‘ಟಾಕ್ಸಿಕ್’ ಸಿನಿಮಾದ ಮತ್ತೊಂದು ಸಾಂಗ್​​ ರಿಲೀಸ್​​ಗೆ ಕೌಂಟ್​​ಡೌನ್; ಈ ಬಾರಿಯೂ ರೊಮ್ಯಾಂಟಿಕ್ ಹಾಡು

‘ಟಾಕ್ಸಿಕ್’ ಸಿನಿಮಾದ ಬ್ಯಾಕ್-ಟು-ಬ್ಯಾಕ್ ರೊಮ್ಯಾಂಟಿಕ್ ಹಾಡುಗಳ ಯಶಸ್ಸಿನ ಬೆನ್ನಲ್ಲೇ ಈಗ ಮೂರನೇ ಸಾಂಗ್ ರಿಲೀಸ್‌ಗೆ ಕೌಂಟ್​​ಡೌನ್ ಶುರುವಾಗಿದೆ. ಗ್ಯಾಂಗ್‌ಸ್ಟರ್ ಹಿನ್ನೆಲೆಯ ಈ ಚಿತ್ರದಲ್ಲಿ ಯಶ್ ಹಾಗೂ ಕಿಯಾರಾ ಅಡ್ವಾಣಿ ಕಾಂಬಿನೇಷನ್‌ನ ಮತ್ತೊಂದು ಪ್ರಣಯ ಗೀತೆ ವಿಶಾಲ್ ಮಿಶ್ರಾ ಸಂಗೀತದಲ್ಲಿ ಮೂಡಿಬರಲಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

‘ಟಾಕ್ಸಿಕ್’ ಸಿನಿಮಾದ ಮತ್ತೊಂದು ಸಾಂಗ್​​ ರಿಲೀಸ್​​ಗೆ ಕೌಂಟ್​​ಡೌನ್; ಈ ಬಾರಿಯೂ ರೊಮ್ಯಾಂಟಿಕ್ ಹಾಡು
ಕಿಯಾರಾ-ಯಶ್

Updated on: Jul 25, 2026 | 2:52 PM

ಮುಖ್ಯಾಂಶಗಳು

  • ಬ್ಯಾಕ್-ಟು-ಬ್ಯಾಕ್ ರೊಮ್ಯಾಂಟಿಕ್ ಕಿಕ್
  • 'ಟಾಕ್ಸಿಕ್' ಅಭಿಮಾನಿಗಳ ಊಹೆ ಉಲ್ಟಾ
  • ವಿಶಾಲ್ ಮಿಶ್ರಾ ಮ್ಯೂಸಿಕ್ ಮ್ಯಾಜಿಕ್

‘ಟಾಕ್ಸಿಕ್’ ಸಿನಿಮಾದ (Toxic Movie)  ‘ತಬಾಹಿ..’ ಹಾಗೂ ‘ಮನಮೋಹಕ..’ ಹಾಡು ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈಗ ಮೂರನೇ ಸಾಂಗ್ ರಿಲೀಸ್​​ಗೆ ಕೌಂಟ್​​ಡೌನ್ ಶುರುವಾಗಿದೆ. ಈ ಬಾರಿಯೂ ರೊಮ್ಯಾಂಟಿಕ್ ಸಾಂಗ್ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಾ ಇದೆ. ವಿಶಾಲ್ ಮಿಶ್ರಾ ಸಂಗೀತ ಸಂಯೋಜನೆಯಲ್ಲಿ ಈ ಹೊಸ ಹಾಡು ತೆರೆಗೆ ಬರಲಿದೆ ಅನ್ನೋದು ವಿಶೇಷ.

‘ಟಾಕ್ಸಿಕ್’ ಸಿನಿಮಾ ಗ್ಯಾಂಗ್​ಸ್ಟರ್ ಸಿನಿಮಾ. ಇದರಲ್ಲಿ ಡ್ರಗ್ಸ್ ಕಥೆ ಇದೆ. ಅಂದರೆ ಸಿನಿಮಾದಲ್ಲಿ ಮಾಸ್ ಹಾಡುಗಳು ಹೆಚ್ಚಿರಬಹುದು ಎಂಬುದು ಅಭಿಮಾನಿಗಳ ಊಹೆ ಆಗಿತ್ತು. ಆದರೆ, ಆ ಊಹೆ ತಪ್ಪಾಗಿದೆ. ಈಗ ರಿಲೀಸ್ ಆಗಿರೋ ಎರಡು ಹಾಡುಗಳು ರೊಮ್ಯಾಂಟಿಕ್ ಶೈಲಿಯಲ್ಲಿವೆ. ಮೂರನೇ ಹಾಡು ಕೂಡ ರೊಮ್ಯಾಂಟಿಕ್ ಶೈಲಿಯಲ್ಲೇ ಇರಲಿದೆಯಂತೆ.

ಕಿಯಾರಾ ಹಾಗೂ ಯಶ್ ಲವ್ ಸ್ಟೋರಿ ‘ಟಾಕ್ಸಿಕ್’ ಚಿತ್ರದ ಹೈಲೈಟ್ ಎನ್ನುವ ಮಾತು ಕೇಳಿ ಬಂದಿದೆ. ಈಗಾಗಲೇ ಯಶ್ ಹಾಗೂ ಕಿಯಾರಾ ಪ್ರಣಯವನ್ನು ಸೆರೆಹಿಡಿಯುವ ಗೀತೆ ರಿಲೀಸ್ ಆಗಿದೆ. ಈಗ ರಿಲೀಸ್ ಆಗೋ ಹಾಡು ಕೂಡ ಕಿಯಾರಾ ಹಾಗೂ ಯಶ್ ಕಾಂಬಿನೇಷನ್ ಅಲ್ಲೇ ಮೂಡಿ ಬರಲಿದೆ ಎಂದು ವರದಿ ಆಗಿದೆ.

‘ಟಾಕ್ಸಿಕ್’ ಚಿತ್ರದಲ್ಲಿ ಒಟ್ಟೂ ಆರು ಹಾಡುಗಳು ಇರಲಿವೆ ಎನ್ನಲಾಗಿದೆ. ವಿಶಾಲ್ ಮಿಶ್ರಾ ಅವರ ಸಂಗೀತ ಸಂಯೋಜನೆಯಲ್ಲಿ ನಾಲ್ಕು ಮಧುರವಾದ ಹಾಡುಗಳು ಮೂಡಿ ಬಂದಿವೆ. ತನಿಷ್ಕ್ ಬಾಗ್ಚಿ ಅವರು ಫಹೀಮ್ ಅಬ್ದುಲ್ಲಾ ಮತ್ತು ಅಸ್ಲಾನ್ ನಿಜಾಮಿ ಅವರೊಂದಿಗೆ ಸೇರಿ ಒಂದು ವಿಶೇಷವಾದ ಹಾಡನ್ನು ಸಂಯೋಜಿಸಿದ್ದಾರೆ. ರವಿ ಬಸ್ರೂರು ಅವರು ಚಿತ್ರದ ಹಿನ್ನೆಲೆ ಸಂಗೀತವನ್ನು ಸಂಪೂರ್ಣವಾಗಿ ನಿರ್ವಹಿಸುವುದರ ಜೊತೆಗೆ, ಒಂದು ಹೈ-ಎನರ್ಜಿ ಹಾಡನ್ನು ಕೂಡ ಸಂಯೋಜಿಸಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’: ‘ಮನಮೋಹಕ’ ಹಾಡಿನಲ್ಲಿ ‘ಕಿರಾತಕ’ನ ಹುಡುಕಿದ ಅಭಿಮಾನಿಗಳು

‘ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್​ದಾಸ್ ನಿರ್ದೇಶನ ಇದೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್ ಮೊದಲಾದವರು ನಟಿಸಿದ್ದಾರೆ. ಆಗಸ್ಟ್ 26ಕ್ಕೆ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us