ನಿಗೂಢ ಪ್ರಪಂಚವನ್ನು ಪರಿಚಯಿಸಲಿದೆ ‘ತುರ್ತು ನಿರ್ಗಮನ’; ಹೊಸತನದ ಕಥೆ ಹೊತ್ತು ತಂದ ಹೇಮಂತ್ ಕುಮಾರ್

ತಮ್ಮ ಮೊದಲ ನಿರ್ದೇಶನದ ಚಿತ್ರ ಬಹಳ ವಿಭಿನ್ನವಾಗಿರಬೇಕು ಅನ್ನೋದು ನಿರ್ದೇಶಕ ಹೇಮಂತ್ ಅವರ ಆಸೆಯಾಗಿತ್ತು. ಅವರ ಆಸೆಯಂತೆಯೇ ‘ತುರ್ತು ನಿರ್ಗಮನ’ ಸಿನಿಮಾ ಭಿನ್ನವಾಗಿ ಮೂಡಿಬಂದಿದೆ.

ನಿಗೂಢ ಪ್ರಪಂಚವನ್ನು ಪರಿಚಯಿಸಲಿದೆ ‘ತುರ್ತು ನಿರ್ಗಮನ’; ಹೊಸತನದ ಕಥೆ ಹೊತ್ತು ತಂದ ಹೇಮಂತ್ ಕುಮಾರ್
ಸುನೀಲ್ ರಾವ್
Edited By:

Updated on: Jun 21, 2022 | 1:19 PM

ಸಾರ್ವಜನಿಕವಾಗಿ ನಾವು ಸಾಕಷ್ಟು ಬಾರಿ ಕೇಳಿರುವ ಕೆಲ ಪದಗಳೇ ವಿಭಿನ್ನ ಕಥಾಹಂದರಗಳೊಂದಿಗೆ ಸಿನಿಮಾ ರೂಪ ತಾಳುವುದು ಇತ್ತೀಚೆಗೆ ಕಾಮನ್ ಆಗಿದೆ. ಅಂತಹ ಸಿನಿಮಾಗಳ ಸಾಲಿಗೆ ಇದೀಗ ಸುನಿಲ್ ರಾವ್ (Sunil Rao) ನಾಯಕ ನಟನಾಗಿ ನಟಿಸಿರುವ ‘ತುರ್ತು ನಿರ್ಗಮನ’ ಸಿನಿಮಾ (Thurthu Nirgamana) ಕೂಡ ಸೇರಿದೆ. ಹೇಮಂತ್ ಕುಮಾರ್ ಚೊಚ್ಚಲ ನಿರ್ದೇಶನದ ವಿಭಿನ್ನ ಕಥಾಹಂದರವಿರುವ ಈ ಸಿನಿಮಾ ಈಗಾಗಲೇ ಟೀಸರ್ ಹಾಗೂ ಟ್ರೇಲರ್ ಮೂಲಕ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆಗಳನ್ನು ಮೂಡಿಸಿದೆ. ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇದೇ ತಿಂಗಳು 24ಕ್ಕೆ ‘ತುರ್ತು ನಿರ್ಗಮನ’ ಸಿನಿಮಾ ರಿಲೀಸ್ ಆಗಲಿದೆ.

ದಶಕಗಳ ಕಾಲ ತೆರೆಮರೆಗೆ ಸರಿದಿದ್ದ ನಟ ಸುನಿಲ್ ರಾವ್ ಇದೀಗ ‘ತುರ್ತು ನಿರ್ಗಮನ’ ಸಿನಿಮಾ ಮೂಲಕ ಮತ್ತೆ ಬಿಗ್ ಸ್ಕ್ರೀನ್​ಗೆ ಎಂಟ್ರಿ ಕೊಡುತ್ತಿದ್ದಾರೆ. ಸುಧಾರಾಣಿ, ರಾಜ್ ಬಿ. ಶೆಟ್ಟಿ, ಹಿತಾ ಚಂದ್ರಶೇಖರ್, ಸಂಯುಕ್ತ ಹೆಗಡೆ ಸೇರಿದಂತೆ ಇನ್ನೂ ಹಲವು ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದಾರೆ. ಪ್ರತಿಭಾವಂತ ತಂತ್ರಜ್ಞರು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಈಗಾಗಲೇ ಹೊರಬಂದಿರುವ ಟ್ರೇಲರ್​​ನಿಂದಾಗಿ ಇದೊಂದು ಪ್ರಯೋಗಾತ್ಮಕ ಅಂಶಗಳಿರುವ ಸಿನಿಮಾ ಅನ್ನೋದು ಪಕ್ಕಾ ಆಗಿದೆ. ಚಿತ್ರತಂಡ ಸಿನಿಮಾ ಬಗ್ಗೆ ಅದೆಷ್ಟೇ ಸುಳಿವುಗಳನ್ನು ಬಿಟ್ಟುಕೊಟ್ಟಿದ್ದರೂ ಕೂಡ ಚಿತ್ರದ ಕಥಾವಸ್ತು ಇಂಥದ್ದೇ ಎಂದು ಅಂದಾಜಿಸಲು ಸಾಧ್ಯವಾಗಿಲ್ಲ.

ತಮ್ಮ ಮೊದಲ ನಿರ್ದೇಶನದ ಚಿತ್ರ ಬಹಳ ವಿಭಿನ್ನವಾಗಿರಬೇಕು ಅನ್ನೋದು ನಿರ್ದೇಶಕ ಹೇಮಂತ್ ಅವರ ಆಸೆಯಾಗಿತ್ತು. ಅವರ ಆಸೆಯಂತೆಯೇ ‘ತುರ್ತು ನಿರ್ಗಮನ’ ಸಿನಿಮಾ ಭಿನ್ನವಾಗಿ ಮೂಡಿಬಂದಿದೆ. ಬಸ್, ಟ್ರೇನ್, ಸಿನಿಮಾ ಮಂದಿರ ಸೇರಿದಂತೆ ಹಲವು ಸ್ಥಳಗಳಲ್ಲಿ ತುರ್ತು ನಿರ್ಗಮನದ ದ್ವಾರವಿರುತ್ತದೆ. ಏನಾದರೂ ಅಪಾಯ ಸಂಭವಿಸಿದಾಗ ಆ ದ್ವಾರಗಳ ಮೂಲಕ ಹೊರ ಹೋಗಿ ಪಾರಾಗಬಹುದು.

ಇದನ್ನೂ ಓದಿ
ಗಿರಿಕೃಷ್ಣ ಜಾಗಕ್ಕೆ ಆ ಇಬ್ಬರು ಡೈರೆಕ್ಟರ್ ಬಂದಿದ್ದು ಹೇಗೆ?; ‘ಹರಿಕಥೆ ಅಲ್ಲ ಗಿರಿಕಥೆ’ಯ ಸತ್ಯ ಬಿಚ್ಚಿಟ್ಟ ರಿಷಬ್ ಶೆಟ್ಟಿ
‘ನಿಮ್ಮ ಕೆಲಸದ ಮೇಲೆ ಗಮನಹರಿಸಿ’; ನಾಗ ಚೈತನ್ಯ ಫ್ಯಾನ್ಸ್​​ಗೆ ಎಚ್ಚರಿಕೆ ನೀಡಿದ ಸಮಂತಾ
ಮನೆಯಲ್ಲೇ ಸಿಕ್ತು ಖ್ಯಾತ ಕಿರುತೆರೆ ನಟಿಯ ಶವ; ಬಾಯ್​ಫ್ರೆಂಡ್ ಮೇಲೆ ಮೂಡಿತು ಅನುಮಾನ
ಹನಿಮೂನ್ ಫೋಟೋ ಹಂಚಿಕೊಂಡ ನಯನತಾರಾ-ವಿಘ್ನೇಶ್; ನವ ದಂಪತಿ ತೆರಳಿದ್ದೆಲ್ಲಿಗೆ?

ಇದನ್ನೂ ಓದಿ: ಗಿರಿಕೃಷ್ಣ ಜಾಗಕ್ಕೆ ಆ ಇಬ್ಬರು ಡೈರೆಕ್ಟರ್ ಬಂದಿದ್ದು ಹೇಗೆ?; ‘ಹರಿಕಥೆ ಅಲ್ಲ ಗಿರಿಕಥೆ’ಯ ಸತ್ಯ ಬಿಚ್ಚಿಟ್ಟ ರಿಷಬ್ ಶೆಟ್ಟಿ

ಈ ದ್ವಾರದ ಬಗ್ಗೆ ಎಲ್ಲರಲ್ಲೂ ಒಂದು ಕುತೂಹಲವಂತೂ ಇದ್ದೇ ಇರುತ್ತದೆ. ಇಂತಹ ತುರ್ತು ನಿರ್ಗಮನದ ಬಗ್ಗೆ ನಿರ್ದೇಶಕರಿಗೆ ಮೊದಲಿನಿಂದಲೂ ಹೆಚ್ಚು ಆಸಕ್ತಿ ಇತ್ತಂತೆ. ಅವರಿಗೆ ಅದೆಷ್ಟೋ ಸಲ ಈ ತುರ್ತು ನಿರ್ಗಮನದಿಂದಾಚೆಗೆ ಯಾವುದೋ ನಿಗೂಢ ಪ್ರಪಂಚವೊಂದು ಇರಬೇಕು ಎಂದು ಅನ್ನಿಸಿತ್ತಂತೆ. ಹೀಗಾಗಿ ತಮ್ಮೊಳಗಿನ ಕಥಾ ಎಳೆಯನ್ನೇ ವಿಸ್ತರಿಸಿ, ರಂಜನಾತ್ಮಕ ಅಂಶಗಳೊಂದಿಗೆ ಈ ಚಿತ್ರವನ್ನು ರೂಪಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:04 pm, Tue, 21 June 22