‘ಅವರು ಇಲ್ಲ ಅಂದ್ರೆ ನಾನು ಇಲ್ಲಿ ಇರ್ತಾ ಇರಲಿಲ್ಲ’; ಕಿಚ್ಚನ ಸಹಾಯ ನೆನೆದ ಸೆಲೆಬ್ರಿಟಿಗಳ ವಿಡಿಯೋ ವೈರಲ್ 

| Updated By: ರಾಜೇಶ್ ದುಗ್ಗುಮನೆ

Updated on: Sep 02, 2022 | 9:18 AM

ಕನ್ನಡ ಚಿತ್ರರಂಗದಲ್ಲಿ ಅವರಿಗೆ ಬ್ರೇಕ್ ನೀಡಿದ್ದು ಕಿಚ್ಚ ಸುದೀಪ್ ನಿರ್ದೇಶಿಸಿ, ನಟಿಸಿದ್ದ ‘ಕೆಂಪೇಗೌಡ’ ಸಿನಿಮಾ. ಈ ಸಿನಿಮಾ ತೆರೆಕಂಡ ಬಳಿಕ ಆರ್ಮುಘ ಎಂದೇ ಫೇಮಸ್ ರವಿಶಂಕರ್​ ಅವರು. ಸುದೀಪ್ ಸಹಾಯವನ್ನು ರವಿಶಂಕರ್ ಅನೇಕ ವೇದಿಕೆಗಳಲ್ಲಿ ನೆನಪಿಸಿಕೊಂಡಿದ್ದಾರೆ.

‘ಅವರು ಇಲ್ಲ ಅಂದ್ರೆ ನಾನು ಇಲ್ಲಿ ಇರ್ತಾ ಇರಲಿಲ್ಲ’; ಕಿಚ್ಚನ ಸಹಾಯ ನೆನೆದ ಸೆಲೆಬ್ರಿಟಿಗಳ ವಿಡಿಯೋ ವೈರಲ್ 
ಕಿಚ್ಚನ ಸಹಾಯ ನೆನೆದ ಸೆಲೆಬ್ರಿಟಿಗಳ ವಿಡಿಯೋ ವೈರಲ್ 
Follow us on

ಕಿಚ್ಚ ಸುದೀಪ್ (Kichcha Sudeep) ಅವರು ಓರ್ವ ನಟನಾಗಿ ಮಾತ್ರವಲ್ಲ, ಓರ್ವ ಒಳ್ಳೆಯ ವ್ಯಕ್ತಿಯಾಗಿಯೂ ಎಲ್ಲರಿಗೂ ಇಷ್ಟವಾಗುತ್ತಾರೆ. ಸಿನಿಮಾ ಜತೆಜತೆಗೆ ಹಲವು ಒಳ್ಳೆಯ ಕೆಲಸಗಳ ಮೂಲಕ ಸುದೀಪ್ ಹೆಸರು ಮಾಡಿದ್ದಾರೆ. ಅವರು ಮಾಡಿದ ಕಾರ್ಯಗಳಿಂದ ಅನೇಕ ಕುಟುಂಬಗಳಿಗೆ ಸಹಾಯ ಆಗಿದೆ. ಇದರ ಜತೆಗೆ ಅನೇಕರು ಸ್ಟಾರ್​ ಆಗಿ ಬೆಳೆಯಲು ಸುದೀಪ್ ಸಹಾಯ ಮಾಡಿದ್ದರು. ಇದನ್ನು, ಸೆಲೆಬ್ರಿಟಿಗಳೇ ಅನೇಕ ಬಾರಿ ವೇದಿಕೆಯಲ್ಲಿ ಹೇಳಿಕೊಂಡಿದ್ದಿದೆ. ಇಂದು (ಸೆಪ್ಟೆಂಬರ್ 2) ಕಿಚ್ಚ ಸುದೀಪ್ ಬರ್ತ್​ಡೇ (Kichcha Sudeep Birthday). ಆ ಪ್ರಯುಕ್ತ ಸೆಲೆಬ್ರಿಟಗಳು ಹೇಳಿದ ಮಾತುಗಳ ವಿಡಿಯೋ ಕ್ಲಿಪ್ ಈಗ ಮತ್ತೆ ವೈರಲ್ ಆಗಿದೆ.

‘ಸುದೀಪ್​ ಸರ್ ಇಲ್ಲ ಅಂದ್ರೆ ನಾನು ಇಲ್ಲಿ ನಿಲ್ಲೋಕೆ ಸಾಧ್ಯವೇ ಇರುತ್ತಿರಲಿಲ್ಲ. ಸುದೀಪ್ ಅವರ ಸಿನಿಮಾ ಎಂದಾಗ ನಾನು ನನ್ನ ವೈಯಕ್ತಿಕ ಆಸಕ್ತಿ ತೋರಿಸಿ ಕೆಲಸ ಮಾಡುತ್ತೇನೆ. ಅವರು ನನ್ನ ಗಾಡ್ ಫಾದರ್​’ ಎಂದು ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಈ ಮೊದಲು ಹೇಳಿಕೊಂಡಿದ್ದರು. ರವಿಶಂಕರ್ ಅವರು ಖಳನಾಗಿ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅವರಿಗೆ ಬ್ರೇಕ್ ನೀಡಿದ್ದು ಕಿಚ್ಚ ಸುದೀಪ್ ನಿರ್ದೇಶಿಸಿ, ನಟಿಸಿದ್ದ ‘ಕೆಂಪೇಗೌಡ’ ಸಿನಿಮಾ. ಈ ಸಿನಿಮಾ ತೆರೆಕಂಡ ಬಳಿಕ ಆರ್ಮುಘ ಎಂದೇ ಫೇಮಸ್ ರವಿಶಂಕರ್​ ಅವರು. ಸುದೀಪ್ ಸಹಾಯವನ್ನು ರವಿಶಂಕರ್ ಅನೇಕ ವೇದಿಕೆಗಳಲ್ಲಿ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ
ಸುದೀಪ್ ಬರ್ತ್​ಡೇ: ಮನೆ ಎದುರು ಫ್ಯಾನ್ಸ್ ಸಂಭ್ರಮಾಚರಣೆ ನೋಡಿ ಕೈ ಮುಗಿದು ಧನ್ಯವಾದ ಹೇಳಿದ ಕಿಚ್ಚ
Kichcha Sudeep: ‘ಬಾದ್​​ಶಾ’ ಸುದೀಪ್​ಗೆ ಬರ್ತ್​ಡೇ ಸಂಭ್ರಮ; ಇಷ್ಟು ಯಂಗ್ ಆಗಿ ಕಾಣುವ ಕಿಚ್ಚನಿಗೆ ವಯಸ್ಸೆಷ್ಟು?
ಒಡಿಶಾದ ಬೀಚ್​ನಲ್ಲಿ ಅರಳಿತು ಕಿಚ್ಚ ಸುದೀಪ್​ ಮರಳು ಶಿಲ್ಪ; ಇಲ್ಲಿವೆ ಫೋಟೋಗಳು
ಕಿಚ್ಚ ಸುದೀಪ್ ಬರ್ತ್​​ಡೇಗೆ ಶುರುವಾಯ್ತು ಕೌಂಟ್​ಡೌನ್​; ಶಿವಣ್ಣ ಅನಾವರಣ ಮಾಡಿದ ಕಾಮನ್ ಡಿಪಿ ಹೇಗಿದೆ ನೋಡಿ

‘ನಾನು ಅಲ್ಲಿ-ಇಲ್ಲಿ ಹಾಡು ಹೇಳಿಕೊಂಡಿದ್ದೆ. ನನ್ನನ್ನು ಗುರುತಿಸಿದ್ದು ಸುದೀಪ್. ಕನ್ನಡ ಚಿತ್ರರಂಗದಲ್ಲಿ ನಾನು ಪಯಣ ಮಾಡಿದ್ದೇನೆ ಎಂದರೆ ಅದಕ್ಕೆ ಒಂದು ಮಾರ್ಗ ಹಾಕಿಕೊಟ್ಟಿದ್ದು ಸುದೀಪ್​’ ಎಂದು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಈ ಮೊದಲು ಹೇಳಿಕೊಂಡಿದ್ದರು. ನಿರ್ದೇಶಕ ಎ.ಹರ್ಷ ಕೂಡ ಸುದೀಪ್​ ಅವರ ಅಭಿಮಾನಿ. ‘ನಾನು ಸುದೀಪ್​ ಅವರನ್ನು ಮರೆಯೋಕೆ ಸಾಧ್ಯವೇ ಇಲ್ಲ. ನಾನು ಇಲ್ಲಿ ಕುಳಿತಿದ್ದೇನೆ ಎಂದರೆ ಅದಕ್ಕೆ ಸುದೀಪ್ ಕಾರಣ. ನೂರಾರು ಸಂದರ್ಶನದಲ್ಲಿ ಇದನ್ನು ಹೇಳಿದ್ದೇನೆ. ಮುಂದೆಯೂ ಹೇಳುತ್ತೇನೆ. ಅವರ ಹೆಸರು ಹೇಳದೇ ಸಂದರ್ಶನ ಮುಗಿಸುವುದಿಲ್ಲ’ ಎಂದು ಹರ್ಷ ಈ ಮೊದಲು ಹೇಳಿದ್ದರು.

ಇದನ್ನೂ ಓದಿ: ಸುದೀಪ್ ಬರ್ತ್​ಡೇ: ಮನೆ ಎದುರು ಫ್ಯಾನ್ಸ್ ಸಂಭ್ರಮಾಚರಣೆ ನೋಡಿ ಕೈ ಮುಗಿದು ಧನ್ಯವಾದ ಹೇಳಿದ ಕಿಚ್ಚ

ಅದೇ ರೀತಿ ನಂದ ಕಿಶೋರ್, ತರುಣ್ ಸುಧೀರ್, ಡಾರ್ಲಿಂಗ್ ಕೃಷ್ಣ, ರಕ್ಷಿತಾ ಪ್ರೇಮ್​ ಮೊದಲಾದವರಿಗೂ ಸುದೀಪ್ ಬೆನ್ನೆಲುಬಾಗಿ ನಿಂತಿದ್ದಾರೆ. ಇನ್ನು ಸುದೀಪ್​ ಮಾಡಿದ ಸಾಮಾಜಿಕ ಕೆಲಸಗಳಿಗಂತೂ ಲೆಕ್ಕವೇ ಇಲ್ಲ. ಇದನ್ನು ನೆನಪಿಸಿಕೊಳ್ಳುವ ಕೆಲಸ ಫ್ಯಾನ್ಸ್ ಕಡೆಯಿಂದ ಆಗುತ್ತಿದೆ.