2006ರಲ್ಲಿ ಬಂದ ‘ಮೈ ಆಟೋಗ್ರಾಫ್’ ಚಿತ್ರ ಸೂಪರ್ ಹಿಟ್ ಆಯಿತು. ಈ ಸಿನಿಮಾನ ಸುದೀಪ್ ಅವರು ನಿರ್ದೇಶನ ಮಾಡಿದರು. ಅವರೇ ನಿರ್ಮಾಣ ಕೂಡ ಮಾಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಈ ಚಿತ್ರದಲ್ಲಿ ಅವರು ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದರು. ಸುದೀಪ್ ಅವರ ಸಾಧನೆ ಸಣ್ಣದಲ್ಲ. ಅವರು ಮನೆಯನ್ನು ಅಡ ಇಟ್ಟು ಈ ಚಿತ್ರ ನಿರ್ಮಾಣ ಮಾಡಿದ್ದರು ಎನ್ನುವ ವಿಚಾರ ಗೊತ್ತೇ? ಈ ಬಗ್ಗೆ ಸುದೀಪ್ ಅವರು ಈ ಮೊದಲು ಹೇಳಿಕೊಂಡಿದ್ದರು.
ಈ ಮೊದಲು ‘ಜೀ ಕನ್ನಡ’ ವೇದಿಕೆಗೆ ಸುದೀಪ್ ಬಂದಿದ್ದರು. ‘ಸರಿಗಮಪ’ ಕಾರ್ಯಕ್ರಮಕ್ಕೆ ಅವರು ಮುಖ್ಯ ಅತಿಥಿ ಆಗಿದ್ದರು. ಈ ವೇಳೆ ಅವರು ಜೀ ಕನ್ನಡದ ಜೊತೆ ಇರುವ ವಿಶೇಷ ಸಂಬಂಧದ ಬಗ್ಗೆ ಹೇಳಿಕೊಂಡಿದ್ದರು. ಅವರ ಬದುಕನ್ನು ಸಿನಿಮಾ ಬದಲಿಸಿತ್ತು. ಇದರಲ್ಲಿ ಜೀ ಅವರ ಪಾಲೂ ಇದೆ ಎಂದಿದ್ದರು ಸುದೀಪ್.
‘ಮೈ ಆಟೋಗ್ರಾಫ್’ ಸಿನಿಮಾ ನಾನು ಮನೆ ಅಡ ಇಟ್ಟು ಮಾಡಿದ ಚಿತ್ರ. ಆ ಸಿನಿಮಾಗೆ ಹೋಗಿಲ್ಲ ಎಂದಿದ್ರೆ ಕಷ್ಟ ಆಗ್ತಿತ್ತು. ಯಾರೂ 25-30 ಲಕ್ಷ ರೂಪಾಯಿ ಮೇಲೆ ಹಣ ಕೊಡಲ್ಲ ಎಂದರು. ನಾನು ಸೆಟಲೈಟ್ ಹಕ್ಕನ್ನು ಕೊಡಲ್ಲ ಎಂದೆ. ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ಬಾರಿಗೆ 1 ಕೋಟಿ ರೂಪಾಯಿ ಕೊಟ್ಟರು. ಸಿನಿಮಾ ಹಿಟ್ ಆದ ಬಳಿಕ ಅವರು ಸೆಟಲೈಟ್ ಹಕ್ಕನ್ನು ಪಡೆದರು. ಈ ಚಿತ್ರ ಚೆನ್ನಾಗಿಲ್ಲ ಎಂದರೆ ಯಾರೂ ಸೆಟಲೈಟ್ ಹಕ್ಕನ್ನು ಪಡೆಯಬೇಡಿ ಎಂದು ನಾನು ಕೇಳಿ ಕೊಂಡಿದ್ದೆ’ ಎಂದಿದ್ದರು ಸುದೀಪ್.
ಇದನ್ನೂ ಓದಿ:ತೆಲುಗು ಬಿಗ್ ಬಾಸ್ ವೇದಿಕೆ ಮೇಲೆ ಗತ್ತು ತೋರಿಸಿ ಬಂದಿದ್ದ ಕಿಚ್ಚ ಸುದೀಪ್
‘ಮೈ ಆಟೋಗ್ರಾಫ್’ ಚಿತ್ರ 2006ರಲ್ಲಿ ರಿಲೀಸ್ ಆಯಿತು. ಹಲವು ಬ್ರೇಕಪ್ಗಳನ್ನು ಕಾಣುವ ಕಥಾ ನಾಯಕ ನಂತರ ತನ್ನದೇ ಮದುವೆಗೆ ಅವರೆಲ್ಲರಿಗೂ ಆಮಂತ್ರಣ ನೀಡುತ್ತಾರೆ. ಇದರ ಕಥೆಯನ್ನು ‘ಮೈ ಆಟೋಗ್ರಾಫ್’ ಚಿತ್ರ ಹೊಂದಿತ್ತು. ಇದು ತಮಿಳಿನ ‘ಆಟೋಗ್ರಾಫ್’ ಚಿತ್ರದ ರಿಮೇಕ್ ಆಗಿದೆ. ಚೆರನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿ ನಟಿಸಿದ್ದರು. ಅಲ್ಲಿ ಹಿಟ್ ಆದ ಬಳಿಕ ಸುದೀಪ್ ಅವರು ಚಿತ್ರವನ್ನು ಕನ್ನಡಕ್ಕೆ ತಂದು ಯಶಸ್ಸು ಕಂಡರು. ಈ ಸಿನಿಮಾ ಭಿನ್ನವಾಗಿ ಮೂಡಿ ಬಂದಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:52 pm, Wed, 19 February 25