AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಪೇಂದ್ರ, ಪ್ರಿಯಾಂಕಾ ಮೊಬೈಲ್ ಹ್ಯಾಕ್ ಆಗಿ ಹಣ ಕಳೆದುಕೊಂಡಿದ್ದು ಹೇಗೆ? ಇಲ್ಲಿದೆ ಪೂರ್ತಿ ವಿವರ

ಸೈಬರ್ ವಂಚಕರ ಜಾಲಕ್ಕೆ ನಟ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರು ಸಿಕ್ಕಿಕೊಂಡಿದ್ದಾರೆ. ಇವರ ಮೊಬೈಲ್ ನಂಬರ್ ಹ್ಯಾಕ್ ಮಾಡುವ ಮೂಲಕ ಹಲವರಿಗೆ ಮೆಸೇಜ್ ಕಳಿಸಿ ಹಣಕ್ಕಾಗಿ ಮನವಿ ಮಾಡಲಾಗಿದೆ. ಕೂಡಲೇ ಉಪೇಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಅವರು ಮಾತನಾಡಿದ್ದಾರೆ.

ಉಪೇಂದ್ರ, ಪ್ರಿಯಾಂಕಾ ಮೊಬೈಲ್ ಹ್ಯಾಕ್ ಆಗಿ ಹಣ ಕಳೆದುಕೊಂಡಿದ್ದು ಹೇಗೆ? ಇಲ್ಲಿದೆ ಪೂರ್ತಿ ವಿವರ
Upendra
ಮದನ್​ ಕುಮಾರ್​
|

Updated on: Sep 15, 2025 | 3:20 PM

Share

ನಟ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕಾಗೆ (Priyanka Upendra) ಇಂದು (ಸೆಪ್ಟೆಂಬರ್ 15) ಸೈಬರ್ ಖದೀಮರು ಶಾಕ್ ನೀಡಿದ್ದಾರೆ. ಇಬ್ಬರ ಮೊಬೈಲ್ ಹ್ಯಾಕ್ (Mobile Hack) ಮಾಡಲಾಗಿದೆ. ಬಳಿಕ ಪರಿಚಯದವರಿಗೆ ವಾಟ್ಸಪ್ ಮೂಲಕ ಸಂದೇಶ ಕಳಿಸಿ ಹಣ ಕೊಡುವಂತೆ ಮನವಿ ಮಾಡಿದ್ದಾರೆ. ಹ್ಯಾಕರ್​​ಗಳ ಈ ಜಾಲಕ್ಕೆ ಕೆಲವರು ಹಣ ಕಳೆದುಕೊಂಡಿದ್ದಾರೆ. ಸ್ವತಃ ಉಪೇಂದ್ರ ಅವರ ಮಗ ಆಯುಷ್ ಕೂಡ 55 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ. ಈ ಘಟನೆ ಹೇಗೆ ನಡೆಯಿತು ಎಂಬುದನ್ನು ಉಪೇಂದ್ರ ಅವರು ವಿವರಿಸಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಉಪೇಂದ್ರ (Upendra) ಅವರು ಈ ಬಗ್ಗೆ ಮಾಹಿತಿ ನೀಡಿದರು.

‘ಯಾರಿಗೂ ಈ ರೀತಿ ಆಗಬಾರದು. ಯಾವುದೋ ಒಂದು ನಂಬರ್​​ನಿಂದ ಪ್ರಿಯಾಂಕಾ ಅವರಿಗೆ ಕರೆ ಬಂತು. ನೀವು ಏನೋ ಐಟಂ ಆರ್ಡರ್ ಮಾಡಿದ್ದೀರಿ, ಅದಕ್ಕೆ ನಿಮ್ಮ ಅಡ್ರೆಸ್ ಹುಡುಕುತ್ತಿದ್ದಾರೆ, ಸ್ಟಾರ್ ಹಾಗೂ ಹ್ಯಾಶ್ ಇರುವ ಒಂದು ನಂಬರ್​​ಗೆ ಕರೆ ಮಾಡಿ ಎಂದು ಹ್ಯಾಕರ್​​ಗಳು ಹೇಳಿದರು. ಪ್ರಿಯಾಂಕಾ ಫೋನ್​​ನಿಂದ ಆಗಲಿಲ್ಲ. ಬಳಿಕ ನನ್ನ ಫೋನ್ ಹಾಗೂ ಮ್ಯಾನೇಜರ್ ಮಾದೇವ ಅವರ ಫೋನ್​​ನಿಂದ ಪ್ರಯತ್ನಿಸಿದೆವು. ಮೂವರ ಮೊಬೈಲ್ ಕೂಡ ಹ್ಯಾಕ್ ಆಯಿತು’ ಎಂದು ಉಪೇಂದ್ರ ಹೇಳಿದ್ದಾರೆ.

‘ಹ್ಯಾಕ್ ಆದ ಬಳಿಕ ನಮ್ಮ ಫೋನಿಂದ ಬೇರೆಯವರಿಗೆ ಮೆಸೇಜ್ ಹೋಗುತ್ತಿದೆ. ಅರ್ಜೆಂಟಾಗಿ 55 ಸಾವಿರ ರೂಪಾಯಿ ಕಳಿಸಿ ಅಂತ ಎಲ್ಲರಿಗೂ ಕೇಳುತ್ತಿದ್ದಾರೆ. ಖಚಿತಪಡಿಸಿಕೊಳ್ಳಲು ಫೋನ್ ಮಾಡಿದರೆ ರೀಚ್ ಆಗುವುದಿಲ್ಲ. ಏನೋ ಎಮರ್ಜೆನ್ಸಿ ಇರಬಹುದು ಎಂದು ನಮಗೆ ಗೊತ್ತಿರುವ ಕೆಲವರು ದುಡ್ಡು ಕಳಿಸಿದ್ದಾರೆ. ಕೂಡಲೇ ನಾವು ಇಲ್ಲಿ ಬಂದು ದೂರು ನೀಡಿದ್ದೇನೆ. ಇಂಥ ಮೆಸೇಜ್ ಬಂದರೆ ದಯವಿಟ್ಟು ಯಾರೂ ಕೂಡ ದುಡ್ಡು ಕಳಿಸಬೇಡಿ’ ಎಂದು ಉಪೇಂದ್ರ ಅವರು ಎಚ್ಚರಿಕೆ ನೀಡಿದ್ದಾರೆ.

‘ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ. ನನ್ನ ಮಗನಿಗೂ ಹಾಗೆಯೇ ಆಗಿದೆ. ನಿಜ ಇರಬಹುದು ಎಂದುಕೊಂಡು ಅವರು ದುಡ್ಡು ಹಾಕಿದ್ದಾನೆ. ಕೆಲವು ಸ್ನೇಹಿತರದ್ದೂ ಸೇರಿ ಲಕ್ಷಾಂತರ ರೂಪಾಯಿ ಹೋಗಿದೆ. ಇನ್ನೂ ಯಾರೆಲ್ಲ ಮಾಡಿದ್ದಾರೋ ಗೊತ್ತಿಲ್ಲ. ಅದನ್ನೆಲ್ಲ ಚೆಕ್ ಮಾಡಬೇಕು’ ಎಂದಿದ್ದಾರೆ ಉಪೇಂದ್ರ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕಾ, ಉಪೇಂದ್ರ ಮೊಬೈಲ್ ಹ್ಯಾಕ್; ದುಡ್ಡು ಕೇಳಿದ್ರೆ ಕೊಡಬೇಡಿ ಎಂದ ರಿಯಲ್ ಸ್ಟಾರ್

ಹ್ಯಾಕರ್​​​ಗಳ ಕೃತ್ಯದ ಬಗ್ಗೆ ತಿಳಿಯುತ್ತಿದ್ದಂತೆಯೇ ಉಪೇಂದ್ರ ಮತ್ತು ಪ್ರಿಯಾಂಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಹ್ಯಾಕರ್​​ಗಳ ಜಾಲಕ್ಕೆ ಹೆಚ್ಚಿನ ಜನರು ಸಿಕ್ಕಿಕೊಳ್ಳದಂತೆ ತಪ್ಪಿಸಲು ಪ್ರಯತ್ನಿಸಿದ್ದಾರೆ. ತನಿಖೆ ಬಳಿಕ ಹ್ಯಾಕರ್​​ಗಳ ಬಗ್ಗೆ ಮಾಹಿತಿ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

SENA ದೇಶಗಳ ವಿರುದ್ಧ ಪಾರುಪತ್ಯ ಮುಂದುವರೆಸಿದ ಬುಮ್ರಾ
SENA ದೇಶಗಳ ವಿರುದ್ಧ ಪಾರುಪತ್ಯ ಮುಂದುವರೆಸಿದ ಬುಮ್ರಾ
ಸಾಲುಮರದ ತಿಮ್ಮಕ್ಕ ಕೊನೆ ಆಸೆ ಏನಿತ್ತು? ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ
ಸಾಲುಮರದ ತಿಮ್ಮಕ್ಕ ಕೊನೆ ಆಸೆ ಏನಿತ್ತು? ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ
ಕ್ರಾಂತಿ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ನಿರಾಸೆ ತಂದ ಬಿಹಾರ ರಿಸಲ್ಟ್​!
ಕ್ರಾಂತಿ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ನಿರಾಸೆ ತಂದ ಬಿಹಾರ ರಿಸಲ್ಟ್​!
ವೃಕ್ಷಮಾತೆ ಸಾಲುಮರದ ತಿಮ್ಮಕ್ಕರ ಅಂತಿಮ ಕ್ಷಣ ಹೇಗಿತ್ತು?
ವೃಕ್ಷಮಾತೆ ಸಾಲುಮರದ ತಿಮ್ಮಕ್ಕರ ಅಂತಿಮ ಕ್ಷಣ ಹೇಗಿತ್ತು?
ಚುನಾವಣಾ ಆಯೋಗ ಆರ್​ಎಸ್​ಎಸ್​ ಘಟಕವೇ? ಬಿಕೆ ಹರಿಪ್ರಸಾದ್ ಟೀಕೆ
ಚುನಾವಣಾ ಆಯೋಗ ಆರ್​ಎಸ್​ಎಸ್​ ಘಟಕವೇ? ಬಿಕೆ ಹರಿಪ್ರಸಾದ್ ಟೀಕೆ
ಬಿಹಾರದಲ್ಲಿ ಎನ್​ಡಿಎ ಜಯಭೇರಿ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು ನೋಡಿ
ಬಿಹಾರದಲ್ಲಿ ಎನ್​ಡಿಎ ಜಯಭೇರಿ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು ನೋಡಿ
ಹಾಸ್ಟೆಲ್​ನಲ್ಲಿ ಅನ್ನದ ಪಾತ್ರೆಯೊಳಗೆ ಕಾಲಿಟ್ಟು ಮಲಗಿದ ಕಾವಲುಗಾರ
ಹಾಸ್ಟೆಲ್​ನಲ್ಲಿ ಅನ್ನದ ಪಾತ್ರೆಯೊಳಗೆ ಕಾಲಿಟ್ಟು ಮಲಗಿದ ಕಾವಲುಗಾರ
ಎನ್ಡಿಎಗೆ ಬಹುಮತ ಬರುತ್ತಿದ್ದಂತೆ ಕಾಂಗ್ರೆಸ್​ನಿಂದ ಶುರುವಾಯ್ತು ಪ್ರತಿಭಟನೆ
ಎನ್ಡಿಎಗೆ ಬಹುಮತ ಬರುತ್ತಿದ್ದಂತೆ ಕಾಂಗ್ರೆಸ್​ನಿಂದ ಶುರುವಾಯ್ತು ಪ್ರತಿಭಟನೆ
ಕಬ್ಬು ಬೆಳೆಗಾರರ ಪ್ರತಿಭಟನೆ ವೇಳೆ ವಾಹನಗಳಿಗೆ ಬೆಂಕಿ: ADGP ಏನಂದ್ರು?
ಕಬ್ಬು ಬೆಳೆಗಾರರ ಪ್ರತಿಭಟನೆ ವೇಳೆ ವಾಹನಗಳಿಗೆ ಬೆಂಕಿ: ADGP ಏನಂದ್ರು?
ದುಡ್ಡು ಕೊಟ್ಟು ‘ಜೈ’ ಸಿನಿಮಾ ಮೊದಲ ಟಿಕೆಟ್ ಖರೀದಿಸಿದ ಸುದೀಪ್
ದುಡ್ಡು ಕೊಟ್ಟು ‘ಜೈ’ ಸಿನಿಮಾ ಮೊದಲ ಟಿಕೆಟ್ ಖರೀದಿಸಿದ ಸುದೀಪ್