ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ (Vikrant Rona Movie) ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಕಲೆಕ್ಷನ್ನಲ್ಲಿ ಈ ಚಿತ್ರ ಎರಡೇ ದಿನಕ್ಕೆ ಅರ್ಧಶತಕ ಬಾರಿಸಿದೆ. ಈ ವಿಚಾರ ಚಿತ್ರತಂಡಕ್ಕೆ ಖುಷಿ ನೀಡಿದೆ. ಸಿನಿಮಾ ರಿಲೀಸ್ಗೂ ಮೊದಲೇ ನಿರ್ಮಾಪಕ ಜಾಕ್ ಮಂಜು (Jack Manju) ಅವರು ಸೇಫ್ ಆಗಿದ್ದರು. ಈಗ ಅವರು ಸಿನಿಮಾದಿಂದ ದೊಡ್ಡ ಮಟ್ಟದ ಲಾಭ ಕಾಣುತ್ತಿದ್ದಾರೆ. ಈವರೆಗೆ ಚಿತ್ರದ ಕಲೆಕ್ಷನ್ ಬಗ್ಗೆ ಅಸಲಿ ಲೆಕ್ಕ ಸಿಕ್ಕಿರಲಿಲ್ಲ. ಈಗ ಜಾಕ್ ಮಂಜು ಅವರು ಬಾಕ್ಸ್ ಆಫೀಸ್ ಗಳಿಕೆ ಬಗ್ಗೆ ಟಿವಿ9 ಕನ್ನಡದ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.
ಆಂಧ್ರದಲ್ಲಿ ಒಳ್ಳೆಯ ರೆಸ್ಪಾನ್ಸ್
ತೆಲುಗು ಭಾಷಿಕ ರಾಜ್ಯಗಳಲ್ಲಿ ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ ಎಂದು ಜಾಕ್ ಮಂಜು ಮಾಹಿತಿ ನೀಡಿದ್ದಾರೆ. ‘ಆಂಧ್ರ ಪ್ರದೇಶದಲ್ಲಿ ನಮ್ಮ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಅಚ್ಚರಿ ಎಂದರೆ ಆಂಧ್ರದಲ್ಲಿ ಹಿಂದಿ ಬೆಲ್ಟ್ನ ಪ್ರದೇಶಕ್ಕಿಂತ ಒಳ್ಳೆಯ ರೆಸ್ಪಾನ್ಸ್ ಹಾಗೂ ಕಲೆಕ್ಷನ್ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಕರ್ನಾಟಕಕ್ಕಿಂತ ಹೆಚ್ಚಿನ ಕಲೆಕ್ಷನ್ ಆಂಧ್ರ ಪ್ರದೇಶದಲ್ಲಿ ಆಗುತ್ತದೆ ಎಂದು ಅಲ್ಲಿನ ಸಿನಿ ಪಂಡಿತರು ಹೇಳುತ್ತಿದ್ದಾರೆ. ಒಡಿಶಾದಲ್ಲೂ ‘ವಿಕ್ರಾಂತ್ ರೋಣ’ ಸಿನಿಮಾದ ಸ್ಕ್ರೀನಿಂಗ್ ಹೆಚ್ಚಿಸಲಾಗುತ್ತಿದೆ’ ಎಂದು ಜಾಕ್ ಮಂಜು ಮಾಹಿತಿ ನೀಡಿದ್ದಾರೆ.
ಸುದೀಪ್ ಈ ಪಾತ್ರವನ್ನು ಇಷ್ಟಪಟ್ಟು ಮಾಡಿದ್ದಾರೆ
‘ಕಿಚ್ಚ ಸುದೀಪ್ ಅವರು ನಾನಾ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ಸಿನಿ ಜರ್ನಿಯಲ್ಲಿ ಸಿಕ್ಕ ಈ ಪಾತ್ರವನ್ನು ಅವರು ಇಷ್ಟಪಟ್ಟು ಮಾಡಿದ್ದಾರೆ. ಸ್ಟಾರ್ಗಿರಿ ಬಿಟ್ಟು ಅವರು ಈ ವಿಕ್ರಾಂತ್ ರೋಣ ಮಾಡಿದ್ದಾರೆ ಅನ್ನೋದು ವಿಶೇಷ’ ಎಂದಿದ್ದಾರೆ ಮಂಜು.
ವಿಕ್ರಾಂತ್ ರೋಣ ಅಸಲಿ ಕಲೆಕ್ಷನ್ ಎಷ್ಟು?
‘ವಿಕ್ರಾಂತ್ ರೋಣ’ ಸಿನಿಮಾದ ಕಲೆಕ್ಷನ್ ಬಗ್ಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಜಾಕ್ ಮಂಜು ಅವರು ಅಸಲಿ ಲೆಕ್ಕಾಚಾರ ನೀಡಿದ್ದಾರೆ. ‘ಮೊದಲ ದಿನ (ಜುಲೈ 28) ಈ ಸಿನಿಮಾ 32-35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಎರಡನೇ ದಿನ (ಜುಲೈ 29) 20-25 ಕೋಟಿ ರೂಪಾಯಿ ಬಾಚಿಕೊಂಡಿದೆ. ಮೊದಲ ದಿನ ಫ್ಯಾನ್ಸ್ ಶೋ ಸಾಕಷ್ಟು ಇತ್ತು. ಹೀಗಾಗಿ, ಹೆಚ್ಚಿನ ಕಲೆಕ್ಷನ್ ಆಗಿದೆ. ವೀಕೆಂಡ್ನಲ್ಲಿ ಸಿನಿಮಾಗೆ ಒಳ್ಳೆಯ ಕಲೆಕ್ಷನ್ ಆಗುವ ನಿರೀಕ್ಷೆ ಇದೆ’ ಎಂದಿದ್ದಾರೆ ಅವರು.
Published On - 4:02 pm, Sat, 30 July 22