ಯಶ್ ‘ಟಾಕ್ಸಿಕ್’ ಚಿತ್ರದ ಗಳಿಕೆ ಎಷ್ಟು ಕೋಟಿ ರೂಪಾಯಿ? 400 ಕೋಟಿ ಕಲೆಕ್ಷನ್ ಅನುಮಾನ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಂಟನೇ ದಿನಕ್ಕೆ ತೀವ್ರ ಹಿನ್ನಡೆ ಅನುಭವಿಸಿದೆ. ಕೇವಲ 5.10 ಕೋಟಿ ರೂಪಾಯಿ ಗಳಿಸುವ ಮೂಲಕ ಚಿತ್ರತಂಡಕ್ಕೆ ಆತಂಕ ತಂದೊಡ್ಡಿದೆ. ಎರಡನೇ ವೀಕೆಂಡ್‌ನಲ್ಲಿ ಗಳಿಕೆ ಚೇತರಿಸಿಕೊಳ್ಳದಿದ್ದರೆ, ಈ ಸಿನಿಮಾ 400 ಕೋಟಿ ರೂಪಾಯಿ ಕ್ಲಬ್ ಸೇರುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.

ಯಶ್ ‘ಟಾಕ್ಸಿಕ್’ ಚಿತ್ರದ ಗಳಿಕೆ ಎಷ್ಟು ಕೋಟಿ ರೂಪಾಯಿ? 400 ಕೋಟಿ ಕಲೆಕ್ಷನ್ ಅನುಮಾನ?
ಟಾಕ್ಸಿಕ್ ಸಿನಿಮಾ
Image Credit source: Toxic Movie

Updated on: Sep 03, 2026 | 7:32 AM

ಮುಖ್ಯಾಂಶಗಳು

  • ಅದ್ದೂರಿ ಆರಂಭಕ್ಕೆ ಬಿತ್ತು ದಿಢೀರ್ ಬ್ರೇಕ್
  • ಗಳಿಕೆಯಲ್ಲಿ ಭಾರೀ ಕುಸಿತ
  • ಎಂಟನೇ ದಿನಕ್ಕೆ ಕೇವಲ 5 ಕೋಟಿ ರೂಪಾಯಿ

ಮೊದಲ ದಿನವೇ 150 ಕೋಟಿ ರೂಪಾಯಿ ಗಳಿಸಿ ದಾಖಲೆಯ ಅದ್ದೂರಿ ಆರಂಭ ಪಡೆದಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ (Toxic Movie) ಕಲೆಕ್ಷನ್, ಎಂಟನೇ ದಿನಕ್ಕೆ ಬಂದಾಗ ಭಾರಿ ಹಿನ್ನಡೆ ಕಂಡಿತ್ತು. ನಂತರ ಸಿನಿಮಾದ ಗಳಿಕೆ ಕುಗ್ಗುತ್ತಲೇ ಹೋಯಿತು. ಈಗ 8ನೇ ದಿನ ಅಂದರೆ ಸೆಪ್ಟೆಂಬರ್ 2ರಂದು ಕೇವಲ 5 ಕೋಟಿ ರೂಪಾಯಿ ಗಳಿಕೆ ಮಾತ್ರ ಕಂಡಿದೆ. ಇದು ತಂಡದ ಹಾಗೂ ಅಭಿಮಾನಿಗಳ ಆತಂಕಕ್ಕೆ ಕಾರಣ ಆಗಿದೆ.

ಸ್ಯಾಸ್​ನಿಲ್ಕ್ ನೀಡಿದ ಕಲೆಕ್ಷನ್ ಮಾಹಿತಿ ಪ್ರಕಾರ, ‘ಟಾಕ್ಸಿಕ್’ ಎರಡನೇ ದಿನಕ್ಕೆ 37.65 ಕೋಟಿ ರೂಪಾಯಿ, ಮೂರನೇ ದಿನಕ್ಕೆ 27.20 ಕೋಟಿ ರೂಪಾಯಿ ಗಳಿಸಿತ್ತು. ಮೊದಲ ವಾರಾಂತ್ಯದ ಶನಿವಾರ 25.15 ಕೋಟಿ ರೂಪಾಯಿ ಹಾಗೂ ಭಾನುವಾರ 23.00 ಕೋಟಿ ರೂಪಾಯಿ ಗಳಿಸುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಚೇತರಿಕೆ ಕಾಯ್ದುಕೊಂಡಿತ್ತು.

ವಾರದ ದಿನಗಳು ಶುರುವಾಗುತ್ತಿದ್ದಂತೆಯೇ ಚಿತ್ರದ ಕಲೆಕ್ಷನ್ ತೀವ್ರವಾಗಿ ಕುಸಿದಿದೆ. ಸೋಮವಾರ 7.65 ಕೋಟಿ ರೂಪಾಯಿ ಹಾಗೂ ಮಂಗಳವಾರ 7.85 ಕೋಟಿ ರೂಪಾಯಿ ಗಳಿಸಿದ್ದ ‘ಟಾಕ್ಸಿಕ್’, ಎಂಟನೇ ದಿನ ಅಂದರೆ ಬುಧವಾರದ ವೇಳೆಗೆ ಕೇವಲ 12,432 ಪ್ರದರ್ಶನಗಳಿಂದ ಬರಿ 5.10 ಕೋಟಿ ರೂಪಾಯಿಗೆ ಬಂದು ತಲುಪಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ರಿಲೀಸ್ ಆಗಿ ಒಂದು ವಾರ; 7 ದಿನಕ್ಕೆ ಯಶ್ ಸಿನಿಮಾ ಗಳಿಸಿದ್ದೆಷ್ಟು?

ಹೀಗೆ ಚಿತ್ರದ ಗಳಿಕೆ ಏಕಾಏಕಿ 5 ಕೋಟಿ ರೂಪಾಯಿಗೆ ಇಳಿದಿರೋದು ಚಿತ್ರತಂಡದವರಲ್ಲಿ ತೀವ್ರ ಆತಂಕ ಮೂಡಿಸಿದೆ. ಮೊದಲ ದಿನದ ಗಳಿಕೆಗೆ ಹೋಲಿಸಿದರೆ ಎಂಟನೇ ದಿನಕ್ಕೆ ಪ್ರದರ್ಶನಗಳ ಸಂಖ್ಯೆ ಅರ್ಧಕ್ಕರ್ಧ ಕಡಿಮೆಯಾಗಿದ್ದು, ಸಿನಿಮಾದ ಬಾಕ್ಸ್ ಆಫೀಸ್ ಆಯುಷ್ಯ ಹಾಗೂ ಕ್ರೇಜ್ ಕ್ಷೀಣಿಸುತ್ತಿರುವ ಸ್ಪಷ್ಟ ಸೂಚನೆ ನೀಡುತ್ತಿದೆ. ಚಿತ್ರಮಂದಿರಗಳಲ್ಲಿ ಆಕ್ಯುಪೆನ್ಸಿ ಕೂಡ ಗಮನಾರ್ಹವಾಗಿ ತಗ್ಗಿದ್ದು, ಪ್ರೇಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ವಿರಳವಾಗುತ್ತಿದೆ. ಮುಂಬರುವ ಈ ಎರಡನೇ ವೀಕೆಂಡ್‌ನಲ್ಲಿ ಸಿನಿಮಾ ಚೇತರಿಸಿಕೊಂಡು ಉತ್ತಮ ಕಲೆಕ್ಷನ್ ಮಾಡದೇ ಇದ್ದರೆ, ಚಿತ್ರ 400 ಕೋಟಿ ರೂಪಾಯಿ ಗಳಿಸೋದು ಬಹುತೇಕ ಅನುಮಾನ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:02 am, Thu, 3 September 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us