‘ಯಶ್​ 19’ ಚಿತ್ರದ ಟೈಟಲ್​ ಕನ್ನಡದಲ್ಲಿ ಅಥವಾ ಇಂಗ್ಲಿಷ್​ನಲ್ಲಿ? ಎಷ್ಟು ಅಕ್ಷರ ಇರುತ್ತೆ? ಚರ್ಚೆ ಶುರು

ಡಿಸೆಂಬರ್​ 8ರಂದು ಬೆಳಗ್ಗೆ 9.55ಕ್ಕೆ ಯಶ್​ ನಟನೆಯ ಹೊಸ ಚಿತ್ರದ ಶೀರ್ಷಿಕೆ ಬಹಿರಂಗ ಆಗಲಿದೆ. ಆದರೆ ಅದಕ್ಕೂ ಮುನ್ನ ಅಭಿಮಾನಿಗಳು ಟೈಟಲ್​ ಬಗ್ಗೆ ಊಹೆ ಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಎಷ್ಟು ಅಕ್ಷರ ಇರಲಿದೆ? ಕನ್ನಡದಲ್ಲಿ ಇರುತ್ತಾ ಅಥವಾ ಇಂಗ್ಲಿಷ್​ನಲ್ಲಿ ಇರುತ್ತಾ ಎಂಬಿತ್ಯಾದಿ ಚರ್ಚೆಗಳು ಜೋರಾಗಿವೆ.

‘ಯಶ್​ 19’ ಚಿತ್ರದ ಟೈಟಲ್​ ಕನ್ನಡದಲ್ಲಿ ಅಥವಾ ಇಂಗ್ಲಿಷ್​ನಲ್ಲಿ? ಎಷ್ಟು ಅಕ್ಷರ ಇರುತ್ತೆ? ಚರ್ಚೆ ಶುರು
ಯಶ್​
Follow us
ಮದನ್​ ಕುಮಾರ್​
|

Updated on:Dec 07, 2023 | 12:49 PM

‘ರಾಕಿಂಗ್​ ಸ್ಟಾರ್​’ ಯಶ್​ (Rocking Star Yash) ಅವರು 19ನೇ ಸಿನಿಮಾವನ್ನು ಅನೌನ್ಸ್​ ಮಾಡಲು ಕ್ಷಣಗಣನೆ ಆರಂಭ ಆಗಿದೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ ಬಹಳ ದೊಡ್ಡದು. ಡಿಸೆಂಬರ್​ 8ರಂದು ಯಶ್​ (Yash) ಅವರ ಹೊಸ ಸಿನಿಮಾದ ಟೈಟಲ್​ (Yash 19 Title) ಅನಾವರಣ ಆಗಲಿದೆ. ‘ಕೆಜಿಎಫ್​: ಚಾಪ್ಟರ್​ 1’ ಮತ್ತು ‘ಕೆಜಿಎಫ್​: ಚಾಪ್ಟರ್​ 2’ ಶೀರ್ಷಿಕೆಯ ಮೂಲಕ ಮೋಡಿ ಮಾಡಿದ ಅವರು ಈಗ ಹೊಸ ಚಿತ್ರಕ್ಕೆ ಎಂಥ ಹೆಸರು ಇಡಲಿದ್ದಾರೆ ಎಂಬ ಕೌತುಕ ನಿರ್ಮಾಣ ಆಗಿದೆ. ಅದರ ಜೊತೆಗೆ ಈ ಶೀರ್ಷಿಕೆ ಇಂಗ್ಲಿಷ್​ನಲ್ಲಿ ಇರುತ್ತಾ ಅಥವಾ ಕನ್ನಡದಲ್ಲಿ ಇರತ್ತಾ ಎಂಬುದನ್ನು ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

‘ಕೆವಿಎನ್​ ಪ್ರೊಡಕ್ಷನ್ಸ್​’ ಮೂಲಕ ಯಶ್​ ಅವರ 19ನೇ ಸಿನಿಮಾ ನಿರ್ಮಾಣ ಆಗಲಿದೆ. ಈ ಸಂಸ್ಥೆಯ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಅಭಿಮಾನಿಗಳಿಗೆ ಒಂದು ಪ್ರಶ್ನೆ ಕೇಳಲಾಗಿದೆ. ‘ಯಶ್​ 19’ ಸಿನಿಮಾದ ಟೈಟಲ್​ ಎಷ್ಟು ಅಕ್ಷರ ಇರಬಹುದು ಎಂದು ಕೇಳಲಾಗಿದೆ. ಅದಕ್ಕೆ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ. ಒಂದು ಪದ ಇರಲಿದೆ ಎಂದು ಶೇಖಕ 45ರಷ್ಟು ಮಂದಿ ಊಹಿಸಿದ್ದಾರೆ. ಎರಡು ಪದ ಇರಲಿದೆ ಎಂಬುದು ಶೇಕಡ 21ರಷ್ಟು ಜನರ ಊಹೆ. 3 ಮತ್ತು 4 ಪದ ಎಂದು ಶೇಕಡ 17ರಷ್ಟು ಮಂದಿ ಊಹೆ ಮಾಡಿದ್ದಾರೆ.

ಯಶ್​ ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ. ಹಾಗಾಗಿ ‘ಕೆಜಿಎಫ್​’ ರೀತಿಯೇ 19ನೇ ಚಿತ್ರಕ್ಕೂ ಸಹ ಎಲ್ಲ ಭಾಷೆಗೂ ಅನ್ವಯ ಆಗುವಂತಹ ಕಾಮನ್​ ಟೈಟಲ್​ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಈ ಚಿತ್ರದ ಶೀರ್ಷಿಕೆ ಇಂಗ್ಲಿಷ್​ನಲ್ಲಿ ಇರಬಹುದು ಎಂದು ಅನೇಕರು ಊಹಿಸಿದ್ದಾರೆ. ಈ ಎಲ್ಲ ಪ್ರಶ್ನೆಗಳಿಗೆ ಡಿಸೆಂಬರ್​ 8ರಂದು ಬೆಳಗ್ಗೆ 9.55ಕ್ಕೆ ಉತ್ತರ ಸಿಗಲಿದೆ. ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಫ್ಯಾನ್ಸ್​ ಹಂಬಲಿಸುತ್ತಿದ್ದಾರೆ. ನಿರ್ದೇಶಕರು ಯಾರು? ತಂತ್ರಜ್ಞರು ಯಾರೆಲ್ಲ ಇರಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ: Sai Pallavi: ‘ಯಶ್ 19’ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ? ಕಥೆ ನಡೆಯೋದು ಎಲ್ಲಿ?

2022ರ ಏಪ್ರಿಲ್​ನಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಬಿಡುಗಡೆಯಾಗಿ ದೊಡ್ಡ ಯಶಸ್ಸು ಕಂಡಿತು. ಆ ಬಳಿಕ ಯಶ್​ ಅವರಿಗೆ ಬಂದ ಆಫರ್​ಗಳಿಗೆ ಲೆಕ್ಕವೇ ಇಲ್ಲ. ಆದರೆ ಅವರು ಹೊಸ ಸಿನಿಮಾ ಒಪ್ಪಿಕೊಳ್ಳುವಲ್ಲಿ ಸಾಕಷ್ಟು ಸಮಾಧಾನ ವಹಿಸಿದರು. 2023ರ ಜನವರಿಯಲ್ಲಿ ಯಶ್​ ಜನ್ಮದಿನದಂದು ಹೊಸ ಸಿನಿಮಾ ಘೋಷಣೆ ಆಗಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೆ ಅದು ನಿಜವಾಗಲಿಲ್ಲ. ಈ ವರ್ಷ ದೀಪಾವಳಿಯಲ್ಲಿ ಬ್ರೇಕಿಂಗ್​ ನ್ಯೂಸ್​ ಸಿಗಬಹುದು ಎಂದು ಕೂಡ ನಿರೀಕ್ಷಿಸಲಾಗಿತ್ತು. ಅದು ಕೂಡ ಸುಳ್ಳಾಯಿತು. ಆದರೆ ಈಗ ಸ್ವತಃ ಯಶ್​ ಕಡೆಯಿಂದಲೇ ಅಧಿಕೃತ ಮಾಹಿತಿ ಹೊರಬಿದ್ದಿದ್ದು ಡಿ.8ಕ್ಕೆ ಹೊಸ ಚಿತ್ರದ ಶೀರ್ಷಿಕೆ ಬಹಿರಂಗ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:37 pm, Thu, 7 December 23

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್