Trishulam: ಹೈದರಾಬಾದ್ ಫಿಲ್ಮ್ ಫೆಡರೇಷನ್‌ನಿಂದ ಹಣಕ್ಕೆ ಬೇಡಿಕೆ; ರವಿಚಂದ್ರನ್, ಉಪೇಂದ್ರ ನಟನೆಯ ‘ತ್ರಿಶೂಲಂ’ ಶೂಟಿಂಗ್​ಗೆ ಅಡ್ಡಿ

Ravichandran | Upendra: ಸ್ಯಾಂಡಲ್​ವುಡ್​ನ ಖ್ಯಾತ ನಟರಾದ ರವಿಚಂದ್ರನ್ ಹಾಗೂ ಉಪೇಂದ್ರ ಅಭಿನಯದ ‘ತ್ರಿಶೂಲಂ’ ಚಿತ್ರದ ಚಿತ್ರೀಕರಣಕ್ಕೆ ಅಡ್ಡಿಯಾಗಿದೆ. ಈ ಕುರಿತು ನಿರ್ಮಾಪಕ ಕನಕಪುರ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

Trishulam: ಹೈದರಾಬಾದ್ ಫಿಲ್ಮ್ ಫೆಡರೇಷನ್‌ನಿಂದ ಹಣಕ್ಕೆ ಬೇಡಿಕೆ; ರವಿಚಂದ್ರನ್, ಉಪೇಂದ್ರ ನಟನೆಯ ‘ತ್ರಿಶೂಲಂ’ ಶೂಟಿಂಗ್​ಗೆ ಅಡ್ಡಿ
‘ತ್ರಿಶೂಲಂ’ ಚಿತ್ರದ ಪೋಸ್ಟರ್
Follow us
TV9 Web
| Updated By: shivaprasad.hs

Updated on:Oct 27, 2021 | 12:40 PM

ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ರಿಯಲ್‌ಸ್ಟಾರ್ ಉಪೇಂದ್ರ ಅಭಿಯದ ‘ತ್ರಿಶೂಲಂ’ ಚಿತ್ರೀಕರಣಕ್ಕೆ ಅಡ್ಡಿಯಾಗಿದೆ. ಓಂ‌ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರವು, ಚಿತ್ರೀಕರಣಕ್ಕೆ ಹೈದರಾಬಾದ್​ಗೆ ತೆರಳಿತ್ತು. ಇದೀಗ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಹೈದರಾಬಾದ್​ನ ಸಿನಿ‌ಫೆಡರೇಶನ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈಗಾಗಲೇ ಬೆಳಗ್ಗೆ 7 ಘಂಟೆಗೆ ಶೂಟಿಂಗ್ ಆರಂಭ ಆಗಬೇಕಿತ್ತು. ಆದರೆ ಇನ್ನೂ ಕೂಡ ಕ್ಯಾಮರಾ ಯೂನಿಟ್ ಸೇರಿದಂತೆ ಕೆಲವು ಕೆಲಸಗಾರರು ಆಗಮಿಸಿಲ್ಲ ಎಂದು ಶ್ರೀನಿವಾಸ್ ಆರೋಪಿಸಿದ್ದಾರೆ.

ನಿನ್ನೆಯಿಂದ ಹೈದರಾಬಾದ್‌ನಲ್ಲಿ ‘ತ್ರಿಶೂಲಂ’ ಚಿತ್ರತಂಡ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ. ಆಗುತ್ತಿರುವ ಸಮಸ್ಯೆಯ ಕುರಿತು ಮಾತನಾಡಿರುವ ಕನಕಪುರ ಶ್ರೀನಿವಾಸ್, ‘‘ಬಿಲ್ ಕೊಡದೇ ಹಣ ಕೇಳುತ್ತಿದ್ದಾರೆ. ₹ 6 ಲಕ್ಷ ಹಣ‌ಕಟ್ಟಬೇಕಿತ್ತು. ₹ 1 ಲಕ್ಷ ಹಣ ಕಟ್ಟಿದ್ದೇನೆ. ಅವರು ₹ 7 ಲಕ್ಷ ಪಾವತಿಸಿದರೆ ಮಾತ್ರ ಯುನಿಟ್ ಕಳುಹಿಸುವುದಾಗಿ ಹೇಳುತ್ತಿದ್ದಾರೆ. ಇನ್ನುಳಿದ ಹಣ ಪಾವತಿಗೆ ರಶೀತಿ ಬೇಕು’’ ಎಂದು ಶ್ರೀನಿವಾಸ್ ಹೇಳಿದ್ದಾರೆ. ಈ ಸಮಸ್ಯೆಯಿಂದಾಗಿ ಶೂಟಿಂಗ್​ಗೆ ತೊಂದರೆಯಾಗುತ್ತಿದೆ. ಸದ್ಯ ಒಂದು ದಿನ ಶೂಟಿಂಗ್ ನಿಂತ್ರೆ 20 ಲಕ್ಷ ಲಾಸ್ ಆಗುತ್ತೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

RS Productions letter

ಚಿತ್ರತಂಡ ದೂರು ನೀಡಿರುವ ಪತ್ರ

ಸದ್ಯ ಚಿತ್ರತಂಡ ಹೈದರಾಬಾದ್​ನಲ್ಲಿ ಬೀಡುಬಿಟ್ಟಿದ್ದು, ಸಾಂಗಿ ಟೆಂಪಲ್ ಬಳಿ ಚಿತ್ರೀಕರಣಕ್ಕೆ ತೆರಳಿದೆ. ಆದರೆ ಚಿತ್ರೀಕಣಕ್ಕೆ ತೊಂದರೆಯಾಗುತ್ತಿರುವ ಕುರಿತಂತೆ ಚಿತ್ರತಂಡ ಹೈದರಾಬಾದ್ ಸಿನಿಫೆಡರೇಶನ್ ವಿರುದ್ಧ ಗಂಭೀರ ಆರೋಪ ಮಾಡಿದೆ. ಸ್ಯಾಂಡಲ್​ವುಡ್​ನ ಖ್ಯಾತ ಕಲಾವಿದರು ಈ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ರವಿಚಂದ್ರನ್ ಹಾಗೂ ಉಪೇಂದ್ರ ಕಾಂಬಿನೇಷನ್​ ತೆರೆ ಮೇಲೆ ಕಾಣಿಸಿಕೊಳ್ಳಲಿದೆ. ಸಾನ್ವಿ ಶ್ರೀವಾಸ್ತವ್, ಸಾಧು ಕೋಕಿಲ, ನಿಮಿಕಾ ರತ್ನಾಕರ್, ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ಇದನ್ನೂ ಓದಿ:

Snehith: ಸ್ನೇಹಿತ್ ಮತ್ತು ತಂಡದ ಹಲ್ಲೆ ಪ್ರಕರಣ; ಮನೆ ಸೆಕ್ಯುರಿಟಿ ಗಾರ್ಡ್ ಅರೆಸ್ಟ್; ಉಳಿದವರ ಪತ್ತೆಗೆ ಬಲೆ ಬೀಸಿದ ಪೊಲೀಸರು

ರವಿಚಂದ್ರನ್​ ಪುತ್ರರ ಬಗ್ಗೆ ಕಾಕ್ರೋಚ್​ ಸುಧಿ ವಿಶೇಷ ಮಾತು; ‘ಕನಸುಗಾರ’ ನೆನಪಿಸಿದ ಮನು-ವಿಕ್ರಮ್​

Published On - 10:46 am, Wed, 27 October 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ