SK Bhagavan Funeral: ವಿಲ್ಸನ್​ ಗಾರ್ಡನ್​ನಲ್ಲಿ ಎಸ್​.ಕೆ. ಭಗವಾನ್​ ಅಂತ್ಯಕ್ರಿಯೆ; ಅಂತಿಮ ವಿದಾಯ ಹೇಳಿದ ಸೆಲೆಬ್ರಿಟಿಗಳು

SK Bhagavan | Dorai Bhagavan Funeral: ಅಯ್ಯಂಗಾರ್​ ಸಂಪ್ರದಾಯದಂತೆ ಎಸ್​.ಕೆ. ಭಗವಾನ್​ ಅವರ ಪುತ್ರರು ಅಂತಿಮ ವಿಧಿ ವಿಧಾನ ನೆರವೇರಿಸಿದರು. ವಿಲ್ಸನ್​ ಗಾರ್ಡನ್​ ವಿದ್ಯುತ್​ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.

SK Bhagavan Funeral: ವಿಲ್ಸನ್​ ಗಾರ್ಡನ್​ನಲ್ಲಿ ಎಸ್​.ಕೆ. ಭಗವಾನ್​ ಅಂತ್ಯಕ್ರಿಯೆ; ಅಂತಿಮ ವಿದಾಯ ಹೇಳಿದ ಸೆಲೆಬ್ರಿಟಿಗಳು
ಎಸ್.ಕೆ. ಭಗವಾನ್

Updated on: Feb 20, 2023 | 6:10 PM

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಎಸ್​.ಕೆ. ಭಗವಾನ್​ (SK Bhagavan) ಅವರನ್ನು ಕಳೆದುಕೊಂಡಿರುವುದು ನೋವಿನ ಸಂಗತಿ. ಇಂದು (ಫೆ.20) ನಿಧನರಾದ ಅವರಿಗೆ ಚಂದನವನದ ಸೆಲೆಬ್ರಿಟಿಗಳು, ಅಭಿಮಾನಿಗಳು, ಆಪ್ತರು ಹಾಗೂ ಕುಟುಂಬದವರು ಅಂತಿಮ ವಿದಾಯ ಹೇಳಿದ್ದಾರೆ. ವಿಲ್ಸನ್​ ಗಾರ್ಡನ್​ ಚಿತಾಗಾರದಲ್ಲಿ ಎಸ್​.ಕೆ. ಭಗವಾನ್​ ಅವರ ಅಂತ್ಯಕ್ರಿಯೆ (SK Bhagavan Funeral) ನಡೆದಿದೆ. ಸಂಜೆ 5 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ಮಾಡಲಾಗಿದ್ದು, ಅವರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ದೊರೈ-ಭಗವಾನ್​ (Dorai Bhagavan) ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಹಲವು ಸೂಪರ್​ ಹಿಟ್​ ಸಿನಿಮಾಗಳ ಮೂಲಕ ಅವರು ಚಂದನವನವನ್ನು ಶ್ರೀಮಂತಗೊಳಿಸಿದ್ದರು.

ಎಸ್​.ಕೆ. ಭಗವಾನ್​ ಅವರಿಗೆ 90 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಸೋಮವಾರ ಮುಂಜಾನೆ 6 ಗಂಟೆಗೆ ಕೊನೆಯುಸಿರು ಎಳೆದರು. ಅವರ ನಿಧನದ ಸುದ್ದಿ ತಿಳಿದು ಅನೇಕ ಗಣ್ಯರು ಸಂತಾಪ ಸೂಚಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಕಂಬನಿ ಮಿಡಿದರು.

ಇದನ್ನೂ ಓದಿ: SK Bhagavan: ಖ್ಯಾತ ಹಿರಿಯ ನಿರ್ದೇಶಕ ಎಸ್​ಕೆ ಭಗವಾನ್​ ದೊರೈ ಭಗವಾನ್​​ ಆಗಿದ್ದು ಹೇಗೆ? ಇಲ್ಲಿದೆ ಕುತೂಹಲಕಾರಿ ಸಂಗತಿ

ಇದನ್ನೂ ಓದಿ
Dorai Bhagavan: ‘ಡಾ. ರಾಜ್​​ ಕುಟುಂಬಕ್ಕೆ ಬಲಗೈ ಬಂಟ ಆಗಿದ್ದರು’: ಎಸ್​.ಕೆ. ಭಗವಾನ್​​ ಕುರಿತ ನೆನಪು ತೆರೆದಿಟ್ಟ ಚಿನ್ನೇಗೌಡ
SK Bhagavan: ಕನ್ನಡದಲ್ಲಿ ಮೊಟ್ಟಮೊದಲ ಬಾಂಡ್ ಶೈಲಿ ಸಿನಿಮಾ ತಯಾರಿಸಿದ ದೊರೆ-ಭಗವಾನ್ ಜೋಡಿಯ ಭಗವಾನ್ ಇನ್ನಿಲ್ಲ
SK Bhagavan: ಖ್ಯಾತ ಹಿರಿಯ ನಿರ್ದೇಶಕ ಎಸ್​ಕೆ ಭಗವಾನ್​ ದೊರೈ ಭಗವಾನ್​​ ಆಗಿದ್ದು ಹೇಗೆ? ಇಲ್ಲಿದೆ ಕುತೂಹಲಕಾರಿ ಸಂಗತಿ
SK Bhagavan: ಚಿತ್ರರಂಗದಲ್ಲಿ ಮುಗಿಯಿತು ಭಗವಾನ್ ಅಧ್ಯಾಯ; ಖ್ಯಾತ ನಿರ್ದೇಶಕ ನಿಧನ

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಎಸ್​.ಕೆ. ಭಗವಾನ್​ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಬಂದು ಅಂತಿಮ ನಮನ ಸಲ್ಲಿಸಿದರು. ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​, ಸುಂದರ್​ ರಾಜ್​, ಅನಂತ್​ ನಾಗ್​, ಗಣೇಶ್​ ಮುಂತಾದ ಕಲಾವಿದರು ಹಿರಿಯ ನಿರ್ದೇಶಕನ ಅಂತಿಮ ದರ್ಶನ ಪಡೆದರು.

ಇದನ್ನೂ ಓದಿ: Dorai Bhagavan: ‘ಡಾ. ರಾಜ್​​ ಕುಟುಂಬಕ್ಕೆ ಬಲಗೈ ಬಂಟ ಆಗಿದ್ದರು’: ಎಸ್​.ಕೆ. ಭಗವಾನ್​​ ಕುರಿತ ನೆನಪು ತೆರೆದಿಟ್ಟ ಚಿನ್ನೇಗೌಡ

ಸಂಜೆ ನಾಲ್ಕು ಗಂಟೆಗೆ ರವೀಂದ್ರ ಕಲಾಕ್ಷೇತ್ರದಿಂದ ವಿಲ್ಸನ್​ ಗಾರ್ಡನ್​ ಚಿತಾಗಾರಕ್ಕೆ ಎಸ್​.ಕೆ. ಭಗವಾನ್​ ಅವರ ಪಾರ್ಥೀವ ಶರೀರವನ್ನು ತರಲಾಯಿತು. ಅಯ್ಯಂಗಾರ್​ ಸಂಪ್ರದಾಯದಂತೆ ಪುತ್ರರು ಅಂತಿಮ ವಿಧಿ ವಿಧಾನ ಕಾರ್ಯಗಳನ್ನು ನೆರವೇರಿಸಿದರು. ವಿದ್ಯುತ್​ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.

ನೇತ್ರದಾನ ಮಾಡಿದ ನಿರ್ದೇಶಕ ಭಗವಾನ್​:

ಎಸ್​.ಕೆ. ಭಗವಾನ್​ ಅವರು ಡಾ. ರಾಜ್​ಕುಮಾರ್​ ಅವರಿಗೆ ತುಂಬ ಆಪ್ತರಾಗಿದ್ದರು. ಅಣ್ಣಾವ್ರ ರೀತಿಯೇ ಭಗವಾನ್​ ಕೂಡ ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ. ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿ ಆಗಿದ್ದಾರೆ. ಬಹಳ ಹಿಂದೆಯೇ ಅವರು ನೇತ್ರದಾನಕ್ಕೆ ನೋಂದಣಿ ಮಾಡಿದ್ದರು. ಇದರಿಂದ ನಾಲ್ಕು ಮಂದಿಗೆ ದೃಷ್ಟಿ ಸಿಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:10 pm, Mon, 20 February 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us