ಹೊಸ ಚಿತ್ರದ ಅಪ್​ಡೇಟ್ ಕೊಟ್ಟ ಸುದೀಪ್; ಕಿಚ್ಚನ ಕಟ್ಟು ಮಸ್ತಾದ ಬಾಡಿ ನೋಡಿ ಫ್ಯಾನ್ಸ್ ಖುಷ್

Kichcha Sudeep: ಕಿಚ್ಚ ಸುದೀಪ್ ಅವರು ತಮ್ಮ ಹೊಸ ಚಿತ್ರದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಅವರ ಅದ್ಭುತವಾದ ಬಾಡಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಏಪ್ರಿಲ್ 16ರಂದು ಅವರ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಸಿಗಲಿದೆ. ಇದು 'ಬಿಲ್ಲ ರಂಗ ಬಾಷ' ಚಿತ್ರವಾಗಿರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಸುದೀಪ್ ಬಾಡಿ ನೋಡಿ ಫ್ಯಾನ್ಸ್ ಕಣ್ಣರಳಿಸಿದ್ದಾರೆ.

ಹೊಸ ಚಿತ್ರದ ಅಪ್​ಡೇಟ್ ಕೊಟ್ಟ ಸುದೀಪ್; ಕಿಚ್ಚನ ಕಟ್ಟು ಮಸ್ತಾದ ಬಾಡಿ ನೋಡಿ ಫ್ಯಾನ್ಸ್ ಖುಷ್
ಕಿಚ್ಚ ಸುದೀಪ್

Updated on: Apr 03, 2025 | 7:37 AM

ಹಿಂದೆ ಕತ್ತಲು. ಬಲಾಡ್ಯ ತೋಳುಗಳು. ಅವರ ಬಾಡಿ ನೋಡಿದರೆ ಯಾರೋ ಕುಸ್ತಿಪಟು ಕುಳಿತಿದ್ದಾರೇನೋ ಎಂದು ಅನ್ನಿಸದೆ ಇರದು. ಆದರೆ, ಅಲ್ಲಿ ಕುಳಿತಿರೋದು ಕಿಚ್ಚ ಸುದೀಪ್. ಅವರು ಜಿಮ್​​ನಲ್ಲಿ ಎಷ್ಟು ಬೆವರು ಹರಿಸಿದ್ದಾರೆ, ಎಷ್ಟು ಕಟ್ಟು ನಿಟ್ಟಾಗಿ ಡಯಟ್ ಫಾಲೋ ಮಾಡಿದ್ದಾರೆ ಎಂಬುದನ್ನು ಅವರ ಬಾಡಿಯೇ ಹೇಳುತ್ತದೆ. ಮುಖ ಇಲ್ಲಿ ಅಸ್ಪಷ್ಟ. ಒಂದೊಮ್ಮೆ ಮುಖ ಸ್ಪಷ್ಟವಾಗಿ ಕಂಡಿದ್ದರೂ ಎಲ್ಲರ ಗಮನ ಮೊದಲು ಹೋಗುತ್ತಿದ್ದು ಅವರು ಬಾಡಿ ಮೇಲೆ. ಈ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸುದೀಪ್ (Kichcha Sudeep) ಅವರು ಈಗ ಹೊಸ ಚಿತ್ರದ ಬಗ್ಗೆ ಅಪ್​ಡೇಟ್ ಕೊಟ್ಟಿದ್ದಾರೆ.

ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಯಶಸ್ಸು ಕಂಡಿತು. ಡಿಸೆಂಬರ್ ವೇಳೆಗೆ ಸಿನಿಮಾ ಬಿಡುಗಡೆ ಕಂಡು ಭರ್ಜರಿ ಗಳಿಕೆ ಮಾಡಿತು. ಇದಾದ ಬಳಿಕ ಸುದೀಪ್ ಅವರು ಬಿಗ್ ಬಾಸ್​ ಹಾಗೂ ಸಿಸಿಎಲ್​ನಲ್ಲಿ ಬ್ಯುಸಿ ಆದರು. ಈಗ ಅವರು ಎಲ್ಲಾ ಜವಾಬ್ದಾರಿಗಳನ್ನು ಪೂರ್ಣಗೊಳಿಸಿದ್ದಾರೆ. ಈಗ ಅವರು ಹೊಸ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲು ರೆಡಿ ಆಗಿದ್ದಾರೆ. ಅದು ‘ಬಿಲ್ಲ ರಂಗ ಬಾಷ’ ಸಿನಿಮಾ ಎನ್ನಲಾಗುತ್ತಿದೆ.

ಇದನ್ನೂ ಓದಿ
29 ವರ್ಷ ಆಗ್ತಿದೆ ಅಂತ ನಂಬೋಕಾಗಲ್ಲ: ರಶ್ಮಿಕಾ ಬರ್ತ್​ಡೇ ಈ ವರ್ಷ ಬಹಳ ಜೋರು
ಸಂದರ್ಶನ: ಶೈನ್​ ಶೆಟ್ಟಿ ಕನಸಿನ ಕೂಸು ಗಲ್ಲಿ ಕಿಚನ್​ಗೆ ವಿದಾಯ ಹೇಳಿದ್ದೇಕೆ?
52ನೇ ವಯಸ್ಸಿನಲ್ಲೂ ಸಿಂಗಲ್; ಈ ಸ್ಟಾರ್ ನಟಿ ಮದುವೆ ಆಗದಿರಲು ಅಜಯ್ ಕಾರಣ್
ಅಜಯ್ ದೇವಗನ್ ಐಷಾರಾಮಿ ಜೀವನ; 60 ಕೋಟಿ ಮನೆ, ದುಬಾರಿ ಕಾರು, ಬಿಸ್ನೆಸ್

‘ಬಿಲ್ಲ ರಂಗ ಬಾಷ’ ಚಿತ್ರಕ್ಕೆ ಕಳೆದ ಕೆಲವು ತಿಂಗಳುಗಳಿಂದ ಸೆಟ್ ಹಾಕುವ ಪ್ರಕ್ರಿಯೆ ನಡೆಯುತ್ತಾ ಇತ್ತು. ಈ ಮಧ್ಯೆ ಕೆಲವು ಅಡ್ಡಿಗಳು ಉಂಟಾದಾಗ ಸುದೀಪ್ ಹಾಗೂ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸುವಂತೆ ಕೇಳಿದ್ದರು. ಈಗ ಈ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಏಪ್ರಿಲ್ 16ರಂದು ಸಿನಿಮಾ ಸೆಟ್ಟೇರಲಿದೆ.


ಮೂರು ಫೋಟೋಗಳನ್ನು ಹಂಚಿಕೊಂಡಿರೋ ಸುದೀಪ್ ಅವರು, ‘ಏಪ್ರಿಲ್ 16’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಜೊತೆಗೆ ಗಡಿಯಾರದ ಎಮೋಜಿ ಕೂಡ ಹಾಕಿದ್ದಾರೆ. ಈ ಫೋಟೋಗಳಿಗೆ ಫ್ಯಾನ್ಸ್ ನಾನಾ ರೀತಿಯ ಕಮೆಂಟ್ ಮಾಡುತ್ತಾ ಇದ್ದಾರೆ. ಎಲ್ಲರೂ ಸಿನಿಮಾ ಬಗ್ಗೆ ತಿಳಿದುಕೊಳ್ಳಲು ಎಗ್ಸೈಟ್ ಆಗಿದ್ದಾರೆ.

ಇದನ್ನೂ ಓದಿ: ತಂದೆ ಜೊತೆ ಟ್ರೆಂಡ್ ಫಾಲೋ ಮಾಡಿದ ಸುದೀಪ್ ಮಗಳು ಸಾನ್ವಿ

ಸುದೀಪ್ ಅವರು ಎಲ್ಲಿಯೂ ಇದು ‘ಬಿಲ್ಲ ರಂಗ ಬಾಷ’ ಚಿತ್ರ ಎಂದು ಹೇಳಿಲ್ಲ. ಆದರೆ, ಈ ಚಿತ್ರಕ್ಕಾಗಿ ಇನ್ನಷ್ಟು ಬಾಡಿ ಮಾಡಿಕೊಳ್ಳಬೇಕು ಎಂದು ಸುದೀಪ್ ಈ ಮೊದಲು ಹೇಳಿಕೊಂಡಿದ್ದರು. ಈ ಕಾರಣಕ್ಕೆ ಅದೇ ಚಿತ್ರ ಇರಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:58 am, Thu, 3 April 25