
‘ಸು ಫ್ರಮ್ ಸೋ’ ಸಿನಿಮಾ (Su From So) ರಿಲೀಸ್ ಆಗಿ ಎರಡು ವಾರಗಳು ಕಳೆದಿವೆ. ಮೊದಲ ದಿನ ಸಾಧಾರಣ ಓಪನಿಂಗ್ ಪಡೆದ ಈ ಚಿತ್ರ ನಂತರದ ದಿನಗಳಲ್ಲಿ ಅಬ್ಬರಿಸಿತು. ಈ ಸಿನಿಮಾ ವ್ಯಾಪ್ತಿ ದಿನ ಕಳೆದಂತೆ ಹೆಚ್ಚುತ್ತಿದೆ. ವಿದೇಶಗಳಲ್ಲೂ ಸಿನಿಮಾ ಶೋ ಆಯೋಜನೆ ಮಾಡಲಾಗಿದೆ. ಎರಡು ವಾರಗಳಲ್ಲಿ ‘ಸು ಫ್ರಮ್ ಸೋ’ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಎಷ್ಟು ಗಳಿಸಿತು ಎಂಬ ಕುತೂಹಲ ಅನೇಕರಿಗೆ ಇರುತ್ತದೆ. ಆ ಬಗ್ಗೆ ಇಲ್ಲಿದೆ ವಿವರ.
ರಾಜ್ ಬಿ. ಶೆಟ್ಟಿ ನಿರ್ಮಾಣದ, ಜೆಪಿ ತುಮಿನಾಡ ನಿರ್ದೇಶನದ ‘ಸು ಫ್ರಮ್ ಸೋ’ ಜುಲೈ 25ರಂದು ತೆರೆಗೆ ಬಂತು. ಅಂದಿನಿಂದ ಇಲ್ಲಿಯವರೆಗೂ ಸಿನಿಮಾ ಅಬ್ಬರಿಸುತ್ತಲೇ ಇದೆ. ಈ ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಯಶಸ್ಸಿನಿಂದ ಸಿನಿಮಾ ಮಲಯಾಳಂನಲ್ಲೂ ಬಿಡುಗಡೆ ಆಯಿತು. ಇಂದಿನಿಂದ (ಆಗಸ್ಟ್ 8) ತೆಲುಗಿನಲ್ಲೂ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.
‘ಸು ಫ್ರಮ್ ಸೋ’ ಸಿನಿಮಾ ಗಳಿಕೆ ವಿಶ್ವ ಬಾಕ್ಸ್ ಆಫೀಸ್ನಲ್ಲಿ 57.5 ಕೋಟಿ ರೂಪಾಯಿ ಆಗಿದೆ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ sacnilk ವರದಿ ಮಾಡಿದೆ. ಸತತ 10 ದಿನಗಳ ಕಾಲ ಸಿನಿಮಾ 3 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿರೋದು ಚಿತ್ರದ ಹೆಚ್ಚುಗಾರಿಕೆ. ಇನ್ನು, ಈ ಸಿನಿಮಾ 10ನೇ ದಿನ 6.15 (ಆಗಸ್ಟ್ 3, ಭಾನುವಾರ) ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದು ಚಿತ್ರದ ಒಂದು ದಿನದ ಅತ್ಯಧಿಕ ಗಳಿಕೆ.
ಇದನ್ನೂ ಓದಿ: 50 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಸು ಫ್ರಮ್ ಸೋ’; ಎಲ್ಲಿಂದ ಎಷ್ಟು ಬಂತು? ಇಲ್ಲಿದೆ ವಿವರ
‘ಸು ಫ್ರಮ್ ಸೋ’ ಸಿನಿಮಾದ ಕನ್ನಡ ವರ್ಷನ್ನಿಂದ 45.78 ಕೋಟಿ ರೂಪಾಯಿ ಗಳಿಕೆ ಆಗಿದೆ ಎನ್ನಲಾಗಿದೆ. ಮಲಯಾಳಂನಿಂದ ಸರಿ ಸುಮಾರು 2 ಕೋಟಿ ರೂಪಾಯಿ ಬಂದಿದೆ. ವಿದೇಶದಿಂದಲೂ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಹಣದ ಹೊಳೆ ಹರಿದು ಬಂದಿದೆ. ಸಿನಿಮಾ ಯಶಸ್ಸಿಗೆ ಕಾರಣಾರದ ಎಲ್ಲರಿಗೂ ತಂಡದವರು ಧನ್ಯವಾದ ತಿಳಿಸಿದ್ದಾರೆ. ರಾಜ್ ಸದ್ಯ ವಿದೇಶದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.