ಪುನೀತ್​ ರಾಜ್​ಕುಮಾರ್​ಗೆ ನಮನ ಸಲ್ಲಿಸಿದ ರಾಮ್​ ಚರಣ್, ವಿಜಯ್​ ಸೇತುಪತಿ​

ಪುನೀತ್ ಸಮಾಧಿಗೆ ಭೇಟಿ ಬಳಿಕ ವಿಜಯ್ ಸೇತುಪತಿ ಮಾತನಾಡಿದ್ದಾರೆ. ಪುನೀತ್​ ಅವರನ್ನು ಇದುವರೆಗೆ ಭೇಟಿ ಆಗುವುದಕ್ಕೆ ಆಗಲಿಲ್ಲ. ಪುನೀತ್​ರನ್ನ ಭೇಟಿಯಾಗುವ ಆ ಸೌಭಾಗ್ಯ ನನಗೆ ಸಿಕ್ಕಿಲ್ಲ ಎಂದಿದ್ದಾರೆ.

ಪುನೀತ್​ ರಾಜ್​ಕುಮಾರ್​ಗೆ ನಮನ ಸಲ್ಲಿಸಿದ ರಾಮ್​ ಚರಣ್, ವಿಜಯ್​ ಸೇತುಪತಿ​
ರಾಮ್​ ಚರಣ್​-ವಿಜಯ್​ ಸೇತುಪತಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 03, 2021 | 10:00 PM

ನಟ ಪುನೀತ್​ ರಾಜ್​ಕುಮಾರ್​ ನಿಧನ ಹೊಂದಿದ ನಂತರದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಪುನೀತ್​ ರಾಜ್​ಕುಮಾರ್​ ಕುಟುಂಬಕ್ಕೆ ಹಾಗೂ ಶಿವರಾಜ್​​ಕುಮಾರ್​ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಸ್ಯಾಂಡಲ್​ವುಡ್​ನಿಂದ ಮಾತ್ರವಲ್ಲದೆ, ಟಾಲಿವುಡ್​ ಹಾಗೂ ಕಾಲಿವುಡ್​ ಮಂದಿ ಕೂಡ ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದು (ನವೆಂಬರ್​ 3) ತೆಲುಗು ನಟ ರಾಮ್​ ಚರಣ್​ ಹಾಗೂ ತಮಿಳು ನಟ ವಿಜಯ್​ ಸೇತುಪತಿ ಶಿವರಾಜ್​ಕುಮಾರ್​ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

ಇಂದು ಬೆಳಗ್ಗೆ ಟಾಲಿವುಡ್ ನಟ ರಾಮ್​ ಚರಣ್ ಸದಾಶಿವನಗರದ ಪುನೀತ್ ರಾಜಕುಮಾರ್ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ನಂತರ ಅವರು ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ಶಿವರಾಜ್​ಕುಮಾರ್ ನಿವಾಸಕ್ಕೆ ತೆರಳಿ ಅವರ​ ಜತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಾಮ್​ ಚರಣ್ ಪುನೀತ್ ಭಾವಚಿತ್ರಕ್ಕೆ ಕೈಮುಗಿದು ನಮನ ಸಲ್ಲಿಸಿದ್ದಾರೆ.

ಪುನೀತ್ ಸಮಾಧಿಗೆ ಭೇಟಿ ಬಳಿಕ ವಿಜಯ್ ಸೇತುಪತಿ ಮಾತನಾಡಿದ್ದಾರೆ. ‘ಪುನೀತ್​ ಅವರನ್ನು ಇದುವರೆಗೆ ಭೇಟಿ ಆಗುವುದಕ್ಕೆ ಆಗಲಿಲ್ಲ. ಪುನೀತ್​ರನ್ನ ಭೇಟಿಯಾಗುವ ಆ ಸೌಭಾಗ್ಯ ನನಗೆ ಸಿಕ್ಕಿಲ್ಲ. ಆದರೆ ದೂರವಾಣಿ ಕರೆ ಮಾಡಿ ಒಂದು ಬಾರಿ ಮಾತನಾಡಿದ್ದೆ.ಅವರು ಬಹಳ ಪ್ರೀತಿಯಿಂದ ಮಾತನಾಡಿಸಿದ್ದರು. ನನ್ನ ಸಿನಿಮಾ ನೋಡಿ ನನಗೆ ಕಾಲ್ ಮಾಡಿ ಮಾತಾಡಿದ್ದರು. ಪುನೀತ್​​ ಇಲ್ಲ ಅನ್ನುವುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಪುನೀತ್​​ ಆತ್ಮಕ್ಕೆ ಶಾಂತಿ‌ ಸಿಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ವಿಜಯ್ ಸೇತುಪತಿ ಹೇಳಿದ್ದಾರೆ.

ವಿಜಯ್​ ಸೇತುಪತಿ ಮೇಲೆ ಹಲ್ಲೆ

ಮಂಗಳವಾರ (ನವೆಂಬರ್​ 2) ರಾತ್ರಿ ನಟ ವಿಜಯ್​ ಸೇತು ಪತಿ ಬೆಂಗಳೂರಿಗೆ ಬಂದಿದ್ದರು. ವಿಮಾನದಲ್ಲಿ ಬರುವ ವೇಳೆ ಸಹಪ್ರಯಾಣಿಕನ ಜೊತೆ ಕಿರಿಕ್ ಆಗಿದೆ. ಸಹ ಪ್ರಯಾಣಿಕ ಕುಡಿದಿದ್ದ ಎನ್ನಲಾಗಿದೆ. ವಿಮಾನ ಇಳಿದು ಏರ್​​ಪೋಟ್​​​ನಿಂದ ಹೊರ ಬರುತ್ತಿದ್ದ ವೇಳೆ ವಿಜಯ್ ಸೇತುಪತಿ ಮತ್ತು ಅವರ ಪಿಎ ಮೇಲೆ ಹಿಂದಿನಿಂದ ಬಂದು ಸಹ ಪ್ರಯಾಣಿಕ ಹಲ್ಲೆಗೆ ಯತ್ನಿಸಿದ್ದಾನೆ. ಆ ನಂತರ ಏರ್​​ಪೋಟ್​​​ ಠಾಣೆಗೆ ನಟ ಮತ್ತು ಪ್ರಯಾಣಿಕರು ತೆರಳಿದ್ದರು. ಏರ್​​ಪೋಟ್​​​ ಪೊಲೀಸರು ಕೇಸ್ ದಾಖಲು ಮಾಡದೆ, ಅಪಾಲಜಿ ಬರೆಸಿಕೊಂಡು, ರಾಜಿ ಮಾಡಿ ಕಳುಹಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಮಿಳು ನಟ ವಿಜಯ್​ ಸೇತುಪತಿ ಮೇಲೆ ಹಲ್ಲೆಗೆ ಯತ್ನ, ವಿಡಿಯೋ ವೈರಲ್

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್