ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಯುಐ’ ಇಂದು (ಡಿಸೆಂಬರ್ 20) ರಿಲೀಸ್ ಆಗಿದೆ. ಉಪೇಂದ್ರ ಅವರ ನಿರ್ದೇಶನ ಎಂಬ ಒಂದೇ ಕಾರಣದಿಂದ ಚಿತ್ರಕ್ಕೆ ಹೆಚ್ಚು ಹೈಪ್ ಸಿಕ್ಕಿದೆ. ಮುಂಜಾನೆಯೇ ಅನೇಕ ಶೋಗಳು ಹೌಸ್ಫುಲ್ ಆಗಿವೆ. ಆ ಮೂಲಕ ‘ಯುಐ’ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಕ್ಕಿದೆ. ಎಂದಿನಂತೆ ತಮ್ಮ ಬುದ್ಧಿವಂತಿಕೆ ಮೂಲಕ ಉಪೇಂದ್ರ ಅವರು ಪ್ರೇಕ್ಷಕರ ಮೆದುಳಿಗೆ ಕೈ ಹಾಕಿದ್ದಾರೆ. ಸಿನಿಮಾ ನೋಡಿ ಚಿತ್ರಮಂದಿರದಿಂದ ಹೊರಗೆ ಬಂದಿರುವ ಪ್ರೇಕ್ಷಕರು ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ. ಕೆಲವರಿಗೆ ಸಿನಿಮಾ ಇಷ್ಟ ಆಗಿದೆ. ಇನ್ನೂ ಕೆಲವರಿಗೆ ಪೂರ್ತಿಯಾಗಿ ಅರ್ಥ ಆಗಿಲ್ಲ. ಇನ್ನೊಮ್ಮೆ ನೋಡಬೇಕು ಎನ್ನುವ ಪ್ರೇಕ್ಷಕರು ಕೂಡ ಇದ್ದಾರೆ.
ಆರಂಭದಲ್ಲೇ ಉಪೇಂದ್ರ ಶಾಕ್ ನೀಡಿದ್ದಾರೆ. ‘ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದೋಗಿ’ ಎಂದು ಹೇಳುವ ಮೂಲಕ ಜನರನ್ನು ಕನ್ಫ್ಯೂಸ್ ಮಾಡಿಸುತ್ತಾರೆ. ಟಿಕೆಟ್ಗೆ ದುಡ್ಡು ಕೊಟ್ಟು ಬಂದ ಪ್ರೇಕ್ಷಕರನ್ನು ಎದ್ದು ಹೋಗಿ ಅಂತ ಹೇಳಿದ್ದಕ್ಕೆ ಪ್ರೇಕ್ಷಕರಿಗೆ ಶಾಕ್ ಆಗಿದೆ. ಈ ವಿಷಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
When you paid 250/- for a ticket to watch UI movie and you see this on screen before the start of the movie 🤯😂#UiTheMovie #Upendra pic.twitter.com/avCXY0wNJP
— Akshay achar (@akshayachar03) December 20, 2024
ಉಪೇಂದ್ರ ಅವರ ಅಪ್ಪಟ ಅಭಿಮಾನಿಗಳು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಮೊದಲ ಬಾರಿಗೆ ಅರ್ಥ ಆಗದೇ ಇದ್ದರೂ ಪರವಾಗಿಲ್ಲ. ಎರಡನೇ ಸಲ ಸಿನಿಮಾ ನೋಡುವುದಾಗಿ ಅನೇಕರು ಹೇಳಿದ್ದಾರೆ.
𝐑𝐞𝐚𝐥 𝐬𝐭𝐚𝐫 is back 🤠📽️
A movie with real Massive content 🧠😌
Review ಹೇಳೋಕೆ ಆಗ್ದೇ ಇರೊ ಅಂತ ಮೂವಿ ಅಂದ್ರೆ Review ಗಿಂತ Reality ಮುಖ್ಯ ಅದುನ್ನ ಅರ್ಥ ಮಾಡಿಕೊಳ್ಳಬೇಕು ಒಂದು ಸಲಿ ಮೂವಿ ನೋಡಿ ನಿಮಗೆ ಗೊತ್ತಾಗುತ್ತೆ, ಈ ಮೂವಿ ಸೋಲೊಕೆ ಸಾಧ್ಯನೆ ಇಲ್ಲ ಸೋಲ್ತು ಅಂದ್ರೆ ಸೋತಿದ್ದು ಮೂವಿ ಅಲ್ಲ ನಾವು.🫵🏻#UiTheMovie pic.twitter.com/jX0cgIQxBg— Krishna 💙 (@krishnaradhe14u) December 20, 2024
‘ವಿಮರ್ಶೆ ಹೇಳೋಕೆ ಆಗ್ದೇ ಇರುವಂತಹ ಮೂವೀ ಅಂದ್ರೆ ವಿಮರ್ಶೆಗಿಂತ ರಿಯಾಲಿಟಿ ಮುಖ್ಯ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ಸಲಿ ಮೂವೀ ನೋಡಿ ನಿಮಗೆ ಗೊತ್ತಾಗುತ್ತೆ. ಈ ಮೂವೀ ಸೋಲೋಕೆ ಸಾಧ್ಯನೇ ಇಲ್ಲ. ಸೋಲ್ತು ಅಂದ್ರೆ ಸೋತಿದ್ದು ಮೂವೀ ಅಲ್ಲ, ನಾವು’ ಎಂದು ಅಭಿಮಾನಿಯೊಬ್ಬರು ಪೋಸ್ಟ್ ಮಾಡಿದ್ದಾರೆ.
ಈ ಸಿನಿಮಾ ನೋಡಿ ನಾವು Review ಮಾಡೋದಲ್ಲ
ಈ ಸಿನಿಮಾ ನಮ್ಮನ್ನ ನೋಡಿ Review ಮಾಡುತ್ತೆUI is not a Movie
It’s a thought of HumansNeed high level Universal Intelligence to decode each and every things #UITheMovie #UiTheMovieReview @nimmaupendra pic.twitter.com/wiDEQwvW0W
— 𝗦𝗵𝗿𝗲𝘆𝗶 ᵀᵒˣᶦᶜ (@NameIsShreyash) December 20, 2024
ಈ ಸಿನಿಮಾದಲ್ಲಿ ರೀಷ್ಮಾ ನಾಣಯ್ಯ, ರವಿಶಂಕರ್, ಅಚ್ಯುತ್ ಕುಮಾರ್, ಸಾಧು ಕೋಕಿಲ ಮುಂತಾದವರು ನಟಿಸಿದ್ದಾರೆ. ಅಜನೀಶ್ ಬಿ. ಲೋಕನಾಥ್ ಸಂಗೀತ ನೀಡಿದ್ದಾರೆ. ಕನ್ನಡದ ಜತೆಗೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಯಲ್ಲೂ ಸಿನಿಮಾ ಬಿಡುಗಡೆ ಆಗಿದೆ.
Show completed ✅ #Upendra one man show 🔥💥
Movie li inna swalpa swalpa doubts ide as usual uppi direction movie andre 1 time alli artha agalla, innomme nodbeku 🤞
2024 HGOTY #UiTheMovie 💯@nimmaupendra @KvnProductions https://t.co/mdWIleNkOF
— 𝐒𝐮𝐩𝐫𝐞𝐦𝐞 ♛ (@Supreme7999) December 20, 2024
ಯುಐ ಸಿನಿಮಾ ಪೂರ್ತಿಯಾಗಿ ಅರ್ಥ ಆಗದೇ ಇದ್ದರೂ ಪರವಾಗಿಲ್ಲ, ಕೊನೇ ಪಕ್ಷ ಡಿಫರೆಂಟ್ ಆಗಿದೆ ಎಂದು ಕೂಡ ಕೆಲವು ಪ್ರೇಕ್ಷಕರು ಖುಷಿಪಟ್ಟಿದ್ದಾರೆ. ಇಡೀ ಸಿನಿಮಾ ಉಪೇಂದ್ರ ಅವರ ಒನ್ ಮ್ಯಾನ್ ಶೋ ರೀತಿ ಇದೆ. ದ್ವಿಪಾತ್ರದಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ತೋರಿಸಿರುವ ಎಷ್ಟೋ ವಿಚಾರಗಳು ಜನರಿಗೆ ಅನೇಕ ವರ್ಷಗಳ ಬಳಿಕ ಅರ್ಥ ಆಗಬಹುದು ಎಂದು ಕೂಡ ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.