Vedha Twitter Review: ‘ಒಂದೊಳ್ಳೆಯ ಸಿನಿಮಾ’; ಶಿವರಾಜ್​ಕುಮಾರ್ ನಟನೆಯ ‘ವೇದ’ ಚಿತ್ರಕ್ಕೆ ಫ್ಯಾನ್ಸ್ ಮೆಚ್ಚುಗೆ

ವೇದ ಟ್ವಿಟರ್​ ವಿಮರ್ಶೆ: ಎ. ಹರ್ಷ ಹಾಗೂ ಶಿವರಾಜ್​ಕುಮಾರ್ ಅವರದ್ದು ಹಿಟ್ ಕಾಂಬಿನೇಷನ್. ‘ಭಜರಂಗಿ’ ಅಂತಹ ಹಿಟ್ ಚಿತ್ರಗಳನ್ನು ಈ ಜೋಡಿ ನೀಡಿದೆ. ಹರ್ಷ ಹಾಗೂ ಶಿವಣ್ಣ ಕಾಂಬಿನೇಷನ್​ನಲ್ಲಿ ಮೂಡಿಬಂದ 4ನೇ ಚಿತ್ರ ಇದಾಗಿದೆ.

Vedha Twitter Review: ‘ಒಂದೊಳ್ಳೆಯ ಸಿನಿಮಾ’; ಶಿವರಾಜ್​ಕುಮಾರ್ ನಟನೆಯ ‘ವೇದ’ ಚಿತ್ರಕ್ಕೆ ಫ್ಯಾನ್ಸ್ ಮೆಚ್ಚುಗೆ
ಶಿವಣ್ಣ
Edited By:

Updated on: Dec 23, 2022 | 11:10 AM

ನಟ ಶಿವರಾಜ್​ಕುಮಾರ್ (Shivarajkumar) ಹಾಗೂ ನಿರ್ದೇಶಕ ಎ.ಹರ್ಷ (A Harsha) ಅವರು ಒಟ್ಟಾಗಿ ಕೆಲಸ ಮಾಡಿದ ನಾಲ್ಕನೇ ಸಿನಿಮಾ ‘ವೇದ’ ಇಂದು (ಡಿಸೆಂಬರ್ 23) ರಿಲೀಸ್ ಆಗಿದೆ. 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ತೆರೆಗೆ ಬಂದಿದೆ. ಈ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ. ಈ ಸಿನಿಮಾ ನೋಡಿದ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಎ. ಹರ್ಷ ಹಾಗೂ ಶಿವರಾಜ್​ಕುಮಾರ್ ಅವರದ್ದು ಹಿಟ್ ಕಾಂಬಿನೇಷನ್. ‘ಭಜರಂಗಿ’ ಅಂತಹ ಹಿಟ್ ಚಿತ್ರಗಳನ್ನು ಈ ಜೋಡಿ ನೀಡಿದೆ. ಹರ್ಷ ಹಾಗೂ ಶಿವಣ್ಣ ಕಾಂಬಿನೇಷನ್​ನಲ್ಲಿ ಮೂಡಿಬಂದ 4ನೇ ಚಿತ್ರ ಇದಾಗಿದೆ.  ವಿವಿಧ ಕಾಲಘಟ್ಟಗಳಲ್ಲಿ ಸಿನಿಮಾದ ಕಥೆ ಸಾಗಲಿದೆ. ಶಿವರಾಜ್​ಕುಮಾರ್ ಅವರ ರಗಡ್ ಲುಕ್ ಫ್ಯಾನ್ಸ್​ಗೆ ಇಷ್ಟವಾಗಿದೆ.

‘ಒಂದೊಳ್ಳೆಯ ಸಿನಿಮಾ. ಶಿವಣ್ಣನಿಗೆ ಹ್ಯಾಟ್ಸ್ ಆಫ್​. ಮಹಿಳಾ ಪಾತ್ರಗಳು ಬೆಂಕಿ. ಒಂದೊಂದು ಕ್ಯಾರೆಕ್ಟ್​ಗಳು ಆಸಂ. ನೋಡಲೇಬೇಕಾದ ಸಿನಿಮಾ’ ಎಂದು ಅಭಿಮಾನಿಯೋರ್ವ ಬರೆದುಕೊಂಡಿದ್ದಾನೆ.

ಇದನ್ನೂ ಓದಿ
ದೊಡ್ಡ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಅಶ್ವಿನಿ ಪುನೀತ್​ ರಾಜ್​ಕುಮಾರ್
Shivarajkumar: ಮೂರು ಕಾಲಘಟ್ಟದಲ್ಲಿ ಸಾಗುವ ‘ವೇದ’ ಚಿತ್ರದಲ್ಲಿ ಶಿವಣ್ಣನಿಗೆ ರಗಡ್ ಗೆಟಪ್
Vedha First Half Review: ‘ವೇದ’ ಚಿತ್ರದಲ್ಲಿ ಅಬ್ಬರಿಸಿದ ಶಿವಣ್ಣ: ಹೇಗಿದೆ ಮೊದಲಾರ್ಧ?
Vedha: ‘ವೇದ’ ಕುರಿತು ಇಂಚಿಂಚೂ ಮಾಹಿತಿ ಹಂಚಿಕೊಂಡ ಶಿವಣ್ಣ; ಇಲ್ಲಿದೆ ಟಿವಿ9 ಸ್ಪೆಷಲ್​ ಸಂದರ್ಶನ


‘ಮಾಸ್ ಆ್ಯಕ್ಷನ್ ಮೂಲಕ ಸಮಾಜಕ್ಕೆ ಒಂದೊಳ್ಳೆಯ ಸಂದೇಶ ನೀಡುವ ಕೆಲಸ ಹರ್ಷ ಅವರಿಂದ ಆಗಿದೆ. ಸಿನಿಮಾ ಉದ್ದಕ್ಕೂ ಇದು ಕೆಲಸ ಮಾಡಿದೆ. ಶಿವಣ್ಣ ಕಣ್ಣಿನಲ್ಲೇ ನಟಿಸಿದ್ದಾರೆ. ಅವರು ಚಿತ್ರದುದ್ದಕ್ಕೂ ಮಿಂಚಿದ್ದಾರೆ. ಗಾನವಿ ಲಕ್ಷ್ಮಣ್, ಅದಿತಿ ಸಾಗರ್, ಶ್ವೇತಾ ಚೆಂಗಪ್ಪ ತಮ್ಮ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಬಿಜಿಎಂ, ಛಾಯಾಗ್ರಹಣ ಉತ್ತಮವಾಗಿದೆ’ ಎಂದು ಯಶ್ವಂತ್ ರಾವ್​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Shivarajkumar: ಮೂರು ಕಾಲಘಟ್ಟದಲ್ಲಿ ಸಾಗುವ ‘ವೇದ’ ಚಿತ್ರದಲ್ಲಿ ಶಿವಣ್ಣನಿಗೆ ರಗಡ್ ಗೆಟಪ್

ಸಿನಿಮಾದ ಬಿಜಿಎಂ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ‘ಅರ್ಜುನ್ ಜನ್ಯ ಮೇಲೆ ರವಿ ಬಸ್ರೂರ್​ ಬಂದಂಗಿದೆ. ಆ ತರಹ ಬಿಜಿಎಂ ಕೊಟ್ಟಿದ್ದಾರೆ ಅರ್ಜುನ್ ಜನ್ಯ’ ಎಂದು ಸುದೀಪ್ ಎಂಬುವವರು ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:01 am, Fri, 23 December 22