‘ಮಲಗಿದ್ದವನಿಗೆ ಕರೆ ಮಾಡಿ ಹಾಡು ಹೇಳಿಸ್ತಾರೆ’: ಸುದೀಪ್ ಬಗ್ಗೆ ವಿಜಯ್ ಪ್ರಕಾಶ್ ಮಾತು

| Updated By: ಮಂಜುನಾಥ ಸಿ.

Updated on: Feb 20, 2025 | 4:33 PM

Vijay Prakash Birthday: ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಲವು ಭಾಷೆಗಳಲ್ಲಿ ಹಲವು ಹಾಡುಗಳನ್ನು ಹಾಡಿದ್ದಾರೆ. ವಿಜಯ್ ಪ್ರಕಾಶ್ ಮತ್ತು ಸುದೀಪ್ ನಡುವೆ ಆಪ್ತ ಗೆಳೆತನ ಇದೆ. ಸುದೀಪ್ ಮಧ್ಯ ರಾತ್ರಿ ಕರೆ ಮಾಡಿ ವಿಜಯ್ ಪ್ರಕಾಶ್​ಗೆ ಹಾಡುಗಳನ್ನು ಕೇಳಿಸುತ್ತಿದ್ದರಂತೆ. ಈ ಬಗ್ಗೆ ವಿಜಯ್ ಪ್ರಕಾಶ್ ಹಿಂದೊಮ್ಮೆ ಮಾತನಾಡಿದ್ದರು.

‘ಮಲಗಿದ್ದವನಿಗೆ ಕರೆ ಮಾಡಿ ಹಾಡು ಹೇಳಿಸ್ತಾರೆ’: ಸುದೀಪ್ ಬಗ್ಗೆ ವಿಜಯ್ ಪ್ರಕಾಶ್ ಮಾತು
Sudeep Vijay Prakash
Follow us on

ವಿಜಯ್ ಪ್ರಕಾಶ್ ಹಾಗೂ ಸುದೀಪ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇಬ್ಬರೂ ಅನೇಕ ಸಂದರ್ಭಗಳಲ್ಲಿ ಭೇಟಿ ಆಗುತ್ತಾರೆ. ಇಂದು (ಫೆಬ್ರವರಿ 21) ವಿಜಯ್ ಪ್ರಕಾಶ್ ಜನ್ಮದಿನ. ಈ ಸಂದರ್ಭದಲ್ಲಿ ವಿಜಯ್ ಪ್ರಕಾಶ್ ಕುರಿತು ಅಪರೂಪದ ಮಾಹಿತಿಗಳ ಬಗ್ಗೆ ನೋಡೋಣ. ವಿಜಯ್ ಪ್ರಕಾಶ್ ಅವರಿಗೆ ಮಧ್ಯರಾತ್ರಿ ಸುದೀಪ್ ಕರೆ ಮಾಡಿದ ಉದಾಹರಣೆ ಇದೆಯಂತೆ. ಏಕೆ ಎಂಬುದನ್ನು ವಿಜಯ್ ಪ್ರಕಾಶ್ ಅವರು ಈ ಮೊದಲು ಹೇಳಿಕೊಂಡಿದ್ದರು.

ವಿಜಯ್ ಪ್ರಕಾಶ್ ಅವರು ‘ಸರಿಗಮಪ’ ರಿಯಾಲಿಟಿ ಶೋನ ಜಡ್ಜ್ ಆಗಿದ್ದಾರೆ. ಈ ವರ್ಷದ ಆರಂಭದ ಮೊದಲ ಎಪಿಸೋಡ್​ಗೆ ಕಿಚ್ಚ ಸುದೀಪ್ ಅವರು ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ವಿಜಯ್ ಪ್ರಕಾಶ್ ಅವರು ಸುದೀಪ್ ಬಗ್ಗೆ ಅಪರೂಪದ ವಿಚಾರ ಹೇಳಿಕೊಂಡಿದ್ದರು. ಇದನ್ನು ಕೇಳಿ ಅನೇಕರು ಅಚ್ಚರಿ ಹೊರಹಾಕಿದ್ದರು.

‘ಮಧ್ಯರಾತ್ರಿ ಆಗಿರುತ್ತದೆ. ಆಗ ಸುದೀಪ್ ಅವರು ಕರೆ ಮಾಡಿ ನನಗೆ ಈ ಹಾಡಿನ ಎರಡು ಸಾಲುಗಳನ್ನು ಹೇಳುವಂತೆ ಕೇಳುತ್ತಾರೆ. ನಾನು ಬೇಸರ ಮಾಡಿಕೊಳ್ಳುವುದಿಲ್ಲ. ಎದ್ದು ಕುಳಿತು ನಾನು ರಾಗಬದ್ಧವಾಗಿ ಹಾಡನ್ನು ಹೇಳುತ್ತೇನೆ. ಅದನ್ನು ನಾನು ಜವಾಬ್ದಾರಿ ಎಂದು ಪರಿಗಣಿಸಿದ್ದೇನೆ’ ಎಂಬುದು ವಿಜಯ್ ಪ್ರಕಾಶ್ ಮಾತು.

ಸುದೀಪ್ ನಟನೆಯ ಸಿನಿಮಾಗಳಲ್ಲಿ ಯಾವುದಾದರೂ ಹಾಡು ಸೂಕ್ತ ಎಂದು ಅನಿಸಿದರೆ ಅದನ್ನು ವಿಜಯ್ ಪ್ರಕಾಶ್ ಬಳಿಯೇ ಹಾಡಿಸುತ್ತಾರಂತೆ ಸುದೀಪ್. ಈ ಮೊದಲು ರಿಲೀಸ್ ಆದ ‘ಮ್ಯಾಕ್ಸ್’ ಚಿತ್ರದ ಹಾಡನ್ನು ವಿಜಯ್ ಪ್ರಕಾಶ್ ಬಳಿ ಹಾಡಿಸಿದ್ದರು ಸುದೀಪ್. ಹೀಗಾಗಿ, ಈ ಗೆಳೆತನ ಈಗಲೂ ಮುಂದುವರಿದಿದೆ.

ಇದನ್ನೂ ಓದಿ:‘ಪಾರ್ಟಿ ಅನ್ನೋದು ವೈಯಕ್ತಿಕ’; ಕಿಚ್ಚ ಸುದೀಪ್ ಅವರ ಆಲೋಚೆನೆಯೇ ಬೇರೆ

ಸುದೀಪ್ ಅವರು ಸಾಕಷ್ಟು ಕಷ್ಟದಿಂದ ಚಿತ್ರರಂಗದಲ್ಲಿ ನೆಲೆಕಂಡುಕೊಂಡಿದ್ದಾರೆ. ಅವರು ಎಲ್ಲಿಯೂ ತಂದೆ-ತಾಯಿ ಹೆಸರು ಬಳಸಿಕೊಂಡಿಲ್ಲ. ಅದೇ ರೀತಿ ವಿಜಯ್ ಪ್ರಕಾಶ್ ಅವರು ಮುಂಬೈನಲ್ಲಿ ಇದ್ದು ಅಲ್ಲಿ ಜಿಂಗಲ್ಸ್ನ ಹಾಡಿ ಆ ಬಳಿಕ ಕನ್ನಡದ ಹಾಡುಗಳನ್ನು ಹಾಡಲು ಪ್ರಾರಂಭಿಸಿದರು. ಅವರ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಿದೆ. ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ಅವರು ಹಲವು ಹಾಡುಗಳನ್ನು ಹಾಡಿದ್ದಾರೆ. ಈ ಮೂಲಕ ಅವರು ಗಮನ ಸೆಳೆದಿದ್ದಾರೆ. ಪರಭಾಷೆಯವರಿಗೂ ಅವರ ಧ್ವನಿ ಇಷ್ಟ ಆಗಿದೆ ಅನ್ನೋದು ವಿಶೇಷ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ