
ಜೆಪಿ ತುಮುನಾಡು ನಿರ್ದೇಶನದ, ರಾಜ್ ಬಿ. ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ (Su From So Collection) ಸಿನಿಮಾ ವಿಚಾರದಲ್ಲಿ ಎಲ್ಲವೂ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚೇ ಆಗುತ್ತಿದೆ. ಮೂರನೇ ಭಾನುವಾರ ಮುಗಿದರೂ ಸಿನಿಮಾದ ಗಳಿಕೆ ನಿಲ್ಲುತ್ತಿಲ್ಲ. ಈ ಚಿತ್ರ ಭಾನುವಾರ ಎಲ್ಲರ ಊಹೆಗೂ ಮೀರಿ ಗಳಿಕೆ ಮಾಡಿದೆ. ಇದರಿಂದ ಸಿನಿಮಾದ ಕಲೆಕ್ಷನ್ ಹೆಚ್ಚುತ್ತಲೇ ಇದೆ. ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ, ತಮಿಳು ಹಾಗೂ ತೆಲುಗು ಭಾಷೆಯಲ್ಲೂ ಒಳ್ಳೆಯ ಗಳಿಕೆ ಆಗುತ್ತಿದೆ. ಮಲಯಾಳಂ ಪ್ರೇಕ್ಷಕರು ಚಿತ್ರವನ್ನು ಹೆಚ್ಚು ಇಷ್ಟಪಟ್ಟಿದ್ದಾರೆ.
‘ಸು ಫ್ರಮ್ ಸೋ’ ಸಿನಿಮಾ ಬಗ್ಗೆ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಸಿನಿಮಾ ತಂಡದವರು ಕೂಡ ಇದೊಂದು ಒಳ್ಳೆಯ ಚಿತ್ರ ಎನ್ನುತ್ತಲೇ ಬರುತ್ತಿದ್ದರು. ಸಿನಿಮಾ ರಿಲೀಸ್ ಆದ ಬಳಿಕ ಬಾಯ್ಮಾತಿನ ಪ್ರಚಾರ ಸಿಕ್ಕಿದೆ. ಈ ಸಿನಿಮಾ ಎದುರು ರಿಲೀಸ್ ಆದ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಚಿತ್ರವೇ ಥಂಡ್ ಹೊಡೆದಿದೆ ಎಂದರೆ ನಂಬಲೇ ಬೇಕು. ಈ ರೀತಿಯಲ್ಲಿ ಸಿನಿಮಾ ಅಬ್ಬರಿಸುತ್ತಿದೆ.
ಈ ಚಿತ್ರದ ಬಜೆಟ್ 4.50 ಕೋಟಿ ರೂಪಾಯಿ. ಪ್ರಚಾರಕ್ಕೆ 1 ಕೋಟಿ ರೂಪಾಯಿ ಖರ್ಚಾಗಿದೆ. ಎಲ್ಲ ಸೇರಿದರೆ ಸಿನಿಮಾಗೆ ಸರಿ ಸುಮಾರು 5.50 ಕೋಟಿ ರೂಪಾಯಿ ಖರ್ಚಾಗಿದೆ ಎನ್ನಬಹುದು. ಆದರೆ, ಪ್ರತಿ ವೀಕೆಂಡ್ನಲ್ಲಿ ಸಿನಿಮಾ ಬಜೆಟ್ಗೂ ಮೀರಿದ ಕಲೆಕ್ಷನ್ ಮಾಡುತ್ತಿದೆ. ‘ಸು ಫ್ರಮ್ ಸೋ’ ಸಿನಿಮಾ 17ನೇ ದಿನವಾದ ಭಾನುವಾರ (ಆಗಸ್ಟ್ 10) 6.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕಳೆದ ಭಾನುವಾರ ಕೂಡ ಇಷ್ಟೇ ಕಲೆಕ್ಷನ್ ಆಗಿತ್ತು. ಅದೇ ಹವಾ ಉಳಿಸಿಕೊಂಡು ಸಿನಿಮಾ ಸಾಗುತ್ತಿದೆ.
ಇದನ್ನೂ ಓದಿ: 3ನೇ ವೀಕೆಂಡ್ ಕೂಡ ‘ಸು ಫ್ರಮ್ ಸೋ’ ಭರ್ಜರಿ ಕಲೆಕ್ಷನ್; ಒಟ್ಟು ಎಷ್ಟಾಯ್ತು?
ಚಿತ್ರದ ಒಟ್ಟಾರೆ ಗಳಿಕೆ ನೋಡೋದಾದರೆ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ 63.ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದರಲ್ಲಿ ಮಲಯಾಳಂನಿಂದ ಸರಿ ಸುಮಾರು 4 ಕೋಟಿ ರೂಪಾಯಿ, 60-80 ಲಕ್ಷ ರೂಪಾಯಿ ತೆಲುಗಿನಿಂದ ಬಂದಿದೆ. ಈ ಚಿತ್ರಕ್ಕೆ ಬುಕ್ ಮೈ ಶೋನಲ್ಲಿ 83 ಸಾವಿರ ಮಂದಿ ರೇಟಿಂಗ್ ನೀಡಿದ್ದು, 9.4 ರೇಟಿಂಗ್ ಪಡೆದುಕೊಂಡಿದೆ. ಚಿತ್ರ ಮತ್ತಷ್ಟು ದಿನ ಅಬ್ಬರಿಸುವ ಸೂಚನೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:02 am, Mon, 11 August 25