ಎರಡನೇ ಕೇಸ್ ಮೂಲಕ ಬಂದ ಸೀತಾರಾಮ್; ಮತ್ತೆ ಖಾಕಿ ತೊಟ್ಟ ವಿಜಯ್ ರಾಘವೇಂದ್ರ

ವಿಜಯ್ ರಾಘವೇಂದ್ರ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಚಿತ್ರ ಫೆಬ್ರವರಿ 20ರಂದು ತೆರೆಗೆ ಬರಲಿದೆ. 2021ರ 'ಸೀತಾರಾಮ್ ಬಿಣೋಯ್ ಕೇಸ್ ನಂಬರ್ 18' ಚಿತ್ರದ ಸೀಕ್ವೆಲ್ ಇದಾಗಿದ್ದು, ವಿಜಯ್ ರಾಘವೇಂದ್ರ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಟ್ರೇಲರ್ ಬಿಡುಗಡೆಯಾಗಿದ್ದು, ಸರಣಿ ಕೊಲೆಗಳನ್ನು ತಡೆಯುವ ನಾಯಕನ ರೋಚಕ ಕಥೆ ಹೇಳುತ್ತದೆ.

ಎರಡನೇ ಕೇಸ್ ಮೂಲಕ ಬಂದ ಸೀತಾರಾಮ್; ಮತ್ತೆ ಖಾಕಿ ತೊಟ್ಟ ವಿಜಯ್ ರಾಘವೇಂದ್ರ
ವಿಜಯ್ ರಾಘವೇಂದ್ರ

Updated on: Feb 10, 2026 | 7:39 AM

ವಿಜಯ್ ರಾಘವೇಂದ್ರ (Vijay Raghavendra) ನಟನೆಯ ‘ಸೀತಾರಾಮ್ ಬಿಣೋಯ್ ಕೇಸ್ ನಂಬರ್ 18’ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರು ಪೊಲೀಸ್ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ರಿಲೀಸ್ ಆಗಿದ್ದು 2021ರ ಆಗಸ್ಟ್ 15ರಂದು. ಈಗ ಐದು ವರ್ಷಗಳ ಬಳಿಕ ಈ ಚಿತ್ರಕ್ಕೆ ಸೀಕ್ವೆಲ್ ತರಲಾಗುತ್ತಿದೆ. ಆ ಚಿತ್ರದ ಹೆಸರು ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’. ಈ ಚಿತ್ರ ಕೂಡ ಸಸ್ಪೆನ್ಸ್​ ಶೈಲಿಯಲ್ಲಿ ಮೂಡಿ ಬಂದಿದೆ. ಫೆಬ್ರವರಿ 20ರಂದು ಸಿನಿಮಾ ರಿಲೀಸ್ ಆಗಲಿದೆ.

‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್​ ಅಲ್ಲಿ ವಿಜಯ್ ರಾಘವೇಂದ್ರ ಅವರು ಖಾಕಿ ತೊಟ್ಟು ಮಿಂಚಿದ್ದಾರೆ. ಈ ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ. ಒಂದು ವಾರದ ಒಳಗೆ ಎರಡು ಕೊಲೆ ನಡೆಯುತ್ತದೆ. ಮುಂದಾಗೋ ಕೊಲೆ ತಡೆಯೋದು ಮತ್ತು ಕೊಲೆಗಾರನ ಹಿಡಿಯೋ ಜವಾಬ್ದಾರಿ ಕಥಾ ನಾಯಕನ ಮೇಲಿದೆ.

‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ಗೋಪಾಲ್ ಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಪವನ್ ಒಡೆಯರ್ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ದೇವಿ ಪ್ರಸಾದ್ ಶೆಟ್ಟಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ಫ್ಲೈಯಿಂಗ್ ಎಲಿಫಂಟ್ ಸ್ಟೋರಿ ಟೆಲ್ಲರ್ಸ್’ ಸಿನಿಮಾ ಮೂಲಕ ದೇವಿ ಪ್ರಸಾದ್ ಶೆಟ್ಟಿ ಹಾಗೂ ಸಾರ್ವಿಕ್ ಹೆಬ್ಬಾರ್ ಈ ಚಿತ್ರ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಜೀ5ನಲ್ಲಿ ಬರ್ತಿದೆ ‘ರಾಕ್ಷಸ’ ವೆಬ್ ಸೀರಿಸ್; ಒಟಿಟಿ ಜಗತ್ತಿಗೆ ವಿಜಯ್ ರಾಘವೇಂದ್ರ ಎಂಟ್ರಿ

ಈಗ ಬರ್ತಿರೋದು ಎರಡನೇ ಕೇಸ್. ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಬಳಿ ಇನ್ನೂ ಒಂದು ಕಥೆ ಇದೆಯಂತೆ. ಈ ಚಿತ್ರದ ಬಳಿಕ ವಿಜಯ್ ಅವರು ಆ ಸಿನಿಮಾದಲ್ಲಿ ಕಾಣಿಸಿಕೊಳ್ಳೋ ಸಾಧ್ಯತೆ ಇದೆ. ಸಿನಿಮಾ ರಿಲೀಸ್ ಬಳಿಕ ನಿರ್ದೇಶಕರು ಮುಂದಿನ ದಿನಗಳಲ್ಲಿ ಆಲೋಚನೆ ಮಾಡಲಿದ್ದಾರಂತೆ.

YouTube video player

ಇತ್ತೀಚಿನ ದಿನಗಳಲ್ಲಿ ಸಿನಿಮಾ ಮಾಡೋದು ಒಂದು ದೊಡ್ಡ ಸವಾಲಿನ ಕೆಲಸ. ಸಿನಿಮಾ ಬಿಡುಗಡೆ ಮಾಡೋದು ಕೂಡ ಅಷ್ಟೇ ದೊಡ್ಡ ಚಾಲೆಂಜ್ ಎಂಬುದು ವಿಜಯ್ ರಾಘವೇಂದ್ರ ಅವರ ಅಭಿಪ್ರಾಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us