
ಚಿತ್ರರಂಗದಲ್ಲಿ ಒಂದು ದಶಕ ಕಳೆಯಬೇಕು ಎಂದರೆ ಅದು ನಿಜಕ್ಕೂ ದೊಡ್ಡ ಚಾಲೆಂಜ್. ಆದರೆ, ಸಿನಿಮಾ ರಂಗದಲ್ಲಿ ಐದು ದಶಕ ಕಳೆಯುವುದು ಎಂದರೆ ಅದು ಸಣ್ಣ ಸಾಧನೆಯೇನು ಅಲ್ಲ. ಈ ರೀತಿಯ ಸಾಧನೆ ಮಾಡಿದ್ದು ನಿರ್ದೇಶಕ ಎಸ್ವಿ ರಾಜೇಂದ್ರ ಸಿಂಗ್ ಬಾಬು. ಅವರಿಗೆ ಈಗ 72 ವರ್ಷ. ಈಗಲೂ ಸಿನಿಮಾಗಳನ್ನು ಅವರು ಮಾಡುತ್ತಿದ್ದಾರೆ. ಅವರು ವಿಷ್ಣುವರ್ಧನ್ ಹಾಗೂ ಅಂಬರೀಷ್ ವೃತ್ತಿ ಜೀವನಕ್ಕೆ ಹೊಸ ತಿರುವು ನೀಡಿದ್ದರು.
ರಾಜೇಂದ್ರ ಸಿಂಗ್ ಬಾಬು ಅವರು ಸಿನಿಮಾ ಹಿನ್ನೆಲೆ ಹಿಂದಿರೋ ವ್ಯಕ್ತಿ. ಅವರ ತಂದೆ ಶಂಕರ್ ಸಿಂಗ್ ಬಾಬು ಅವರು ‘ಮಹಾತ್ಮ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಅವರು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದರು. ಅವರ ತಾಯಿ ಪ್ರತಿಮಾ ಅವರು ನಾಯಕಿ ಆಗಿದ್ದರು. 1945ರಿಂದ 2005ರವರೆಗೆ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರು.
ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ ಮೊದಲ ಸಿನಿಮಾ ‘ನಾಗಕನ್ಯೆ’. ವಿಷ್ಣುವರ್ಧನ್ ಹಾಗೂ ಭವಾನಿ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಹೊಸೂರು ಕೃಷ್ಣಮೂರ್ತಿ ಈ ಚಿತ್ರಕ್ಕೆ ಕಥೆ ಬರೆದಿದ್ದರು. ಈ ಚಿತ್ರ ನಿರ್ದೇಶನ ಮಾಡುವುದರ ಜೊತೆ ನಿರ್ಮಾಣ ಕೂಡ ಮಾಡಿದ್ದರು. ಆ ಬಳಿಕ 1977ರಲ್ಲಿ ‘ನಾಗರಹೊಳೆ’ ಹೆಸರಿನ ಸಿನಿಮಾ ಮಾಡಿದರು. ಈ ಚಿತ್ರದಲ್ಲೂ ವಿಷ್ಣು ನಟಿಸಿದರು. ನಂತರ ಮಾಡಿದ ‘ಕಿಲಾಡಿ ಜೋಡಿ’ ಚಿತ್ರದಲ್ಲೂ ವಿಷ್ಣು ನಟಿಸಿದರು. ಮೊದಲ ಮೂರು ಸಿನಿಮಾಗಳನ್ನು ವಿಷ್ಣು ಜೊತೆಯೇ ಮಾಡಿದ್ದರು ರಾಜೇಂದ್ರ ಸಿಂಗ್ ಬಾಬು.
1981ರಲ್ಲಿ ಬಂದ ‘ಅಂಥ’ ಸಿನಿಮಾ ಮೂಲಕ ಅಂಬಿ ವೃತ್ತಿ ಜೀವನಕ್ಕೆ ಮೈಲೇಜ್ ಸಿಕ್ಕಿತು. ಈ ಚಿತ್ರವನ್ನು ರಾಜೇಂದ್ರ ಸಿಂಗ್ ಬಾಬು ಅವರೇ ನಿರ್ದೇಶನ ಮಾಡಿದ್ದರು. ಅಷ್ಟು ವರ್ಷಗಳ ಕಾಲ ಅಂಬಿ ವಿಲನ್ ಆಗಿ, ಮಲ್ಟಿ ಸ್ಟಾರರ್ ಸಿನಿಮಾಗಳಲ್ಲಿ ಹೀರೋ ಆಗಿ ಗಮನ ಸೆಳೆದಿದ್ದರು. ಆದರೆ, ಒಂಟಿ ಹೀರೋ ಆಗಿ ಅವರು ದೊಡ್ಡ ಗೆಲುವು ಪಡೆದಿರಿಲಿಲ್ಲ. ‘ಅಂಥ’ ಸಿನಿಮಾ ಅವರ ವೃತ್ತಿ ಜೀವನಕ್ಕೆ ಮೈಲೇಜ್ ಕೊಟ್ಟಿತ್ತು.
ಇದನ್ನೂ ಓದಿ: ‘ವೀರ ಕಂಬಳ’ ಸಿನಿಮಾದಲ್ಲಿ ಬಣ್ಣ ಹಚ್ಚಿದ ಡಾ. ವೀರೇಂದ್ರ ಹೆಗ್ಗಡೆ; ಯಾವ ಪಾತ್ರ
ವಿಷ್ಣು ವರ್ಧನ್ ಅವರು ವೃತ್ತಿ ಜೀವನದಲ್ಲಿ ಹಲವು ಸಿನಿಮಾಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ‘ಬಂಧನ’ ಸಿನಿಮಾ ಮೂಲಕ ಫ್ಯಾಮಿಲಿ ಆಡಿಯನ್ಸ್ ಥಿಯೇಟರ್ನತ್ತ ಬರುವಂತೆ ಮಾಡಿದರು ರಾಜೇಂದ್ರ ಸಿಂಗ್ ಬಾಬು ಅವರೇ ಈ ಚಿತ್ರ ನಿರ್ದೇಶನ ಮಾಡಿದ್ದರು.
‘ವೀರ ಕಂಬಳ’ ಹೆಸರಿನ ಚಿತ್ರವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ರಕಾಶ್ ರಾಜ್, ರವಿಶಂಕರ್ ಮೊದಲಾದವರು ನಟಿಸಿದ್ದಾರೆ. ಕಂಬಳ ಓಟಗಾರ ಶ್ರೀನಿವಾಸ್ ಗೌಡ, ‘ಕಾಂತಾರ’ ಚಿತ್ರದಲ್ಲಿ ಗುರುವ ಪಾತ್ರ ಮಾಡಿದ್ದ ಸ್ವರಾಜ್ ಶೆಟ್ಟಿ ಈ ಚಿತ್ರದಲ್ಲಿ ನಟಿಸಿದ್ದಾರೆ. ತುಳುವಿನಲ್ಲಿ ಈ ಚಿತ್ರಕ್ಕೆ ‘ಬಿರ್ದ್ದ ಕಂಬುಲ’ ಎಂದು ಹೆಸರು ಇಡಲಾಗಿದೆ. ಈ ಸಿನಿಮಾದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮುಖ್ಯ ಪಾತ್ರ ಮಾಡುತ್ತಿದ್ದಾರೆ. ‘ವೀರ ಕಂಬಳ’ ಕೂಡ ತುಳು, ಕನ್ನಡ ಮೊದಲಾದ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.