ರಿಷಬ್ ಶೆಟ್ಟಿ ನಟಿಸಿ, ನಿದೇರ್ಶನ ಮಾಡಿರುವ ‘ಕಾಂತಾರ’ (Kantara Movie) ಚಿತ್ರ ಇಡೀ ದೇಶಾದ್ಯಂತ ಬಿಡುಗಡೆಯಾಗಿ ಭರ್ಜರಿ ಸಕ್ಸಸ್ ಕಂಡಿದೆ. ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿಯೂ ಚಿತ್ರ ಬಿಡುಗಡೆ ಮಾಡಲಾಗಿತ್ತು. ‘ಕಾಂತಾರ’ ಚಿತ್ರ ಗಳಿಕೆ ಮಾಡುತ್ತಿರುವುದನ್ನು ನೋಡಿ ಭಾರತೀಯ ಚಿತ್ರರಂಗವೇ ದಂಗಾಗಿ ಹೋಗಿದೆ. ‘ಕಾಂತಾರ’ ಚಿತ್ರವನ್ನು ನೋಡಿದ ಜನ ಫ್ರೇಮ್ ಟು ಫ್ರೇಮ್ ಇಷ್ಟಪಟ್ಟಿದ್ದರು. ಜೊತೆಗೆ ‘ಕಾಂತಾರ’ ಚಿತ್ರದಷ್ಟೇ ಅದರಲ್ಲಿ ಮೂಡಿ ಬಂದ ‘ವರಾಹ ರೂಪಂ’ (Varaha Roopam) ಹಾಡು ಕೂಡ ಸಾಕಷ್ಟು ಜನಪ್ರಿಯ ಪಡೆದುಕೊಂಡಿತ್ತು. ಆದರೆ ಈ ಹಾಡಿಗೆ ಕೃತಿಚೌರ್ಯದ ಆರೋಪ ಮಾಡಲಾಗಿತ್ತು. ಬಳಿಕ ಹಾಡನ್ನು ಪ್ರಸಾರ ಮಾಡದಂತೆ ಕೇರಳದ ಸ್ಥಳೀಯ ನ್ಯಾಯಾಲಯ ಆದೇಶ ಹೊರಡಿಸಿತ್ತು. ಹಾಗಾಗಿ ಯೂಟ್ಯೂಬ್, ಮ್ಯೂಸಿಕ್ ಆ್ಯಪ್ಗಳಾದ ‘ಸಾವನ್..’ ಮೊದಲಾದ ಪ್ಲಾಟ್ಫಾರ್ಮ್ಗಳಿಂದ ಈ ಸಾಂಗ್ ಡಿಲೀಟ್ ಮಾಡಲಾಗಿತ್ತು. ಆದರೆ ಈಗ ‘ವರಾಹ ರೂಪಂ’ ಹಾಡು ಯೂಟ್ಯೂಬ್ನಲ್ಲಿ ಪ್ರತ್ಯಕ್ಷವಾಗಿದೆ. ಕಾನೂನು ಹೋರಾಟದಲ್ಲಿ ‘ಕಾಂತಾರ’ ಚಿತ್ರಕ್ಕೆ ಗೆಲುವು ಸಿಕ್ಕಿದೆ.
‘ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡಿನ ಕುರಿತು ಕೇರಳದ ಕೋರ್ಟ್ ನೀಡಿದ್ದ ತಡೆಯಾಜ್ಞೆ ತೆರವುಗೊಂಡಿರುವ ಹಿನ್ನೆಲೆಯಲ್ಲಿ ಆ ಹಾಡು ಇಂದಿನಿಂದ ಚಿತ್ರಮಂದಿರ, ಯೂಟ್ಯೂಬ್, ಓಟಿಟಿ ಸೇರಿದಂತೆ ಎಲ್ಲೆಡೆ ಲಭ್ಯವಿದೆ. ಇದಕ್ಕೂ ಮುನ್ನ, ‘ವರಾಹ ರೂಪಂ …’ ಹಾಡನ್ನು ಯೂಟ್ಯೂಬ್ ಸೇರಿದಂತೆ ಯಾವುದೇ ಪ್ಲಾಟ್ಫಾರ್ಮ್ಗಳಲ್ಲಿ ಒಪ್ಪಿಗೆ ಇಲ್ಲದೆ ಬಳಸಬಾರದು ಎಂದು ಕೇರಳದ ಕೋರ್ಟ್ ಆದೇಶ ಹೊರಡಿಸಿತ್ತು. ಇದಕ್ಕೆ ತಲೆ ಬಾಗಿದ್ದ ಚಿತ್ರತಂಡವು, ‘ವರಾಹ ರೂಪಂ’ ಹಾಡನ್ನು ಚಿತ್ರಮಂದಿರ, ಯೂಟ್ಯೂಬ್ನ ಹೊಂಬಾಳೆ ಫಿಲಂಸ್ನ ಚಾನಲ್, ಮ್ಯೂಸಿಕ್ ಆ್ಯಪ್ಗಳಾದ ಸಾವನ್ ಮುಂತಾದ ಕಡೆಗಳಿಂದ ಹಾಡನ್ನು ಡಿಲೀಟ್ ಮಾಡಿತ್ತು.
ದೈವಾನು ದೈವಗಳ ಆಶೀರ್ವಾದ ಹಾಗು ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ. ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ OTT platform ನಲ್ಲಿ ಹಾಡನ್ನು ಬದಲಾಯಿಸಲಿದ್ದೇವೆ . @VKiragandur@ChaluveG @AJANEESHB @Karthik1423 @hombalefilms @KantaraFilmhttps://t.co/STsNEyKmuT
— Rishab Shetty (@shetty_rishab) December 3, 2022
ಇದನ್ನು ಓದಿ: ತೈಕ್ಕುಡಂ ಬ್ರಿಡ್ಜ್ ಕೇಸ್: ಯೂಟ್ಯೂಬ್, ಮ್ಯೂಸಿಕ್ ಆ್ಯಪ್ಗಳಿಂದ ‘ವರಾಹ ರೂಪಂ..’ ಹಾಡು ಡಿಲೀಟ್
ಓಟಿಟಿಯಲ್ಲಿ ‘ಕಾಂತಾರ’ ಚಿತ್ರ ಬಿಡುಗಡೆಯಾದಾಗಲೂ ಬೇರೆ ಟ್ಯೂನ್ ಬಳಸಲಾಗಿತ್ತು. ಆ ನಂತರ ತಡೆಯಾಜ್ಞೆ ತೆರವಾಗಿ, ಹಾಡನ್ನು ಪುನಃ ಬಳಸಿಕೊಳ್ಳುವುದಕ್ಕೆ ಅನುಮತಿ ಸಿಕ್ಕಿದೆ. ಅದರಂತೆ, ತತಕ್ಷಣಕ್ಕೆ ಬರುವಂತೆ ಇಂದಿನಿಂದ ಚಿತ್ರಮಂದಿರ, ಓಟಿಟಿ, ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲ ವೇದಿಕೆಗಳಲ್ಲೂ ಮೂಲ ‘ವರಾಹ ರೂಪಂ’ ಹಾಡು ಪುನಃ ಸಿಗಲಿದೆ.
ಇದನ್ನು ಓದಿ: Varaha Roopam Song: ‘ವರಾಹ ರೂಪಂ..ಹಾಡು ಬಳಕೆಗೆ ಅನುಮತಿ ನೀಡಿದ್ದ ಜಿಲ್ಲಾ ಕೋರ್ಟ್ ಆದೇಶಕ್ಕೆ ಹೈಕೋರ್ಟ್ ತಡೆ
‘ಕಾಂತಾರ’ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯಡಿ ವಿಜಯ್ ಕುಮಾರ್ ಕಿರಗಂದೂರು ನಿರ್ಮಿಸಿದ್ದು, ರಿಷಬ್ ಶೆಟ್ಟಿ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ, ಅಜನೀಶ್ ಲೋಕನಾಥ್ ಸಂಗೀತ ಮತ್ತು ಅರವಿಂದ್ ಅವರ ಛಾಯಾಗ್ರಹಣವಿದೆ. ‘ಕಾಂತಾರ’ ಚಿತ್ರವು 50 ದಿನಗಳನ್ನು ಪೂರೈಸಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:55 pm, Sat, 3 December 22