Updated on: Dec 23, 2022 | 8:54 AM
ಶಿವರಾಜ್ಕುಮಾರ್ ನಟನೆಯ ‘ವೇದ’ ಸಿನಿಮಾ ಇಂದು (ಡಿಸೆಂಬರ್ 23) ತೆರೆಗೆ ಬಂದಿದೆ. ಶಿವರಾಜ್ಕುಮಾರ್ ಹಾಗೂ ನಿರ್ದೇಶಕ ಎ. ಹರ್ಷ ಕಾಂಬಿನೇಷನ್ನಲ್ಲಿ ಮೂಡಿ ಬಂದ ನಾಲ್ಕನೇ ಸಿನಿಮಾ ಇದಾಗಿದೆ.
ಶಿವರಾಜ್ಕುಮಾರ್ ಅವರು ‘ವೇದ’ ಚಿತ್ರದಲ್ಲಿ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಈ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ಮೆರೆದಿದ್ದಾರೆ.
ಶಿವರಾಜ್ಕುಮಾರ್ ಅವರ ಆ್ಯಕ್ಷನ್ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಸಿನಿಮಾದ ಕಥೆ ಮೂರು ಕಾಲಘಟ್ಟದಲ್ಲಿ ಸಾಗಲಿದೆ ಅನ್ನೋದು ವಿಶೇಷ.
ಶಿವಣ್ಣ ಅವರ ವಯಸ್ಸು 60. ಈ ವಯಸ್ಸಿನಲ್ಲೂ ಅವರು ಮಸ್ತ್ ಆ್ಯಕ್ಷನ್ ಮೆರೆದಿದ್ದಾರೆ. ಇದು ಪ್ರೇಕ್ಷಕರಿಗೆ ಇಷ್ಟವಾಗಿದೆ.
ಶಿವರಾಜ್ಕುಮಾರ್ ಅವರ 125ನೇ ಚಿತ್ರ ಇದಾಗಿದೆ. ಈ ಕಾರಣದಿಂದಲೂ ಈ ಸಿನಿಮಾ ಶಿವಣ್ಣ ಅವರ ವೃತ್ತಿ ಜೀವನದಲ್ಲಿ ಪ್ರಮುಖ ಎನಿಸಿಕೊಂಡಿದೆ.