ಆ ರೀತಿಯ ಸಿನಿಮಾಗಳನ್ನು ಮಾಡಲು ಸ್ಟಾರ್​ ಹೀರೋಗಳ ಬಳಿ ಈಗ ಸಾಧ್ಯವೇ ಇಲ್ಲ

| Updated By: ರಾಜೇಶ್ ದುಗ್ಗುಮನೆ

Updated on: Jun 06, 2024 | 8:07 AM

ಕೆಲವು ಹೀರೋಗಳ ಮಾರ್ಕೆಟ್ ಹೆಚ್ಚಿದೆ. ಹೀಗಾಗಿ ಅವರು ತೆಗೆದುಕೊಳ್ಳುವ ಪ್ರಾಜೆಕ್ಟ್ ಕೂಡ ದೊಡ್ಡ ಮಟ್ಟದಲ್ಲೇ ಇರುತ್ತದೆ. ಈ ಸಿನಿಮಾಗಳನ್ನು ಡಬ್ ಮಾಡಲಾಗುತ್ತದೆ. ಇದರಿಂದ ವಿಶ್ವದಲ್ಲಿರೋ ಎಲ್ಲರೂ ಸಿನಿಮಾ ವೀಕ್ಷಿಸಬಹುದು. ಹೀಗೊಂದು ಅಭಿಪ್ರಾಯವನ್ನು ಸತ್ಯರಾಜ್ ಹೊರಹಾಕಿದ್ದಾರೆ.

ಆ ರೀತಿಯ ಸಿನಿಮಾಗಳನ್ನು ಮಾಡಲು ಸ್ಟಾರ್​ ಹೀರೋಗಳ ಬಳಿ ಈಗ ಸಾಧ್ಯವೇ ಇಲ್ಲ
ಆ ರೀತಿಯ ಸಿನಿಮಾಗಳನ್ನು ಮಾಡಲು ಸ್ಟಾರ್​ ಹೀರೋಗಳ ಬಳಿ ಈಗ ಸಾಧ್ಯವೇ ಇಲ್ಲ
Follow us on

ಒಮ್ಮೆ ಕಲಾವಿದರಿಗೆ ಸ್ಟಾರ್ ಪಟ್ಟ ಸಿಕ್ಕರೆ ಮುಗಿಯಿತು. ಅವರು ಮತ್ತೆ ಪ್ರಯೋಗಾತ್ಮಕ ಪಾತ್ರಗಳನ್ನು, ಸಿನಿಮಾಗಳನ್ನು ಮಾಡಲು ಸಾಧ್ಯವಾಗುವುದೇ ಇಲ್ಲ. ಅವರು ಆ ರೀತಿಯ ಪಾತ್ರಗಳನ್ನು ಮಾಡಿದರೂ ಜನರು ಸಿನಿಮಾನ ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ, ಆ ರೀತಿಯ ಸಿನಿಮಾಗಳಲ್ಲಿ ನಟಿಸಲು ಹೀರೋಗಳೂ ಇಷ್ಟಪಡುವುದಿಲ್ಲ, ನಿರ್ಮಾಪಕರೂ ಆಸಕ್ತಿ ತೋರಿಸುವುದಿಲ್ಲ. ಈ ಬಗ್ಗೆ ‘ಬಾಹುಬಲಿ’ (Bahubali)ಯಲ್ಲಿ ‘ಕಟ್ಟಪ್ಪ’ ಪಾತ್ರ ಮಾಡಿದ್ದ ಸತ್ಯರಾಜ್ ಅವರು ಮಾತನಾಡಿದ್ದಾರೆ. ಅವರು ‘ವೆಪನ್’ ಸಿನಿಮಾದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ವೇಳೆ ಅವರು ಹೀರೋಗಳ ಇಂದಿನ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ.

ಸತ್ಯರಾಜ್ ಅವರು ಯಾವುದೇ ರೀತಿಯ ಪಾತ್ರ ಕೊಟ್ಟರೂ ನಟಿಸುತ್ತಾರೆ. ಅವರು ಒಪ್ಪಿಕೊಂಡ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ. ಆದರೆ ಎಲ್ಲಾ ಹೀರೋಗಳಿಗೂ ಹೀಗಾಗುವುದಿಲ್ಲ. ‘ಕೆಲವು ಹೀರೋಗಳ ಮಾರ್ಕೆಟ್ ಹೆಚ್ಚಿದೆ. ಹೀಗಾಗಿ ಅವರು ತೆಗೆದುಕೊಳ್ಳುವ ಪ್ರಾಜೆಕ್ಟ್ ಕೂಡ ದೊಡ್ಡ ಮಟ್ಟದಲ್ಲೇ ಇರುತ್ತದೆ. ಈ ಸಿನಿಮಾಗಳನ್ನು ಡಬ್ ಮಾಡಲಾಗುತ್ತದೆ. ಇದರಿಂದ ವಿಶ್ವದಲ್ಲಿರೋ ಎಲ್ಲರೂ ಸಿನಿಮಾ ವೀಕ್ಷಿಸಬಹುದು. ಅವರು ತಮ್ಮನ್ನು ತಾವು ನಿರ್ಬಂಧಿಸಿಕೊಳ್ಳುವುದು ಕಡ್ಡಾಯ ಎಂಬ ರೀತಿ ಆಗಿಬಿಡುತ್ತದೆ’ ಎಂದಿದ್ದಾರೆ ಸತ್ಯರಾಜ್.

ದಳಪತಿ ವಿಜಯ್ ಹಾಗೂ ಪ್ರಭಾಸ್ ಅವರ ಉದಾಹರಣೆಯನ್ನು ಸತ್ಯರಾಜ್ ತೆಗೆದುಕೊಂಡಿದ್ದಾರೆ. ‘ವಿಜಯ್ ಅವರು ಲವ್ ಟುಡೆ, ಕಡಲುಕ್ಕು ಮರಿಯಧೈ ರೀತಿಯ ಸಿನಿಮಾ ಮಾಡಿದ್ದಾರೆ. ಅವುಗಳು ಯಶಸ್ಸು ಕಂಡಿವೆ. ಅವರು ಈಗ ದೊಡ್ಡ ಸ್ಟಾರ್​. ಉದ್ಯಮ ಬೆಳೆದಿದೆ. ಅವರು ಮತ್ತೆ ಈ ರೀತಿಯ ಸಿನಿಮಾ ಮಾಡಲು ಸಾಧ್ಯವಿಲ್ಲ. ಪ್ರಭಾಸ್ ಕೂಡ ಸಾಕಷ್ಟು ರೊಮ್ಯಾಂಟಿಕ್ ಸಿನಿಮಾ ಮಾಡಿದ್ದಾರೆ. ಬಾಹುಬಲಿ ಬಳಿಕ ಅವರು ದೊಡ್ಡ ದೊಡ್ಡ ಪಾತ್ರಗಳನ್ನು ಮಾತ್ರ ಮಾಡಬೇಕಿದೆ. ಇಂದಿನ ಸಿನಿಮಾ ಜಗತ್ತು ಆ ರೀತಿ ಆಗಿದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಪ್ಯಾನ್ ಇಂಡಿಯಾ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ’; ನೇರ ಮಾತಲ್ಲಿ ಹೇಳಿದ ರಿಷಬ್ ಶೆಟ್ಟಿ

ಕನ್ನಡದಲ್ಲಿ ರಿಷಬ್ ಶೆಟ್ಟಿ, ಯಶ್​ ಕೂಡ ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ‘ಕಿರಾತಕ’, ‘ಗೂಗ್ಲಿ’ ರೀತಿಯ ಸಿನಿಮಾ ಕೊಟ್ಟವರು ಯಶ್. ‘ಕೆಜಿಎಫ್’ ಬಳಿಕ ಅವರನ್ನು ನೋಡುವ ರೀತಿ ಬದಲಾಗಿದೆ. ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ಅದೇ ರೀತಿಯ ಸಿನಿಮಾ ನಿರೀಕ್ಷಿಸುತ್ತಾರೆ. ‘ಬೆಲ್ ಬಾಟಂ’ ರೀತಿಯ ಸಿನಿಮಾ ಕೊಟ್ಟವರು ರಿಷಬ್ ಶೆಟ್ಟಿ. ‘ಕಾಂತಾರ’ದಿಂದ ಸ್ಟಾರ್​ಗಿರಿ ಹೆಚ್ಚಿದೆ. ಹೀಗಾಗಿ, ಅದೇ ರೀತಿಯ ಸಿನಿಮಾ ಮಾಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:06 am, Thu, 6 June 24