಲೂ ಬಿಡುಗಡೆ ಆಗಿದೆ. ಮುಂದಿನ ದಿನಗಳಲ್ಲಿ ತೆಲುಗು ಭಾಷೆಯಲ್ಲಿ ‘ಸು ಫ್ರಮ್ ಸೋ’ ಬಿಡುಗಡೆ ಆಗಲಿದೆ. ಈ ಎಲ್ಲಾ ಕಾರಣದಿಂದ ಚಿತ್ರದ ಕಲೆಕ್ಷನ್ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ. ಚಿತ್ರದ ಕಲೆಕ್ಷನ್ ನೋಡಿ ಅನೇಕರು ಹೌಹಾರಿದ್ದಾರೆ. ಮೂರನೇ ವಾರವೂ ಬೆಂಗಳೂರಿನಲ್ಲಿ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಂಡಿದೆ.

‘ಸು ಫ್ರಮ್ ಸೋ’ ಚಿತ್ರದ ಬಗ್ಗೆ ಸಿನಿ ಪ್ರಿಯರಿಗೆ ನಿರೀಕ್ಷೆ ಸೃಷ್ಟಿ ಆಗಿತ್ತು. ಆ ನಿರೀಕ್ಷೆಯನ್ನೂ ಮೀರಿ ಸಿನಿಮಾ ಯಶಸ್ಸು ಕಂಡಿದೆ. ಚಿತ್ರದ ಮೂಲಕ ನಿರ್ಮಾಪಕ ರಾಜ್ ಬಿ. ಶೆಟ್ಟಿ ಹಾಗೂ ಮೊದಲಾದವರು ಗೆಲುವಿನ ನಗೆ ಬೀರಿದ್ದಾರೆ. ‘ಸು ಫ್ರಮ್ ಸೋ’ ಮೂಲಕ ನಿರ್ದೇಶಕ ಜೆಪಿ ತುಮಿನಾಡ ಅವರು ಮೆಚ್ಚುಗೆ ಪಡೆದಿದ್ದಾರೆ.

‘ಸು ಫ್ರಮ್ ಸೋ’ ಚಿತ್ರದ ಬಜೆಟ್ 3-4 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಚಿತ್ರ ಭಾನುವಾರ ಒಂದೇ ದಿನ ಸುಮಾರು 6 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಂದರೆ ಬಜೆಟ್​ನ ದುಪ್ಪಟ್ಟು ಕಲೆಕ್ಷನ್ ಭಾನುವಾರ ಒಂದೇ ದಿನ ಆಗಿದೆ. ಇನ್ನು ಚಿತ್ರದ ಒಟ್ಟಾರೆ ಕಲೆಕ್ಷನ್ ನೋಡಿದರೆ ಎಲ್ಲರಿಗೂ ಅಚ್ಚರಿ ಆಗುವ ರೀತಿಯಲ್ಲಿ ಇದೆ.

ಇದನ್ನೂ ಓದಿ
ಸಮಂತಾ ಕೈಯಲ್ಲಿ ಹೊಸ ಉಂಗುರ; ಹುಟ್ಟಿತು ನಿಶ್ಚಿತಾರ್ಥದ ಚರ್ಚೆ
‘ಕೊತ್ತಲವಾಡಿ’ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು?
ಗಂಟೆಗೆ 11 ಸಾವಿರ ಟಿಕೆಟ್ ಮಾರಿದ ಸು ಫ್ರಮ್ ಸೋ; ಶುಕ್ರವಾರ ದಾಖಲೆ ಕಲೆಕ್ಷನ್
‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?

ಇದನ್ನೂ ಓದಿ: ಹೊಸ ಚಿತ್ರಗಳಿಗೂ ಸಡ್ಡು ಹೊಡೆದ ‘ಸು ಫ್ರಮ್ ಸೋ’; ಹೌಹಾರುವಂತಿದೆ 2ನೇ ವೀಕೆಂಡ್ ಕಲೆಕ್ಷನ್

ಈ ಸಿನಿಮಾ ಈವರೆಗೆ ಸುಮಾರು 35.60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಂದರೆ ಬಜೆಟ್​ನ ಹತ್ತು ಪಟ್ಟು ಗಳಿಕೆ ಆಗಿದೆ. ಇನ್ನು, ಮಲಯಾಳಂ ಭಾಷೆಯಲ್ಲೂ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಅನಾಯಾಸವಾಗಿ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ. ತೆಲುಗು ಹಾಗೂ ಹಿಂದಿಯಲ್ಲಿ ರಿಲೀಸ್ ಆದ ಬಳಿಕ ಚಿತ್ರ ಕ್ಲಿಕ್ ಆದರೆ ಒಳ್ಳೆಯ ಯಶಸ್ಸು ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.