
ಕಿಚ್ಚ ಸುದೀಪ್ (Sudeep) ಹಾಗೂ ಪ್ರಿಯಾ ದಂಪತಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಸಾನ್ವಿ ಹೆಸರಿನ ಮಗಳು ಇದ್ದಾರೆ. ಅವರು ಕೂಡ ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಸುದೀಪ್ ಅವರು ಈಗ ಸೂಪರ್ಸ್ಟಾರ್. ಅವರಿಗೆ ಮೊದಲಿನಿಂದಲೇ ಜನಪ್ರಿಯತೆ ಸಿಕ್ಕಿತ್ತು ಎನ್ನಿ. ಸುದೀಪ್ ಅವರ ಫೀಮೇಲ್ ಫ್ಯಾನ್ಬೇಸ್ ನೋಡಿ ಪ್ರಿಯಾ ಅವರು ಕಂಗಾಲಾಗಿದ್ದರು. ಮದುವೆ ಆದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.
2001ರಲ್ಲಿ ಕಿಚ್ಚ ಸುದೀಪ್ ಅವರು ವಿವಾಹ ಆದರು. ಅಕ್ಟೋಬರ್ನಲ್ಲಿ ಈ ವಿವಾಹ ನಡೆಯಿತು. ಇವರದ್ದು ಪ್ರೇಮ ವಿವಾಹ. ಮದುವೆ ಸಂದರ್ಭದಲ್ಲಿ ಏನಾಯಿತು ಎಂಬುದನ್ನು ಕಿಚ್ಚ ಸುದೀಪ್ ಹಾಗೂ ಪ್ರಿಯಾ ವಿವರಿಸಿದ್ದರು. ಸುದೀಪ್ ಅವರ ಫ್ಯಾನ್ ಬೇಸ್ ನೋಡಿ ಪ್ರಿಯಾ ಅವರು ಕಂಗಾಲಾಗಿದ್ದರು. ಜೀವನ ಮುಂದೆ ಹೇಗೆ ಎನ್ನುವ ಪ್ರಶ್ನೆ ಅವರನ್ನು ಕಾಡಿತ್ತು.
‘ನಂಗೆ ಒಂದೇ ಪ್ರಾಬ್ಲಂ ಇದ್ದಿತ್ತು. ಅವರ ಫಿಮೇಲ್ ಫ್ಯಾನ್ಸ್ ನೋಡಿ ಕಂಗಾಲಾದೆ. ರಿಯಾಲಿಟಿ ನೋಡಿ ಸ್ಟ್ರೈಕ್ ಆಯ್ತು. ನನಗೆ ಅಲ್ಲಿವರೆಗೆ ಐಡಿಯಾ ಇರಲೇ ಇಲ್ಲ. ಆಮೇಲೆ ಸುಮಾರು ಜನರು ನನ್ನನ್ನು ಮಾತನಾಡಿಸಲೇ ಇಲ್ಲ. ಅಪ್ಸೆಟ್ ಆದ ಮಹಿಳಾ ಅಭಿಮಾನಿಗಳು ಸುದೀಪ್ ಬಳಿ ನೀವು ಮದುವೆ ಯಾಕೆ ಆದ್ರಿ ಎಂದು ಕೇಳುತ್ತಿದ್ದರು. ಆದರೆ ನನ್ನ ಕನ್ವಿನ್ಸ್ ಮಾಡೋಕೆ ಅವರು ಎಫರ್ಟ್ ಹಾಕಿದ್ರು. ಶೂಟ್ ಕರೆದುಕೊಂಡು ಹೋಗಿ ಹೇಗೆ ಶೂಟ್ ಮಾಡ್ತೀವಿ ಎಂದು ತೋರಿಸಿದ್ರು’ ಎಂದಿದ್ದರು ಪ್ರಿಯಾ.
ಪ್ರಿಯಾ ಹಾಗೂ ಸುದೀಪ್ ಮಧ್ಯೆ ಕೆಲವೊಮ್ಮೆ ವೈಮನಸ್ಸು ಬಂದಿದ್ದು ಇದೆ. ಈ ವೈಮನಸ್ಸನ್ನು ಅವರು ಬಗೆಹರಿಸಿಕೊಂಡು ಮುಂದೆ ಸಾಗುತ್ತಿದ್ದಾರೆ. ಕಿಚ್ಚ ಸುದೀಪ್ ಅವರು ಹಲವು ವೇದಿಕೆ ಮೇಲೆ ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಜೊತೆ ಬಂದಿದ್ದು ಇದೆ. ಈ ವೇಳೆ ಪತ್ನಿಯನ್ನು ಹೊಗಳಿದ್ದರು.
ಇದನ್ನೂ ಓದಿ: ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸದ್ಯ ಸುದೀಪ್ ಅವರು ‘ಬಿಲ್ಲ ರಂಗ ಭಾಷ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅನೂಪ್ ಭಂಡಾರಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಅವರ ಕೈಗೆ ಏಟಾಗಿದ್ದು ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಅವರು ‘ಮ್ಯಾಕ್ಸ್’ ಚಿತ್ರದ ಬಳಿಕ ದೊಡ್ಡ ಯಶಸ್ಸು ಕಂಡರು. ಈ ಕಾರಣದಿಂದಲೂ ಅವರ ಮುಂದಿನ ಚಿತ್ರದ ಮೇಲೆ ನಿರೀಕ್ಷೆ ಮೂಡಿದೆ ಎನ್ನಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:01 am, Tue, 27 May 25