Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ ರಾಘವೇಂದ್ರರ ಥ್ರಿಲ್ಲರ್ ಕಥಾನಕ ‘ಮರೀಚಿ’ ತೆರೆಗೆ ಸಿದ್ಧ

Vijay Raghavendra: ವಿಜಯ್ ರಾಘವೇಂದ್ರ ನಟನೆಯ ‘ಮರೀಚಿ’ ಸಿನಿಮಾ ಡಿಸೆಂಬರ್ 08ಕ್ಕೆ ತೆರೆಗೆ ಬರುತ್ತಿದೆ. ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಜೊತೆಗೆ ಸೋನು ಗೌಡ ನಾಯಕಿಯಾಗಿ ನಟಿಸಿದ್ದಾರೆ.

ವಿಜಯ ರಾಘವೇಂದ್ರರ ಥ್ರಿಲ್ಲರ್ ಕಥಾನಕ ‘ಮರೀಚಿ’ ತೆರೆಗೆ ಸಿದ್ಧ
ಮರೀಚಿ
Follow us
ಮಂಜುನಾಥ ಸಿ.
|

Updated on: Dec 07, 2023 | 9:52 PM

ವಿಜಯ್ ರಾಘವೇಂದ್ರ (Vijay Raghavendra) ಜೀವನದ ಅತ್ಯಂತ ನೋವಿನ ಸಮಯವಿದು. ನೋವನ್ನು ಮೀರಿ ಜನರನ್ನು ರಂಜಿಸುವ ಕಾರ್ಯದಲ್ಲಿ ವಿಜಯ್ ತೊಡಗಿಕೊಂಡಿದ್ದಾರೆ. ವಿಜಯ್​ರ ಪತ್ನಿ ಅಗಲಿದ ಬಳಿಕ ವಿಜಯ್​ರ ಎರಡನೇ ಸಿನಿಮಾ ಇದೀಗ ಬಿಡುಗಡೆ ಆಗುತ್ತಿದೆ. ವಿಜಯ್ ರಾಘವೇಂದ್ರ ಹಾಗೂ ಸೋನು ಗೌಡ ನಟಿಸಿರುವ ‘ಮರೀಚಿ’ ಸಿನಿಮಾ ಡಿಸೆಂಬರ್ 8ಕ್ಕೆ ಚಿತ್ರ ತೆರೆಗೆ ಬರುತ್ತಿದೆ. ಈಗಾಗಲೇ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು ಗಮನ ಸೆಳೆದಿದೆ. ಸಿನಿಮಾದ ‘ಮಸಣವು ಮನಸು‘ ಹಾಡನ್ನು ಇತ್ತೀಚೆಗೆ ರೆಬಲ್ ಸ್ಟಾರ್ ಅಂಬರೀಶ್ ಪುಣ್ಯ ಭೂಮಿಯಲ್ಲಿ ಅನಾವರಣ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸಿದ್ಧ್ರುವ್, ‘ಡಿಸೆಂಬರ್ 8ರಂದು ಸಿನಿಮಾ ಬಿಡುಗಡೆ ಆಗುತ್ತಿದೆ. ಅಂಬರೀಶ್ ಅಣ್ಣನ ಸಿನಿಮಾಗಳ ನೋಡುತ್ತಾ ಬೆಳೆದವರು ನಾವು. ಅವರ ಅಭಿಮಾನಿಯಾಗಿದ್ದೇನೆ. ನಾನು ಮೊದಲ ಸಿನಿಮಾ ಮಾಡುವಾಗ ಅಂಬರೀಶಣ್ಣ ಕ್ಲ್ಯಾಪ್ ಮಾಡಬೇಕೆಂಬ ಆಸೆ ಇತ್ತು. ಆದ್ರೆ ಅವರು ನಮ್ಮದೊಂದಿಗೆ ಇಲ್ಲ. ಹೀಗಾಗಿ ಅವರ ಮುಂದೆಯೇ ಒಂದು ಸಾಂಗ್ ರಿಲೀಸ್ ಮಾಡಬೇಕು ಎನಿಸಿತು. ನಮ್ಮ ತಂಡದವರು ತೀರ್ಮಾನ ಮಾಡಿ ಇಲ್ಲಿ ಸಾಂಗ್ ಬಿಡುಗಡೆ ಮಾಡಲು ನಿರ್ಧಾರ ತೆಗೆದುಕೊಂಡೆವು. ಈ ಸಾಹಿತ್ಯದ ಹಾಡಿಗೂ ಜಾಗಕ್ಕೂ ಸಂಬಂಧವಿದೆ. ಲಿರಿಕಲ್ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಸಾಹಿತ್ಯ ಅದ್ಭುತವಾಗಿದೆ. ಸಿನಿಮಾ ತುಂಬ ಚೆನ್ನಾಗಿ ಬಂದಿದೆ. ಥಿಯೇಟರ್ ನಲ್ಲಿ ಮರೀಚಿ ಸಿನಿಮಾ ನೋಡಿ ಎಂದರು.

‘ಸ್ಪಂದನಾ ಸಿನಿಮಾ ನೋಡಿದ್ರೆ ಇಷ್ಟಪಡುತ್ತಿದ್ದಳು’; ‘ಕದ್ದ ಚಿತ್ರ’ದ ಬಗ್ಗೆ ವಿಜಯ್ ರಾಘವೇಂದ್ರ ಭಾವುಕ ಮಾತು

ಮಸಣವು ಮನಸು ಎಂಬ ಹೃದಯ ಸ್ಪರ್ಶಿ ಗೀತೆಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದು, ಕೆ. ಎಸ್ ಹರಿಶಂಕರ್ ಧ್ವನಿಯಾಗಿದ್ದಾರೆ. ಮರೀಚಿ ಲವ್ ಸ್ಟೋರಿ ಒಳಗೊಂಡಂತೆ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ, ಒಂದಿಷ್ಟು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವ ಇರುವ ಸಿದ್ಧ್ರುವ್ ನಿರ್ದೇಶನದ ಮೊದಲ ಸಿನಿಮಾವಿದು. ಚಿತ್ರಕ್ಕೆ ಕಥೆ, ಚಿತ್ರಕಥೆ ಕೂಡ ಇವರೇ ಬರೆದಿದ್ದಾರೆ . ವಿಜಯ ರಾಘವೇಂದ್ರ, ಸೋನು ಗೌಡ ಜತೆಗೆ ಅಭಿ ದಾಸ್, ಸ್ಪಂದನ ಸೋಮಣ್ಣ, ಆರ್ಯನ್, ಶೃತಿ ಪಾಟೀಲ್, ಗೋಪಾಲ್ ಕೃಷ್ಣ ದೇಶಪಾಂಡೆ, ಅರುಣ ಬಾಲರಾಜ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ಮನೋಹರ್ ಜೋಶಿ ಛಾಯಾಗ್ರಹಣ, ಜ್ಯೂಡ ಸ್ಯಾಂಡಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಎಸ್.ಎಸ್. ಆರ್‌. ಕೆ ಬ್ಯಾನರ್ ನಡಿ ನಿರ್ದೇಶಕ ಸಿದ್ಧ್ರುವ್ ಹಾಗೂ ಸಂತೋಷ್ ಮಾಯಪ್ಪ ಚಿತ್ರವನ್ನು ನಿರ್ಮಿಸಿದ್ದಾರೆ. . ಸಸ್ಪೆನ್ಸ್ ಥ್ರಿಲ್ಲರ್‌ ಅಂಶಗಳ ಮರೀಚಿ ಟ್ರೇಲರ್ ನಿರೀಕ್ಷೆ ಹೆಚ್ಚಿಸಿದ್ದು, ಪೊಲೀಸ್ ಅವತಾರದಲ್ಲಿ ವಿಜಯ್ ರಾಘವೇಂದ್ರ ಮಿಂಚಿದ್ದಾರೆ. ಡಿಸೆಂಬರ್ 8ಕ್ಕೆ ರಾಜ್ಯಾದ್ಯಂತ ಸಿದ್ಧ್ರುವ್ ಚೊಚ್ಚಲ ಕನಸ್ಸು ಪ್ರೇಕ್ಷಕರ ಎದುರು ಹಾಜರಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ