ನಿರ್ದೇಶಕನಾದ ನಟ ಚಂದನ್ಗೆ ಬೆಂಬಲ ನೀಡಿದ ಕಿಚ್ಚ ಸುದೀಪ್
Kichcha Sudeep: ಕನ್ನಡದ ಸುರಧ್ರೂಪಿ ನಟರಲ್ಲಿ ಒಬ್ಬರಾಗಿರುವ ಚಂದನ್ ಕುಮಾರ್. ಹಲವು ಧಾರಾವಾಹಿಗಳು, ಸಿನಿಮಾಗಳು, ಬಿಗ್ಬಾಸ್ ರಿಯಾಲಿಟಿ ಶೋಗೂ ಹೋಗಿ ಬಂದಿರುವ ಚಂದನ್ ಕುಮಾರ್, ಇದೇ ಮೊದಲ ಬಾರಿಗೆ ನಿರ್ದೇಶಕ ಆಗಿದ್ದಾರೆ. ‘ಫ್ಲರ್ಟ್’ ಹೆಸರಿನ ಸಿನಿಮಾ ನಿರ್ದೇಶಿಸಿದ್ದು, ಕಿಚ್ಚ ಸುದೀಪ್ ಚಂದನ್ಗೆ ಸಾಥ್ ನೀಡಿದ್ದಾರೆ.

ನಾಯಕ ನಟರಾಗಿದ್ದವರು ಸಿನಿಮಾ ನಿರ್ದೇಶಕರಾಗಿ ಯಶಸ್ಸು ಗಳಿಸಿರುವ ಹೆಚ್ಚು ಉದಾಹರಣೆ ಇರುವುದು ಬಹುಷಃ ಕನ್ನಡ ಚಿತ್ರರಂಗದಲ್ಲಿಯೇ. ಕನ್ನಡದಲ್ಲಿ ಸುದೀಪ್ (Sudeep), ದುನಿಯಾ ವಿಜಿ, ಉಪೇಂದ್ರ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ ಪ್ರಮುಖವಾದ ಹೆಸರುಗಳು. ಇದೀಗ ಇದೇ ಸಾಲಿಗೆ ಸೇರಲು ಮುಂದಾಗಿದ್ದಾರೆ ಕನ್ನಡದ ಸುರಧ್ರೂಪಿ ನಟರಲ್ಲಿ ಒಬ್ಬರಾಗಿರುವ ಚಂದನ್ ಕುಮಾರ್. ಹಲವು ಧಾರಾವಾಹಿಗಳು, ಸಿನಿಮಾಗಳು, ಬಿಗ್ಬಾಸ್ ರಿಯಾಲಿಟಿ ಶೋಗೂ ಹೋಗಿ ಬಂದಿರುವ ಚಂದನ್ ಕುಮಾರ್, ಇದೇ ಮೊದಲ ಬಾರಿಗೆ ನಿರ್ದೇಶಕ ಆಗಿದ್ದಾರೆ.
ಚಂದನ್ ಕುಮಾರ್ ಅವರು ‘ಫ್ಲರ್ಟ್’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ನಿರ್ದೆಶನ ಮಾಡುವ ಜೊತೆಗೆ ಸಿನಿಮಾದ ನಾಯಕನಾಗಿಯೂ ನಟಿಸಿದ್ದಾರೆ. ಈ ಎರಡು ಸಾಹಸದ ಜೊತೆಗೆ ಈ ಸಿನಿಮಾದ ನಿರ್ಮಾಣ ಜವಾಬ್ದಾರಿಯನ್ನೂ ಸಹ ಚಂದನ್ ಅವರೇ ಹೊತ್ತುಕೊಂಡಿದ್ದಾರೆ. ಸಿನಿಮಾವನ್ನು ತಮ್ಮದೇ ಎವರೆಸ್ಟ್ ಪಿಕ್ಚರ್ಸ್ ಮೂಲಕ ನಿರ್ಮಾಣ ಮಾಡಿದ್ದಾರೆ.
‘ಫ್ಲರ್ಟ್’ ಸಿನಿಮಾಕ್ಕೆ ‘ಎ ಪ್ಯೂರ್ ಡವ್ ಸ್ಟೋರಿ’ ಎಂಬ ಅಡಿಬರಹ ಇದ್ದು, ಇದೊಂದು ಹಾಸ್ಯಮಿಶ್ರಿತ ಪ್ರೇಮಕತೆ ಎಂಬುದು ಹೆಸರಿನಿಂದಲೇ ಗೊತ್ತಾಗುತ್ತಿದೆ. ಸಿನಿಮಾನಲ್ಲಿ ನಿಮಿಕಾ ರತ್ನಾಕರ್, ಅಕ್ಷತಾ ಬೋಪಣ್ಣ ನಾಯಕಿಯರಾಗಿ ನಟಿಸಿದ್ದಾರೆ. ಈ ಚಿತ್ರದ ನೀ ನನ್ನ ಜೀವ ಎಂಬ ಫ್ರೆಂಡ್ ಶಿಪ್ ಹಾಡನ್ನು ಇತ್ತೀಚೆಗೆ ರಿಲೀಸ್ ಮಾಡೋ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲಾಗಿತ್ತು. ನಟ ಕಿಚ್ಚ ಸುದೀಪ್ ಅವರು ಆ ಹಾಡಿಗೆ ದನಿಯಾಗಿರುವುದು ವಿಶೇಷ.
ಇದನ್ನೂ ಓದಿ:ಸುದೀಪ್ ಹೊಸ ಸಿನಿಮಾ ಬಗ್ಗೆ ತೆಲುಗು ರಿಯಾಲಿಟಿ ಶೋನಲ್ಲಿ ಸುದ್ದಿ ಲೀಕ್
ನವೆಂಬರ್ 7 ರಂದು ಸಿನಿಮಾ ಬಿಡುಗಡೆ ಆಗಲಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗಷ್ಟೆ ಮಾಲ್ ಆಫ್ ಏಷ್ಯಾದಲ್ಲಿ ಅದ್ಧೂರಿಯಾಗಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕಿಚ್ಚ ಸುದೀಪ್ ಟ್ರೈಲರ್ ಬಿಡುಗಡೆ ಮಾಡಿದರು. ಸಿನಿಮಾ ತಂಡಕ್ಕೆ ಶುಭಾಶಯಗಳನ್ನು ಸಹ ಕೋರಿದರು.
ಸಿನಿಮಾ ಬಗ್ಗೆ ಮಾತನಾಡಿದ ನಿರ್ದೇಶಕ ಚಂದನ್, ನನ್ನ ವೃತ್ತಿ ಜೀವನದ ಉದ್ದಕ್ಕೂ ಸುದೀಪ್ ಅವರು ನನಗೆ ತುಂಬಾ ಬೆಂಬಲ ನೀಡುತ್ತಾ ಬಂದಿದ್ದಾರೆ. ಅಕ್ಟೋಬರ್ 25ಕ್ಕೆ ಬಿಗ್ ಬಾಸ್ ನಲ್ಲಿ ಸುದೀಪ್ ಅವರನ್ನು ನೋಡಿ 10 ವರ್ಷವಾಗುತ್ತೆ. ಸಿಸಿಎಲ್ ನಿಂದ ಹಿಡಿದು ಪ್ರೇಮಬರಹ ಚಿತ್ರಕ್ಕೆ ಅಲ್ಲದೆ ನಮ್ಮ ಹೋಟೆಲನ್ನು ಅವರೇ ಲಾಂಚ್ ಮಾಡಿಕೊಟ್ಟರು. ಅವರಿಗೆ ಧನ್ಯವಾದ. ‘ಫ್ಲರ್ಟ್’ ಸಿನಿಮಾ ರಾಮ್ ಕಾಮ್ ಸಿನಿಮಾ ಆಗಿದ್ದರೂ ಸಹ ಫ್ರೆಂಡ್ ಶಿಪ್, ಲವ್, ಹೀಗೆ ಎಲ್ಲಾ ಎಂಟರ್ ಟೈನಿಂಗ್ ಎಲಿಮೆಂಟ್ಸ್ ಇದೆ. ಫ್ಲರ್ಟ್ ಎಂದರೆ ಬರೀ ಚುಡಾಯಿಸುವುದು ಎಂದರ್ಥವಲ್ಲ. ಗಾಢವಾದ ಪ್ರೀತಿಯನ್ನೂ ಸಹ ಫ್ಲರ್ಟ್ ಎಂದೇ ಕರೆಯುತ್ತಾರೆ. ಚಿತ್ರದಲ್ಲಿ ಎಲ್ಲ ಪಾತ್ರಗಳಿಗೂ ಮೌಲ್ಯ ಇದೆ. ಚಿತ್ರದಲ್ಲಿ ರೋಮ್ ಕಾಮ್ ಜತೆಗೆ ಸೈಕೋ ಕ್ಯಾರೆಕ್ಟರ್ ಕೂಡ ಇದೆ. ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ ಎಂದರು.
ಕಿಚ್ಚ ಸುದೀಪ್ ಮಾತನಾಡಿ ನಾನೂ ಸಹ ಮೊದಲ ಪ್ರಯತ್ನ ಮಾಡಿದಾಗ ಆತಂಕದಲ್ಲೇ ಇದ್ದೆ. ಚಂದನ್ ನಮ್ಮನೆ ಹುಡುಗ, ಆತ ಏನು ಮಾಡಿದರೂ ಇಷ್ಟವಾಗುತ್ತೆ. ನಾನು ನಿರ್ದೇಶನ ಮಾಡ್ತಾನೆ ಅಂದಾಗ ತುಂಬಾ ಖುಷಿಯಾಯ್ತು. ಈಗಾಗಲೇ ನಾನು ಸಿನಿಮಾನ ನೋಡಿದ್ದೇನೆ. ತುಂಬಾ ಚೆನ್ನಾಗಿ ಮೂಡುಬಂದಿದೆ. ಕಥೆಯಲ್ಲಿರುವ ಡೆಪ್ತ್ ಚೆನ್ನಾಗಿದೆ ಎಂದು ಶುಭ ಹಾರೈಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




