
ಕಿಚ್ಚ ಸುದೀಪ್ (Sudeep) ಅವರು ಸ್ಯಾಂಡಲ್‌ವುಡ್‌ನ ಬ್ಯುಸಿ ಹೀರೋ. ಅವರು ಕನ್ನಡದ ಜೊತೆಗೆ ಪರಭಾಷೆಯಲ್ಲೂ ಚಿರಪರಿಚಿತರು. ಹಿಂದಿ, ತೆಲುಗಿನಲ್ಲಿ ಅವರು ಸಿನಿಮಾ ಮಾಡಿದ್ದಾರೆ. ‘ಈಗ’ ಚಿತ್ರವಂತೂ ವಿಲನ್ ಆಗಿ ಸುದಿಪ್ ತುಂಬಾನೇ ಇಷ್ಟ ಆದರು. ಅವರಿಗೆ ಶೋರೂಂ ಉದ್ಘಾಟನೆ ಮಾಡಲು ಕೆಲವರು 50 ಲಕ್ಷ ರೂಪಾಯಿ ಕೊಡಲು ಕೂಡ ರೆಡಿ ಇದ್ದಾರೆ. ಆದರೆ, ಇದಕ್ಕೆ ಸುದೀಪ್ ಸೊಪ್ಪು ಹಾಕೋದಿಲ್ಲ.
ಸುದೀಪ್ ಅವರು ಹೊಸ ಸಿನಿಮಾ ತಂಡಗಳ ಪೋಸ್ಟರ್ ಹಾಗೂ ಟ್ರೇಲರ್ಗಳನ್ನು ರಿಲೀಸ್ ಮಾಡುತ್ತಾರೆ. ತಮ್ಮ ಬ್ಯುಸಿಯಾದ ಶೆಡ್ಯೂಲ್ ಮಧ್ಯೆಯೂ ಸಮಯ ಮಾಡಿಕೊಂಡು ಅವರು ಬರುತ್ತಾರೆ ಮತ್ತು ತಂಡಕ್ಕೆ ವಿಶ್ ಮಾಡಿ ಹೋಗುತ್ತಾರೆ. ಈಗ ಸುದೀಪ್ ಅವರು ಒಂದು ಕಾರ್ ಶೋರೂಂ ಉದ್ಘಾಟನೆಗೆ ಹೋದರೆ 50 ಲಕ್ಷ ಕೊಡಲು ಕೆಲವರು ರೆಡಿ ಇದ್ದಾರಂತೆ.
ಸುದೀಪ್ ಅವರು ತಮ್ಮ ಮನಸ್ಸಿಗೆ ಯಾವುದು ಸರಿ ಎನಿಸಿತೋ ಅದನ್ನು ಮಾಡುತ್ತಾರೆ. ಅವರು ಹಣಕ್ಕಾಗಿ ಎಲ್ಲವನ್ನೂ ಮಾಡುವವರಲ್ಲ. ಆಪ್ತರು ಎನಿಸಿದರೆ ಅವರು ಫ್ರೀ ಆಗಿ ಬೇಕಿದ್ದರೂ ಕೆಲಸ ಮಾಡಿಕೊಡುತ್ತಾರೆ. ಈ ಬಗ್ಗೆ ವಿಷ್ಣುವರ್ಧನ್ ಅಭಿಮಾನಿಯಲ್ಲಿ ಒಬ್ಬರಾದ ವೀರಕಪುತ್ರ ಶ್ರೀನಿವಾಸ್ ಅವರು ಮಾತನಾಡಿದ್ದಾರೆ.
ಸುದೀಪ್ ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಕಾರ್ಯಕ್ರಮಗಳಿಗೆ ತೆರಳುತ್ತಿದ್ದಾರೆ. ಇತ್ತೀಚೆಗೆ ಚಂದನ್ ಸಿನಿಮಾಗೆ ವಿಶ್ ಮಾಡಿದರು. ಆ ಬಳಿಕ ರಾಜೇಂದ್ರ ಸಿಂಗ್ ಬಾಬು ಅವರ ಚಿತ್ರರಂಗದಲ್ಲಿ 5 ದಶಕ ಕಳೆದ ಸಂಭ್ರಮ ಆಚರಿಸುವಲ್ಲಿ ಭಾಗಿ ಆದರು.
ಇದನ್ನೂ ಓದಿ: ‘ಅಶ್ವಿನಿ ಗೌಡಗೆ ಕಿಚ್ಚ ಸುದೀಪ್ ಇನ್ನೂ ಸ್ವಲ್ಪ ಕ್ಲಾಸ್ ತಗೋಬೇಕು’: ವಾರಂತ್ಯಕ್ಕೆ ಕಾದ ವೀಕ್ಷಕರು
‘ಕಳೆದ ಒಂದು ವಾರದಲ್ಲಿ 8 ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಮನೆಯ ಯಜಮಾನನಂತೆ ನಿಂತು ಕೆಲಸ ಮಾಡಿಕೊಟ್ಟಿದ್ದಾರೆ. ಎಲ್ಲರಿಗೂ ನಾನಿದ್ದೇನೆ ಎಂಬ ಭರವಸೆ ಮೂಡಿಸುತ್ತಿದ್ದಾರೆ. ಸುದೀಪ್ನ ಶೋರೂಂ ಇನಾಗರೇಷನ್ ಮಾಡಲು ಕರೆಸಿ. ನಾನು 50 ಲಕ್ಷ ರೂಪಾಯಿ ಕೊಡ್ತೀನಿ ಅಂತಾರೆ. ಸುದೀಪ್ ಬಳಿ ಹಣದ ಬಗ್ಗೆ ಮಾತನಾಡುವಂತಿಲ್ಲ’ ಎಂದು ಅವರು ಹೇಳಿದ್ದಾರೆ. ಇದು ಸುದೀಪ್ ಅವರ ದೊಡ್ಡ ಗುಣ ತೋರಿಸುತ್ತದೆ. ಸುದೀಪ್ ಅವರು ಸದ್ಯ ‘ಮಾರ್ಕ್’ ಚಿತ್ರದ ಶೂಟ್ ಪೂರ್ಣಗೊಳಿಸಿದ್ದಾರೆ. ಹೊಸ ಸಿನಿಮಾ ಸಂತೋಷ್ ಆನಂದ್ರಾಮ್ ಜೊತೆ ಆಗಲಿದೆ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.