ಗಣರಾಜ್ಯೋತ್ಸವಕ್ಕೆ ವಿಜಯ್ ರಾಘವೇಂದ್ರ ಸಿನಿಮಾ ‘ಕೇಸ್‌ ಆಫ್ ಕೊಂಡಾಣ’ ರಿಲೀಸ್; ವಿಶೇಷತೆ ಏನು?

|

Updated on: Jan 18, 2024 | 2:23 PM

‘ಕೇಸ್‌ ಆಫ್ ಕೊಂಡಾಣ’ ಒಂದು ರಾತ್ರಿಯಲ್ಲಿ ನಡೆಯುವ ಕಥೆ. ಸಂಜೆ ಆರಂಭ ಆಗುವ ಕಥೆ ಬೆಳಿಗ್ಗೆ ಪೂರ್ಣಗೊಳ್ಳುತ್ತದೆ. ವಿಜಯ್ ರಾಘವೇಂದ್ರ ಸಿನಿಮಾ ವಿಶೇಷತೆ ಕುರಿತು ಮಾಹಿತಿ ನೀಡಿದ್ದಾರೆ.

ಗಣರಾಜ್ಯೋತ್ಸವಕ್ಕೆ ವಿಜಯ್ ರಾಘವೇಂದ್ರ ಸಿನಿಮಾ ‘ಕೇಸ್‌ ಆಫ್ ಕೊಂಡಾಣ’ ರಿಲೀಸ್; ವಿಶೇಷತೆ ಏನು?
ವಿಜಯ್ ರಾಘವೇಂದ್ರ-ಭಾವನಾ
Follow us on

ಕಳೆದ ವರ್ಷ ವಿಜಯ ರಾಘವೇಂದ್ರ (Vijay Raghavendra) ಬಾಳಲ್ಲಿ ದುಃಖದ ಘಟನೆ ನಡೆಯಿತು. ಅವರ ಪತ್ನಿ ಸ್ಪಂದನಾ ಅವರು ನಿಧನ ಹೊಂದಿದರು. ಈ ನೋವಿನಿಂದ ಅವರು ನಿಧಾನವಾಗಿ ಹೊರ ಬರುತ್ತಿದ್ದಾರೆ. ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡು ದುಃಖವನ್ನು ಮರೆಯಲು ಪ್ರಯತ್ನಿಸುತ್ತಿದ್ದಾರೆ. ಕಳೆದ ವರ್ಷ ಅವರ ನಟನೆಯ ಕೆಲವು ಸಿನಿಮಾಗಳು ರಿಲೀಸ್ ಆದವು. ಈ ವರ್ಷದ ಆರಂಭದಲ್ಲೇ ವಿಜಯ ರಾಘವೇಂದ್ರ ಖಾತೆ ತೆರೆಯುತ್ತಿದ್ದಾರೆ. ವಿಜಯ್ ರಾಘವೇಂದ್ರ ನಟನೆಯ ‘ಕೇಸ್‌ ಆಫ್ ಕೊಂಡಾಣ’ ಸಿನಿಮಾ ಜನವರಿ 26ರಂದು ರಿಲೀಸ್ ಆಗಲಿದೆ.

‘ಕೇಸ್‌ ಆಫ್ ಕೊಂಡಾಣ’ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರಿಗೆ ಜೊತೆಯಾಗಿ ಭಾವನಾ ಮೆನನ್‌ ಕಾಣಿಸಿಕೊಂಡಿದ್ದಾರೆ. ದೇವಿಪ್ರಸಾದ್‌ ಶೆಟ್ಟಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಮೊದಲು ಅವರು ‘ಸೀತಾರಾಮ್‌ ಬಿನೋಯ್‌’ ಹೆಸರಿನ ಸಿನಿಮಾ ಮಾಡಿದ್ದರು. ಈಗ ಅವರು ಇನ್ವೆಸ್ಟಿಗೇಷನ್‌ ಜಾನರ್‌ನ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜನವರಿ 26ರಂದು ಸಿನಿಮಾ ತೆರೆಕಾಣಲಿದೆ.

‘ಕೇಸ್‌ ಆಫ್ ಕೊಂಡಾಣ’ ಒಂದು ರಾತ್ರಿ ನಡೆಯುವ ಕಥೆ. ಸಂಜೆ ಕಥೆ ಆರಂಭ ಆಗಿ ಬೆಳಿಗ್ಗೆ ಪೂರ್ಣಗೊಳ್ಳುತ್ತದೆ. ವಿಜಯ್ ರಾಘವೇಂದ್ರ ಸಿನಿಮಾ ವಿಶೇಷತೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ‘ಕೇಸ್ ಕೊಂಡಾಣದ ಬಹುತೇಕ ಶೂಟ್ ರಾತ್ರಿ ನಡೆದಿದೆ. ಆ್ಯಕ್ಷನ್ ಹಾಗೂ ಎಮೋಷನ್ ಒಟ್ಟಿಗೆ ಸಾಗುತ್ತದೆ. ದೇವಿ ಪ್ರಸಾದ್ ಅವರಿಗೆ ಸಾಕಷ್ಟು ಕ್ಲಾರಿಟಿ ಇದೆ. ಒಬ್ಬ ನಟನಾಗಿ ನಾನು ಬಹಳಷ್ಟು ಕಲಿತಿದ್ದೇನೆ. ತುಂಬಾ ಖುಷಿಯಿಂದ ನಟಿಸಿದ್ದೇನೆ. ನಮ್ಮ ಸಿನಿಮಾದ ಕಂಟೆಂಟ್ ಮೇಲೆ ನಂಬಿಕೆ ಇದೆ’ ಎಂದಿದ್ದಾರೆ ಅವರು.

ಈ ಚಿತ್ರವನ್ನು ಸಾತ್ವಿಕ್ ಹೆಬ್ಬಾರ್ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ದೇವಿಪ್ರಸಾದ್ ಅವರೂ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಕೊಂಡಾಣ ಎಂಬುದು ಕಾಲ್ಪನಿಕ ಸ್ಥಳ. ಇಡೀ ಕಥೆ ಅಲ್ಲಿಯೇ ಸಾಗುತ್ತದೆ. ಖುಷಿ ರವಿ ಹಾಗೂ ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ವಿಜಯ್ ರಾಘವೇಂದ್ರ ನಟಿಸಿದ್ದಾರೆ.

ಇದನ್ನೂ ಓದಿ: ‘ಸ್ಪಂದನಾ ಸಿನಿಮಾ ನೋಡಿದ್ರೆ ಇಷ್ಟಪಡುತ್ತಿದ್ದಳು’; ‘ಕದ್ದ ಚಿತ್ರ’ದ ಬಗ್ಗೆ ವಿಜಯ್ ರಾಘವೇಂದ್ರ ಭಾವುಕ ಮಾತು

‘ಕೇಸ್‌ ಆಫ್ ಕೊಂಡಾಣ’ ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ನೀಡಿದ್ದಾರೆ. ವಿಶ್ವ ಜಿತ್ ರಾವ್ ಛಾಯಾಗ್ರಹಣ ಮಾಡಿದ್ದಾರೆ. ಭವಾನಿ ಶಂಕರ್ ಆನೆಕಲ್ಲು ಕಲಾ ನಿರ್ದೇಶನ ಹಾಗೂ ಶಶಾಂಕ್ ನಾರಾಯಣ್ ಸಂಕಲನವಿದೆ. ವಿಶ್ವ ಜಿತ್ ರಾವ್ ಹಾಗೂ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಜೋಗಿ  ಸಂಭಾಷಣೆ ಬರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:22 pm, Thu, 18 January 24