
2015ರಲ್ಲಿ ರಿಲೀಸ್ ಆದ ‘ಕೆಂಡ ಸಂಪಿಗೆ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದನ್ನು ನಿರ್ದೇಶನ ಮಾಡಿದ್ದು ಸೂರಿ ಅವರು. ಲವ್ ಸ್ಟೋರಿ ಜೊತೆಗೆ ಕ್ರೈಮ್ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿತ್ತು. ಈ ಚಿತ್ರದ ಸೀಕ್ವೆಲ್ ‘ಕಾಂಗೆ ಬಂಗಾರ’ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿತ್ತು. ಈ ಚಿತ್ರ ಸಿನಿಮಾ ಕೊನೆಗೂ ಟೇಕ್ ಆಫ್ ಆಗಿದೆ. ಈ ಸಿನಿಮಾದ ಪಾತ್ರವರ್ಗದ ಬಗ್ಗೆ ಸಾಕಷ್ಟು ಕುತೂಹಲ
ಹಲವು ದಿನಗಳ ವಿಳಂಬ ಮತ್ತು ತಾರಾಗಣದ ಬದಲಾವಣೆ ‘ಕೆಂಡ ಸಂಪಿಗೆ ವಿಳಂಬಕ್ಕೆ ಪ್ರಮುಖ ಕಾರಣ. ಇತ್ತೀಚೆಗೆ ಚಿತ್ರದ ಮುಹೂರ್ತ ನಡೆದಿದೆ. ಈ ಹೊಸ ಪ್ರಾಜೆಕ್ಟ್‌ಗೆ ನಾಯಕ ಮತ್ತು ನಾಯಕಿಯ ಪಾತ್ರಗಳು ಫೈನಲ್ ಆಗಿವೆ. ಸಿನಿಮಾ ತಂಡ ಶೀಘ್ರದಲ್ಲೇ ಈ ವಿಷಯವನ್ನು ಅಧಿಕೃತವಾಗಿ ಹೊರಹಾಕಲಿದೆ.
‘ನಡುವೆ ಅಂತರವಿರಲಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸೂರ್ಯ ಪ್ರಖ್ಯಾತ್ ಈ ಸಿನಿಮಾಗೆ ನಾಯಕನಾಗಿದ್ದಾರೆ. ಇತ್ತೀಚೆಗೆ ‘ಜೆಸಿ – ದಿ ಯೂನಿವರ್ಸಿಟಿ’ ಚಿತ್ರದಲ್ಲಿ ಇವರು ನಟಿಸಿದ್ದರು. ಈಗ ಸೂರಿ ಅವರ ನಿರ್ದೇಶನದಲ್ಲಿ ಪ್ರಮುಖ ಪಾತ್ರ ಮಾಡಲು ಸೂರ್ಯ ಸಜ್ಜಾಗಿದ್ದಾರೆ. ಇವರ ಎಂಟ್ರಿಯಿಂದ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.
ಈ ಚಿತ್ರಕ್ಕೆ ನಟ ವಿಜಯ್ ಕುಮಾರ್ ಅವರ ಪುತ್ರಿ ರಿತಾನ್ಯಾ ವಿಜಯ್ ನಾಯಕಿಯಾಗಿದ್ದಾರೆ. ಜಡೇಶ್ ಕೆ ಹಂಪಿ ನಿರ್ದೇಶನದ ‘ಲ್ಯಾಂಡ್‌ಲಾರ್ಡ್’ ಚಿತ್ರದ ಮೂಲಕ ರಿತಾನ್ಯಾ ಬಣ್ಣದ ಲೋಕಕ್ಕೆ ಬಂದರು. ರಿತಾನ್ಯಾ ಅವರ ನಟನೆಗೆ ಸೂರಿ ಸೂಕ್ತ ವೇದಿಕೆ ಕಲ್ಪಿಸಿದ್ದಾರೆ.
ದುನಿಯಾ ಸೂರಿ ಸಿನಿಮಾ ಅಂದಮೇಲೆ ವಿಭಿನ್ನ ಪಾತ್ರಗಳು ಹಾಗೂ ಕಥಾಹಂದರ ಇರಲೇಬೇಕು. ಈ ಸಿನಿಮಾ ಸೂರಿ ಅವರ ಹಿಂದಿನ ಸೂಪರ್ ಹಿಟ್ ಚಿತ್ರಗಳಾದ ‘ಕೆಂಡಸಂಪಿಗೆ’ ಮತ್ತು ‘ಪಾಪ್‌ಕಾರ್ನ್ ಮಂಕಿ ಟೈಗರ್’ ಜೊತೆ ಲಿಂಕ್ ಹೊಂದಿದೆ. ಈ ಸಿನಿಮಾಗಳನ್ನು ಬೆಸೆಯುವ ಸಿನಿಮಾ ಆಗಿ ‘ಕಾಗೆ ಬಂಗಾರ’ ಮೂಡಿಬರಲಿದೆ. ಈ ಕನೆಕ್ಷನ್ ಪ್ರೇಕ್ಷಕರಿಗೆ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ರಂಗಾಯಣ ರಘು ಬಗ್ಗೆ ದುನಿಯಾ ಸೂರಿ ಮನದಲ್ಲಿದೆ ಬೆಟ್ಟದಷ್ಟು ಗೌರವ
‘ಕೆಂಡಸಂಪಿಗೆ’ ಚಿತ್ರದಲ್ಲಿ ಗಮನ ಸೆಳೆದಿದ್ದ ಪ್ರಶಾಂತ್ ಸಿದ್ಧಿ ಈ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿದ್ದಾರೆ. ಅವರ ಪಾತ್ರವೇ ಈ ಸರಣಿಯಲ್ಲಿ ಹೈಲೈಟ್ ಆಗಲಿದೆ. ಹಿಂದಿನ ಎರಡು ಸಿನಿಮಾಗಳಲ್ಲಿದ್ದ ಹಲವು ನಟರು ಕೂಡ ಈ ಚಿತ್ರಕ್ಕೆ ಸೇರ್ಪಡೆಯಾಗಲಿದ್ದಾರೆ. ಸೂರಿ ಕಟ್ಟಿಕೊಡಲಿರುವ ಈ ಚಿತ್ರ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.