Vedha First Half Review: ‘ವೇದ’ ಚಿತ್ರದಲ್ಲಿ ಅಬ್ಬರಿಸಿದ ಶಿವಣ್ಣ: ಹೇಗಿದೆ ಮೊದಲಾರ್ಧ?
Shiva Rajkumar, Vedha Movie Review: ಅದ್ದೂರಿಯಾಗಿ ‘ವೇದ’ ಚಿತ್ರ ರಿಲೀಸ್ ಆಗಿದೆ. ಮುಂಜಾನೆಯೇ ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿದ್ದಾರೆ.
ನಟ ಶಿವರಾಜ್ಕುಮಾರ್ ಅಭಿನಯದ ‘ವೇದ’ ಸಿನಿಮಾ (Movie Review) ಅದ್ದೂರಿಯಾಗಿ ಬಿಡುಗಡೆ ಆಗಿದೆ. ಅನೇಕ ಕಡೆಗಳಲ್ಲಿ ಮುಂಜಾನೆಯೇ ಫ್ಯಾನ್ಸ್ ಶೋ ಆಯೋಜನೆಗೊಂಡಿದೆ. ಎ. ಹರ್ಷ ಮತ್ತು ಶಿವರಾಜ್ಕುಮಾರ್ (Shivarajkumar) ಕಾಂಬಿನೇಷನ್ನಲ್ಲಿ ಬಂದ ಈ ಸಿನಿಮಾವನ್ನು ಗೀತಾ ಶಿವರಾಜ್ಕುಮಾರ್ ನಿರ್ಮಾಣ ಮಾಡಿದ್ದಾರೆ. ಇದು ‘ಹ್ಯಾಟ್ರಿಕ್ ಹೀರೋ’ ನಟನೆಯ 125ನೇ ಸಿನಿಮಾ ಎಂಬುದು ಮತ್ತೊಂದು ವಿಶೇಷ. ಗಾನವಿ ಲಕ್ಷ್ಮಣ್, ಅದಿತಿ ಸಾಗರ್, ಉಮಾಶ್ರೀ, ಶ್ವೇತಾ ಚೆಂಗಪ್ಪ, ಲಾಸ್ಯಾ ನಾಗರಾಜ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅನೇಕ ಕಾರಣಗಳಿಂದಾಗಿ ‘ವೇದ’ ಸಿನಿಮಾ ಹೈಪ್ ಕ್ರಿಯೇಟ್ ಮಾಡಿದೆ. ಹಾಗಾದ್ರೆ ಈ ಚಿತ್ರದ ಮೊದಲಾರ್ಧ (Vedha Movie First Half Review) ಹೇಗಿದೆ? ಇಲ್ಲಿದೆ ವಿಮರ್ಶೆ..
- ಮೂರು ಕಾಲಘಟ್ಟದಲ್ಲಿ ‘ವೇದ’ ಸಿನಿಮಾದ ಕಥೆ ಸಾಗುತ್ತದೆ. 2021,1985 ಹಾಗೂ 1965ರ ಕಾಲಘಟ್ಟಗಳನ್ನು ಸಿನಿಮಾ ಹೊಂದಿದೆ.
- ಶಿವರಾಜ್ಕುಮಾರ್ ಅವರು ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಫೈಟಿಂಗ್ ಸೀನ್ ಮೂಲಕ ಅವರು ಎಂಟ್ರಿ ಕೊಡುತ್ತಾರೆ.
- ಫ್ಯಾನ್ಸ್ ಇಷ್ಟಪಟ್ಟಿರುವ ‘ಗಿಲ್ಲಕ್ಕೋ ಶಿವ ಗಿಲ್ಲಕ್ಕೋ..’ ಹಾಗೂ ‘ಪುಷ್ಪ ಪುಷ್ಪ..’ ಸೇರಿ ಮೊದಲಾರ್ಧದಲ್ಲಿ ಮೂರು ಹಾಡುಗಳು ಇವೆ.
- ಫೈಟ್ಗಳ ಮೂಲಕ ಶಿವಣ್ಣ ಎಂಟರ್ಟೇನ್ ಮಾಡ್ತಾರೆ. ಅವರ ಜತೆಗೆ ಅದಿತಿ ಸಾಗರ್ ಕೂಡ ಫೈಟ್ನಲ್ಲಿ ಸಾಥ್ ನೀಡಿದ್ದಾರೆ.
- ನಟಿ ಗಾನವಿ ಲಕ್ಷ್ಮಣ್ ಅವರಿಗೆ ಎರಡು ಶೇಡ್ನ ಪಾತ್ರ ಇದೆ. ಒಂದರಲ್ಲಿ ನಾಚಿಕೆ ಸ್ವಭಾವದವರಾಗಿ ಕಾಣಿಸಿಕೊಂಡರೆ, ಮತ್ತೊಂದರಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಇಡೀ ಚಿತ್ರದ ಸಸ್ಪೆನ್ಸ್ನ ಹೆಚ್ಚಿಸುತ್ತದೆ.
- ವಿಲನ್ಗಳನ್ನು ವೇದ ಸಾಯಿಸುತ್ತಾ ಇರುತ್ತಾನೆ. ಇದಕ್ಕೆ ಕಾರಣ ಏನು ಎಂಬುದು ಮೊದಲಾರ್ಧದಲ್ಲಿ ತಿಳಿಯುವುದಿಲ್ಲ. ದ್ವಿತೀಯಾರ್ಧಕ್ಕೆ ಈ ಸಸ್ಪೆನ್ಸ್ ಕ್ಯಾರಿ ಆಗಿದೆ.
- 1965 ಹಾಗೂ 1985ರ ಕಾಲ ಘಟ್ಟದಲ್ಲಿ ಸಿನಿಮಾ ಸಾಗುತ್ತದೆ. ಇದಕ್ಕಾಗಿ ಹಾಕಿರುವ ಸೆಟ್ ಗಮನ ಸೆಳೆದಿದೆ.
- ನಟಿ ಶ್ವೇತಾ ಚೆಂಗಪ್ಪ ಅವರು ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೆ ಒಂದು ಹಿನ್ನೆಲೆ ಇದೆ. ಅದು ಏನು ಎಂಬುದು ಮೊದಲಾರ್ಧದಲ್ಲಿ ರಿವೀಲ್ ಆಗಿಲ್ಲ. ಉಮಾಶ್ರೀ ಅವರ ಪಾತ್ರ ಮೊದಲಾರ್ಧದಲ್ಲಿ ಗಮನ ಸೆಳೆಯುತ್ತದೆ.
- ನಿರ್ದೇಶಕ ಎ. ಹರ್ಷ ಅವರು ಸಿನಿಮಾದ ಮೊದಲಾರ್ಧವನ್ನು ತುಂಬಾನೇ ರಗಡ್ ಆಗಿ ಕಟ್ಟಿಕೊಟ್ಟಿದ್ದಾರೆ.
ಇದನ್ನೂ ಓದಿ
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:19 am, Fri, 23 December 22