UI Teaser: ರಿಲೀಸ್ ಆಯ್ತು ‘UI’ ಚಿತ್ರದ ಫಸ್ಟ್ ಲುಕ್ ಟೀಸರ್; ಹೇಗಿದೆ ನೋಡಿ ಉಪ್ಪಿ ಜಗತ್ತು
ಉಪೇಂದ್ರ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಈಗ ಅವರು ಹಲವು ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ್ದಾರೆ. ಈ ಕಾರಣದಿಂದ ನಿರೀಕ್ಷೆ ಸೃಷ್ಟಿ ಆಗಿದೆ.
ಉಪೇಂದ್ರ (Upendra) ಅವರ ನಿರ್ದೇಶನದ ಸಿನಿಮಾಗಳು ಎಂದರೆ ಭಿನ್ನವಾಗಿರುತ್ತವೆ. ಈ ಕಾರಣದಿಂದಲೇ ‘UI’ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ಟೀಸರ್ ಅನ್ನು ಶಿವರಾಜ್ಕುಮಾರ್ ರಿಲೀಸ್ ಮಾಡಿದ್ದಾರೆ. ಟಾಲಿವುಡ್ ನಿರ್ಮಾಪಕ ಅಲ್ಲು ಅರವಿಂದ್ ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಈ ಟೀಸರ್ ಗಮನ ಸೆಳೆಯುತ್ತಿದೆ. ಟ್ವಿಟರ್ನಲ್ಲಿ ಕಿಚ್ಚ ಸುದೀಪ್ ಅವರು ಈ ಟೀಸರ್ ಬಿಡುಗಡೆ ಮಾಡಿದ್ದಾರೆ.
ಉಪೇಂದ್ರ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಈಗ ಅವರು ಹಲವು ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ್ದಾರೆ. ಈ ಕಾರಣದಿಂದ ನಿರೀಕ್ಷೆ ಸೃಷ್ಟಿ ಆಗಿದೆ. ಉಪೇಂದ್ರ ಅವರು ಕುದುರೆ ಏರಿ ಬರುತ್ತಾರೆ. ಈ ಸಿನಿಮಾದಲ್ಲಿ ಸಾಧು ಕೋಕಿಲ ಹಾಗೂ ರವಿ ಶಂಕರ್ ಪಾತ್ರಗಳು ಕೂಡ ಗಮನ ಸೆಳೆದಿವೆ. ‘ಇದು ಎಐ ಜಗತ್ತಲ್ಲ. ಇದು ಯುಐ ಜಗತ್ತು’ ಎಂದು ಹೇಳುವ ಲೈನ್ ಗಮನ ಸೆಳೆದಿದೆ.
ಇದನ್ನೂ ಓದಿ: ‘ಯುಐ’ ಸಿನಿಮಾದಲ್ಲಿ ಎಷ್ಟು ಪರ್ಸೆಂಟ್ ಗ್ರಾಫಿಕ್ಸ್ ಇರಲಿದೆ? ಸತ್ಯ ಹೇಳಿದ ಉಪೇಂದ್ರ
𝐖𝐞𝐥𝐜𝐨𝐦𝐞 𝐓𝐨 𝐓𝐡𝐞 𝐖𝐨𝐫𝐥𝐝 𝐨𝐟 #UITheMovie Best wishes to #UppiSir & the entire team 🤩https://t.co/uKybJWrTr2#UITheMovieFirstLook @nimmaupendra #GManoharan @Laharifilm @enterrtainers @kp_sreekanth @AJANEESHB pic.twitter.com/NUEDrO9sq3
— Rishab Shetty (@shetty_rishab) January 8, 2024
𝐖𝐞𝐥𝐜𝐨𝐦𝐞 𝐓𝐨 𝐓𝐡𝐞 𝐖𝐨𝐫𝐥𝐝 𝐨𝐟 #UITheMovie Best wishes to #UppiSir & the entire team 🥂https://t.co/yL2Xg6zOs5#UITheMovieFirstLook #UppiDirects @nimmaupendra #GManoharan @Laharifilm @enterrtainers @kp_sreekanth #NaveenManoharan @AJANEESHB @shivakumarart… pic.twitter.com/drmYpXzaSh
— Kichcha Sudeepa (@KicchaSudeep) January 8, 2024
ಉಪ್ಪಿ ಬರ್ತ್ಡೇ ಪ್ರಯುಕ್ತ ಟೀಸರ್ ರಿಲೀಸ್ ಆಗಿತ್ತು. ಆದರೆ, ಟೀಸರ್ನಲ್ಲಿ ಯಾವುದೇ ದೃಶ್ಯಗಳನ್ನು ತೋರಿಸಿರಲಿಲ್ಲ. ‘ಈ ಚಿತ್ರದಲ್ಲಿ ಶೇ. 90 ಗ್ರಾಫಿಕ್ಸ್ ಇದೆ. ಬೇರೆ ಬೇರೆ ಕಡೆಗಳಲ್ಲಿ ಇದರ ಕೆಲಸ ನಡೆಯುತ್ತಿದೆ. ಅದು ಮುಗಿಯೋವರೆಗೂ ಏನನ್ನೂ ತೋರಿಸಲ್ಲ’ ಎಂದಿದ್ದರು ಉಪ್ಪಿ. ಈಗ ಫಸ್ಟ್ ಲುಕ್ ಟೀಸರ್ನಲ್ಲಿ ಗ್ರಾಫಿಕ್ ದೃಶ್ಯಗಳು ಹೈಲೈಟ್ ಆಗಿದೆ.
‘ಯುಐ’ ಚಿತ್ರವನ್ನು ಜಿ ಮನೋಹರನ್ ಹಾಗೂ ಕೆಪಿ ಶ್ರೀಕಾಂತ್ ನಿರ್ಮಾಣ ಮಾಡುತ್ತಿದ್ದಾರೆ. ಬಿ. ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:22 am, Mon, 8 January 24