ತೈಕ್ಕುಡಂ ಬ್ರಿಡ್ಜ್ ಕೇಸ್: ಯೂಟ್ಯೂಬ್​, ಮ್ಯೂಸಿಕ್ ಆ್ಯಪ್​ಗಳಿಂದ ‘ವರಾಹ ರೂಪಂ..’ ಹಾಡು ಡಿಲೀಟ್

 ‘ನವರಸಂ..’ ಹಾಡಿನಲ್ಲಿರುವ ಟ್ಯೂನ್​ ‘ವರಾಹ ರೂಪಂ..’ನಲ್ಲಿ ಬಳಕೆ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ‘ತೈಕ್ಕುಡಂ ಬ್ರಿಡ್ಜ್​​’ ಕೇಸ್ ಕೂಡ ದಾಖಲು ಮಾಡಿತ್ತು.

ತೈಕ್ಕುಡಂ ಬ್ರಿಡ್ಜ್ ಕೇಸ್: ಯೂಟ್ಯೂಬ್​, ಮ್ಯೂಸಿಕ್ ಆ್ಯಪ್​ಗಳಿಂದ ‘ವರಾಹ ರೂಪಂ..’ ಹಾಡು ಡಿಲೀಟ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 12, 2022 | 2:48 PM

‘ಕಾಂತಾರ’ ಸಿನಿಮಾದ (Kantara Movie) ‘ವರಾಹ ರೂಪಂ..’ ಹಾಡು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಈ ಹಾಡಿನ ಟ್ಯೂನ್ ಮೇಲೆ ಕೃತಿಚೌರ್ಯದ ಆರೋಪ ಹೊರಿಸಲಾಗಿತ್ತು. ಮಲಯಾಳಂನ ಖ್ಯಾತ ಮ್ಯೂಸಿಕ್ ಬ್ಯಾಂಡ್ ‘ತೈಕ್ಕುಡಂ ಬ್ರಿಡ್ಜ್’ ಈ ಸಂಬಂಧ ಕೇಸ್ ದಾಖಲು ಮಾಡಿತ್ತು. ಹಾಡನ್ನು ಪ್ರಸಾರ ಮಾಡದಂತೆ ಕೇರಳದ ಸ್ಥಳೀಯ ನ್ಯಾಯಾಲಯ ಆದೇಶ ಹೊರಡಿಸಿತ್ತು. ಈಗ ಈ ಆದೇಶಕ್ಕೆ ಚಿತ್ರತಂಡ ತಲೆಬಾಗಿದೆ. ಯೂಟ್ಯೂಬ್, ಮ್ಯೂಸಿಕ್ ಆ್ಯಪ್​ಗಳಾದ ‘ಸಾವನ್..’ ಮೊದಲಾದ ಪ್ಲಾಟ್​ಫಾರ್ಮ್​ಗಳಿಂದ ಈ ಸಾಂಗ್ ಡಿಲೀಟ್ ಮಾಡಲಾಗಿದೆ.

‘ನವರಸಂ..’ ಹಾಡಿನಲ್ಲಿರುವ ಟ್ಯೂನ್​ ‘ವರಾಹ ರೂಪಂ..’ನಲ್ಲಿ ಬಳಕೆ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ‘ತೈಕ್ಕುಡಂ ಬ್ರಿಡ್ಜ್​​’ ಕೇಸ್ ಕೂಡ ದಾಖಲು ಮಾಡಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಕೇರಳದ ಸ್ಥಳೀಯ ನ್ಯಾಯಾಲಯ ‘ವರಾಹ ರೂಪಂ..’ ಹಾಡಿಗೆ ತಡೆ ನೀಡಿತ್ತು. ಒಪ್ಪಿಗೆ ಇಲ್ಲದೆ ಹಾಡನ್ನು ಬಳಕೆ ಮಾಡುವಂತಿಲ್ಲ ಎಂದು ಹೇಳಿತ್ತು. ಈಗ ಕೋರ್ಟ್ ಆದೇಶವನ್ನು ತಂಡದವರು ಪಾಲಿಸಿದ್ದಾರೆ.

‘ವರಾಹ ರೂಪಂ..’ ಹಾಡನ್ನು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ‘ಹೊಂಬಾಳೆ ಫಿಲ್ಮ್ಸ್​’ ಯೂಟ್ಯೂಬ್ ಚಾನೆಲ್​ಗಳಲ್ಲಿ ಅಪ್​ಲೋಡ್ ಮಾಡಲಾಗಿತ್ತು. ಈಗ ‘ಹೊಂಬಾಳೆ ಫಿಲ್ಮ್ಸ್​’ ಯೂಟ್ಯೂಬ್ ಚಾನೆಲ್​ನಿಂದ ಈ ಹಾಡನ್ನು ಡಿಲೀಟ್ ಮಾಡಲಾಗಿದೆ. ಮ್ಯೂಸಿಕ್ ಆ್ಯಪ್​ ಜಿಯೊ ಸಾವನ್​​ನಲ್ಲಿ ಈ ಹಾಡು ಕೇಳಲು ಲಭ್ಯವಿಲ್ಲ. ಯೂಟ್ಯೂಬ್ ಮ್ಯೂಸಿಕ್ ಸೇರಿ ಕೆಲವು ಆ್ಯಪ್​ಗಳಲ್ಲಿ ‘ವರಾಹ ರೂಪಂ..’ ಹಾಡು ಇನ್ನೂ ಡಿಲೀಟ್ ಆಗಿಲ್ಲ.

ಇದನ್ನೂ ಓದಿ
Image
Kantara: ‘ಕಾಂತಾರ’ ಚಿತ್ರದಿಂದ ಅಲ್ಲು ಅರ್ಜುನ್​ ತಂದೆಗೆ ಭಾರಿ ಲಾಭ; ಎಷ್ಟಕ್ಕೆ ನಡೆಯಿತು ತೆಲುಗು ವ್ಯವಹಾರ?
Image
Rishab Shetty: ಒಂದೇ ದಿನಕ್ಕೆ 15 ಕೋಟಿ ರೂಪಾಯಿ ಬಾಚಿದ ‘ಕಾಂತಾರ’; ಪರಭಾಷೆಯಲ್ಲಿ ಭರ್ಜರಿ ಕಮಾಯಿ
Image
Anushka Shetty: ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಫಿದಾ; ರಿಷಬ್​ ಬಗ್ಗೆ ಸ್ಪೆಷಲ್​ ಮಾತುಗಳನ್ನು ಹೇಳಿದ ಸ್ಟಾರ್​ ನಟಿ
Image
Rishab Shetty: ರಿಷಬ್​ ಶೆಟ್ಟಿ ಕಾಲಿಗೆ ಬಿದ್ದ ಖ್ಯಾತ ಯೂಟ್ಯೂಬರ್​; ಹಿಂದಿ ಪ್ರೇಕ್ಷಕರಲ್ಲಿ ಹೆಚ್ಚಿತು ‘ಕಾಂತಾರ’ ಸೆನ್ಸೇಷನ್​

ಕೋರ್ಟ್ ಹೇಳಿದ್ದೇನು?: ‘ವರಾಹ ರೂಪಂ ಮತ್ತು ನವರಸಂ ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್​ ಕಾನೂನಿನ ಸ್ಪಷ್ಟ ಉಲ್ಲಂಘನೆ’ ಎಂದು ‘ತೈಕ್ಕುಡಂ ಬ್ರಿಡ್ಜ್​’ ಹೇಳಿತ್ತು. ಅಲ್ಲದೆ, ಈ ಸಂಬಂಧ ಕೋರ್ಟ್​ನಲ್ಲಿ ‘ವರಾಹ ರೂಪಂ..’ ಹಾಡಿನ ಮೇಲೆ ನಿರ್ಬಂಧ ಹೇರುವಂತೆ ಮನವಿ ಸಲ್ಲಿಕೆ ಮಾಡಿತ್ತು.  ಅರ್ಜಿ ವಿಚಾರಣೆ ನಡೆಸಿದ್ದ ಕೇರಳದ ಕೋಯಿಕ್ಕೋಡ್​​ನ ಕೋರ್ಟ್,​ ‘ವರಾಹ ರೂಪಂ..’ ಹಾಡಿನ ಮೇಲೆ ನಿರ್ಬಂಧ ಹೇರಿತ್ತು. ‘ನಿರ್ಮಾಪಕರು, ನಿರ್ದೇಶಕರು, ಸಂಗೀತ ಸಂಯೋಜಕರು, ಯೂಟ್ಯೂಬ್ ಸೇರಿ ಇತರ ಪ್ಲಾಟ್​ಫಾರ್ಮ್​ಗಳು ‘ಕಾಂತಾರ’ ಚಿತ್ರದ ‘ವರಾಹ ರೂಪಂ..’ ಹಾಡನ್ನು ಒಪ್ಪಿಗೆ ಇಲ್ಲದೆ ಬಳಸಬಾರದು’ ಎಂದು ಆದೇಶ ಹೊರಡಿಸಿತ್ತು.

Published On - 2:30 pm, Sat, 12 November 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ