AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಫಿದಾ ಆದ ತೆಲುಗು ಪ್ರೇಕ್ಷಕರು

Kantara Chapter 1: ರಿಷಬ್ ಶೆಟ್ಟಿ ನಟನೆಯ ‘ಕಾಂತಾರ: ಚಾಪ್ಟರ್ 1’ ಸಿನಿಮಾ ದೇಶದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಿದೆ. 2022ರ ‘ಕಾಂತಾರ’ ತೆಲುಗು ರಾಜ್ಯಗಳಲ್ಲಿ ಬ್ಲಾಕ್ ಬಸ್ಟರ್ ಆಗಿತ್ತು. ಅಂತೆಯೇ ಈಗ ಬಿಡುಗಡೆ ಆಗಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೂ ಸಹ ತೆಲುಗು ಜನ ಭರಪೂರ ಪ್ರೀತಿ ತೋರುತ್ತಿದ್ದಾರೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಫಿದಾ ಆದ ತೆಲುಗು ಪ್ರೇಕ್ಷಕರು
Kantara Chapter 1 Telugu
ಮಂಜುನಾಥ ಸಿ.
|

Updated on: Oct 03, 2025 | 5:52 PM

Share

ರಿಷಬ್ ಶೆಟ್ಟಿ (Rishab Shetty) ನಟಿಸಿ, ಹೊಂಬಾಳೆ ನಿರ್ಮಾಣ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ದೇಶದಾದ್ಯಂತ ವಿವಿಧ ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಕನ್ನಡ ಮಾತ್ರವೇ ಅಲ್ಲದೆ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿಯೂ ಸಹ ‘ಕಾಂತಾರ: ಚಾಪ್ಟರ್ 1’ ಸಿನಿಮಾ ತೆರೆಗೆ ಬಂದಿದೆ. ಸಿನಿಮಾ ಬಿಡುಗಡೆಗೆ ಮುಂಚೆ ಪ್ರಚಾರದ ಸಮಯದಲ್ಲಿ ತೆಲುಗು ಜನ ಕೆಲವರು ಭಾಷಾ ಕಾರಣ ಇರಿಸಿಕೊಂಡು ವಿನಾಕಾರಣ ವಿವಾದ ಹುಟ್ಟುಹಾಕುವ ಯತ್ನ ಮಾಡಿದ್ದರು. ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ತೆಲುಗು ಪ್ರೇಕ್ಷಕರು, ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ‘ಕಾಂತಾರ: ಚಾಪ್ಟರ್ 1’ಗೆ ಭರ್ಜರಿ ಪ್ರೀತಿ ನೀಡುತ್ತಿದ್ದಾರೆ.

2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾ ಕರ್ನಾಟಕದ ಬಳಿಕ ದೊಡ್ಡ ಹಿಟ್ ಆಗಿದ್ದು ಆಂಧ್ರ ಮತ್ತು ತೆಲಂಗಾಣಗಳಲ್ಲಿಯೇ ಅದಾದ ಬಳಿಕ ಉತ್ತರ ಭಾರತದ ಪ್ರದೇಶಗಳಲ್ಲಿ ಸಾಕಷ್ಟು ಹಣ ಗಳಿಸಿತ್ತು. ಇದೀಗ ‘ಕಾಂತಾರ: ಚಾಪ್ಟರ್ 1’ಗೂ ಸಹ ತೆಲುಗು ಜನರು ಮೊದಲಿನ ಸಿನಿಮಾಕ್ಕೆ ನೀಡಿದ ಪ್ರೀತಿಯನ್ನೇ ಮತ್ತೆ ನೀಡುತ್ತಿದ್ದಾರೆ. ಸಿನಿಮಾ ಟಿಕೆಟ್ ದರಗಳು ಹೆಚ್ಚಿದ್ದರೂ ಸಹ ಮುಗಿಬಿದ್ದು ಸಿನಿಮಾ ನೋಡಿ ಆನಂದಿಸುತ್ತಿದ್ದಾರೆ, ರಿಷಬ್ ಶೆಟ್ಟಿ ಮತ್ತು ತಂಡದ ಶ್ರಮವನ್ನು ಕೊಂಡಾಡುತ್ತಿದ್ದಾರೆ.

ತೆಲುಗು ರಾಜ್ಯಗಳಲ್ಲಿ ಅದರಲ್ಲಿಯೂ ಹೈದರಾಬಾದ್​​ನಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಭಾರಿ ಸಂಖ್ಯೆಯ ಶೋಗಳು ದೊರಕಿವೆ. ಸಿನಿಮಾ ಬಿಡುಗಡೆ ಆಗಿ ಎರಡನೇ ದಿನವೂ ಸಹ ಬಹುತೇಕ ಶೋಗಳು ಮುಂಗಡವಾಗಿ ಬುಕ್ ಆಗುತ್ತಿವೆ. ಮಾತ್ರವಲ್ಲದೆ ಶನಿವಾರ, ಭಾನುವಾರದ ಶೋಗಳು ಸಹ ಕೆಲವು ಈಗಾಗಲೇ ಪ್ರೀ ಬುಕ್ ಆಗಿವೆ. ಸಿನಿಮಾ ನೋಡಿದವರು ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ತೆಲುಗಿನ ಕೆಲವು ಜನಪ್ರಿಯ ಯೂಟ್ಯೂಬ್ ವಿಮರ್ಶಕರು ಸಹ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿದ್ದಾರೆ.

ಇದನ್ನೂ ಓದಿ:‘ಕಾಂತಾರ: ಚಾಪ್ಟರ್ 1’ ನೋಡಿ ಯಶ್, ರಾಧಿಕಾ ಹೇಳಿದ್ದು ಹೀಗೆ

ತೆಲುಗು ರಾಜ್ಯಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ತಂಡವು ಸರ್ಕಾರಗಳಿಂದ ಅನುಮತಿ ಪಡೆದು ಟಿಕೆಟ್ ದರ ಏರಿಸಿಕೊಂಡಿದೆ. ಹೀಗಾಗಿ ಹೈದರಾಬಾದ್​​ನ ಹಲವಾರು ಚಿತ್ರಮಂದಿರಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟಿಕೆಟ್ ದರ 390 ಹಾಗೂ 290 ರೂಪಾಯಿಗಳಿವೆ. ಯಾವುದೋ ಕೇಲವೇ ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಮಾತ್ರವೇ ಟಿಕೆಟ್ ದರ 175-150 ಹಾಗೂ 100 ರೂಪಾಯಿಗಳಿವೆ. ಹಾಗಿದ್ದರೂ ಸಹ ಜನ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ.

ಇನ್ನು ಚೆನ್ನೈನಲ್ಲಿಯೂ ಸಹ ತಮಿಳು ಆವೃತ್ತಿಯನ್ನು ಜನ ಮುಗಿಬಿದ್ದು ನೋಡುತ್ತಿದ್ದಾರೆ. ಬುಕ್ ಮೈ ಶೋ ಮಾಹಿತಿಯಂತೆ ಚೆನ್ನೈನಲ್ಲಿ ಎರಡನೇ ದಿನವೂ ಸಹ ಹಲವು ಶೋಗಳು ಮುಂಗಡವಾಗಿ ಬುಕ್ ಆಗಿವೆ. ಆದರೆ ಮುಂಗಡ ಬುಕಿಂಗ್​​ನಲ್ಲಿ ಬೆಂಗಳೂರು ಬಿಟ್ಟರೆ ಹೈದರಾಬಾದ್ ಮುಂದಿದೆ. ಇನ್ನು ಕೊಚ್ಚಿಯಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ, ಹೈದರಾಬಾದ್, ಚೆನ್ನೈಗೆ ಹೋಲಿಸಿದರೆ ಕಡಿಮೆ ಶೋಗಳು ದೊರಕಿವೆ, ಅಲ್ಲಿ ಚಿತ್ರಮಂದಿರಗಳ ಸಂಖ್ಯೆಯೂ ಕಡಿಮೆ ಇದೆ. ಆದರೆ ಅಲ್ಲಿಯೂ ಸಹ ಜನ ಮುಂಗಡವಾಗಿ ಬುಕ್ ಮಾಡಿಕೊಂಡು ಸಿನಿಮಾ ವೀಕ್ಷಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ
ನೆಲದ ಮೇಲೆ ಕುಳಿತು ಉಪಹಾರ ಸೇವಿಸಿದ ವಿಜಯೇಂದ್ರ
ನೆಲದ ಮೇಲೆ ಕುಳಿತು ಉಪಹಾರ ಸೇವಿಸಿದ ವಿಜಯೇಂದ್ರ