
ಟಾಲಿವುಡ್‌ನಲ್ಲಿ ಯಾವುದೇ ಒಬ್ಬ ನಟನ ಸಿನಿಮಾ ತೆರೆಕಂಡರೂ ಅಲ್ಲಿನ ಅಗ್ರ ನಟರು ಹಾಗೂ ತಂತ್ರಜ್ಞರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ, ಶುಭ ಹಾರೈಸಿ ಪರಸ್ಪರ ಬೆಂಬಲವಾಗಿ ನಿಲ್ಲುವುದು ಸಂಪ್ರದಾಯವಾಗಿದೆ. ಇತ್ತೀಚೆಗೆ ರವಿತೇಜ ಅಭಿನಯದ ‘ಇರುಮುಡಿ’ ಚಿತ್ರ ಯಶಸ್ಸು ಕಂಡಾಗ ರಾಮ್ ಚರಣ್ ಸೇರಿದಂತೆ ಪ್ರಮುಖ ಸ್ಟಾರ್‌ಗಳು ಬಹಿರಂಗವಾಗಿ ಬೆಂಬಲ ಸೂಚಿಸಿ ಪ್ರೋತ್ಸಾಹಿಸಿದರು. ಆದರೆ, ಕನ್ನಡದ ನಟ ಯಶ್ ಅವರ ಪ್ಯಾನ್-ವರ್ಲ್ಡ್ ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ (Toxic Movie) ವಿಚಾರದಲ್ಲಿ ಸ್ಯಾಂಡಲ್‌ವುಡ್ ನಟರ ಮೌನ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಆಗಮಿಸಿ ಯಶ್ ಅವರಿಗೆ ವಿಶ್ ಮಾಡಿ ಪ್ರೀತಿ ತೋರಿದ್ದು ಬಿಟ್ಟರೆ, ಕನ್ನಡದ ಮತ್ಯಾವ ಪ್ರಮುಖ ನಟರೂ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕನಿಷ್ಠ ಒಂದು ಪೋಸ್ಟ್ ಹಾಕದಿರುವುದು ಅಥವಾ ಸಾರ್ವಜನಿಕವಾಗಿ ಬೆಂಬಲಿಸದಿರುವುದು ಈಗ ಚರ್ಚೆಗೆ ಕಾರಣ ಆಗಿದೆ. ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಇರೋದು ಮತ್ತೊಮ್ಮೆ ಸ್ಪಷ್ಟವಾಗಿದೆ.
Congratulations @RaviTeja_offl garu and the entire #Irumudi team on this massive success.
Wonderful to see the love and response the film is receiving. Ravi Teja garu and the entire team deserve all the appreciation for their hard work.
Wishing @ShivaNirvana garu, @gvprakash,…
— Ram Charan (@AlwaysRamCharan) August 26, 2026
I haven’t watched #Irumudi yet. I’m aware it has garnered good reviews.
More importantly, it amazing to see so many in the Telugu Film Industry coming out and appreciating it.A lesson to learn?
— Kairam Vaashi (@kairamvaashi) August 27, 2026
ಇತರ ಚಿತ್ರರಂಗಗಳಲ್ಲಿ ಒಬ್ಬ ನಟನ ಸಿನಿಮಾ ಗೆದ್ದರೆ ಅದು ಇಡೀ ಇಂಡಸ್ಟ್ರಿಯ ಗೆಲುವು ಎಂದು ಸಂಭ್ರಮಿಸಲಾಗುತ್ತದೆ. ಆದರೆ ಸ್ಯಾಂಡಲ್‌ವುಡ್‌ನಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಕನ್ನಡದ ಬಾವುಟ ಹಾರಿಸುತ್ತಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಸೂಕ್ತ ಬೆಂಬಲ ಸಿಗದಿರುವುದು ಕನ್ನಡ ಚಿತ್ರರಂಗದ ಆಂತರಿಕ ಒಗ್ಗಟ್ಟಿನ ಕೊರತೆಯನ್ನು ಎತ್ತಿ ತೋರಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ಎರಡನೇ ದಿನವೂ ಅಬ್ಬರಿಸಿದ ‘ಟಾಕ್ಸಿಕ್’; ಭರ್ಜರಿ ಗಳಿಕೆ ಮಾಡಿದ ಯಶ್ ಸಿನಿಮಾ
ಕನ್ನಡ ಸಿನಿಮಾವೊಂದು ವಿಶ್ವದಾದ್ಯಂತ 190 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆಯುತ್ತಿರುವಾಗ, ನಮ್ಮದೇ ರಂಗದ ನಟ-ನಟಿಯರು ಮೌನ ವಹಿಸಿರುವುದು ಅಭಿಮಾನಿಗಳಲ್ಲಿ ಮತ್ತು ಚಿತ್ರಪ್ರೇಮಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಬೇರೆ ಭಾಷೆಯ ಚಿತ್ರರಂಗದಲ್ಲಿ ಸ್ಟಾರ್ಸ್ ತಮ್ಮ ಸಿನಿಮಾಗಳ ಜೊತೆ ಇತರ ನಟರ ಪ್ರಮೋಟ್ ಮಾಡಲು ತೋರುವ ಉತ್ಸಾಹ ಮತ್ತು ಪರಸ್ಪರ ಬೆಂಬಲಿಸುವ ಮನೋಭಾವ, ಕನ್ನಡ ಚಿತ್ರರಂಗದಲ್ಲಿ ‘ಟಾಕ್ಸಿಕ್’ ವಿಷಯದಲ್ಲಿ ಕಾಣದಿರುವುದು ದುರದೃಷ್ಟಕರ ಎಂಬ ವಿಮರ್ಶೆ ಸ್ಯಾಂಡಲ್‌ವುಡ್ ಅಂಗಳದಲ್ಲಿ ಜೋರಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.