‘ರಾಕಿಂಗ್ ಸ್ಟಾರ್’ ಯಶ್ (Rocking Star Yash) ಅವರು 19ನೇ ಸಿನಿಮಾವನ್ನು ಅನೌನ್ಸ್ ಮಾಡಲು ಕ್ಷಣಗಣನೆ ಆರಂಭ ಆಗಿದೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ ಬಹಳ ದೊಡ್ಡದು. ಡಿಸೆಂಬರ್ 8ರಂದು ಯಶ್ (Yash) ಅವರ ಹೊಸ ಸಿನಿಮಾದ ಟೈಟಲ್ (Yash 19 Title) ಅನಾವರಣ ಆಗಲಿದೆ. ‘ಕೆಜಿಎಫ್: ಚಾಪ್ಟರ್ 1’ ಮತ್ತು ‘ಕೆಜಿಎಫ್: ಚಾಪ್ಟರ್ 2’ ಶೀರ್ಷಿಕೆಯ ಮೂಲಕ ಮೋಡಿ ಮಾಡಿದ ಅವರು ಈಗ ಹೊಸ ಚಿತ್ರಕ್ಕೆ ಎಂಥ ಹೆಸರು ಇಡಲಿದ್ದಾರೆ ಎಂಬ ಕೌತುಕ ನಿರ್ಮಾಣ ಆಗಿದೆ. ಅದರ ಜೊತೆಗೆ ಈ ಶೀರ್ಷಿಕೆ ಇಂಗ್ಲಿಷ್ನಲ್ಲಿ ಇರುತ್ತಾ ಅಥವಾ ಕನ್ನಡದಲ್ಲಿ ಇರತ್ತಾ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
‘ಕೆವಿಎನ್ ಪ್ರೊಡಕ್ಷನ್ಸ್’ ಮೂಲಕ ಯಶ್ ಅವರ 19ನೇ ಸಿನಿಮಾ ನಿರ್ಮಾಣ ಆಗಲಿದೆ. ಈ ಸಂಸ್ಥೆಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಭಿಮಾನಿಗಳಿಗೆ ಒಂದು ಪ್ರಶ್ನೆ ಕೇಳಲಾಗಿದೆ. ‘ಯಶ್ 19’ ಸಿನಿಮಾದ ಟೈಟಲ್ ಎಷ್ಟು ಅಕ್ಷರ ಇರಬಹುದು ಎಂದು ಕೇಳಲಾಗಿದೆ. ಅದಕ್ಕೆ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ಒಂದು ಪದ ಇರಲಿದೆ ಎಂದು ಶೇಖಕ 45ರಷ್ಟು ಮಂದಿ ಊಹಿಸಿದ್ದಾರೆ. ಎರಡು ಪದ ಇರಲಿದೆ ಎಂಬುದು ಶೇಕಡ 21ರಷ್ಟು ಜನರ ಊಹೆ. 3 ಮತ್ತು 4 ಪದ ಎಂದು ಶೇಕಡ 17ರಷ್ಟು ಮಂದಿ ಊಹೆ ಮಾಡಿದ್ದಾರೆ.
Ready for a guess game before real one begins?#Yash19 Title is…..
— KVN Productions (@KvnProductions) December 6, 2023
ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಹಾಗಾಗಿ ‘ಕೆಜಿಎಫ್’ ರೀತಿಯೇ 19ನೇ ಚಿತ್ರಕ್ಕೂ ಸಹ ಎಲ್ಲ ಭಾಷೆಗೂ ಅನ್ವಯ ಆಗುವಂತಹ ಕಾಮನ್ ಟೈಟಲ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಈ ಚಿತ್ರದ ಶೀರ್ಷಿಕೆ ಇಂಗ್ಲಿಷ್ನಲ್ಲಿ ಇರಬಹುದು ಎಂದು ಅನೇಕರು ಊಹಿಸಿದ್ದಾರೆ. ಈ ಎಲ್ಲ ಪ್ರಶ್ನೆಗಳಿಗೆ ಡಿಸೆಂಬರ್ 8ರಂದು ಬೆಳಗ್ಗೆ 9.55ಕ್ಕೆ ಉತ್ತರ ಸಿಗಲಿದೆ. ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಫ್ಯಾನ್ಸ್ ಹಂಬಲಿಸುತ್ತಿದ್ದಾರೆ. ನಿರ್ದೇಶಕರು ಯಾರು? ತಂತ್ರಜ್ಞರು ಯಾರೆಲ್ಲ ಇರಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇದನ್ನೂ ಓದಿ: Sai Pallavi: ‘ಯಶ್ 19’ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ? ಕಥೆ ನಡೆಯೋದು ಎಲ್ಲಿ?
2022ರ ಏಪ್ರಿಲ್ನಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಬಿಡುಗಡೆಯಾಗಿ ದೊಡ್ಡ ಯಶಸ್ಸು ಕಂಡಿತು. ಆ ಬಳಿಕ ಯಶ್ ಅವರಿಗೆ ಬಂದ ಆಫರ್ಗಳಿಗೆ ಲೆಕ್ಕವೇ ಇಲ್ಲ. ಆದರೆ ಅವರು ಹೊಸ ಸಿನಿಮಾ ಒಪ್ಪಿಕೊಳ್ಳುವಲ್ಲಿ ಸಾಕಷ್ಟು ಸಮಾಧಾನ ವಹಿಸಿದರು. 2023ರ ಜನವರಿಯಲ್ಲಿ ಯಶ್ ಜನ್ಮದಿನದಂದು ಹೊಸ ಸಿನಿಮಾ ಘೋಷಣೆ ಆಗಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೆ ಅದು ನಿಜವಾಗಲಿಲ್ಲ. ಈ ವರ್ಷ ದೀಪಾವಳಿಯಲ್ಲಿ ಬ್ರೇಕಿಂಗ್ ನ್ಯೂಸ್ ಸಿಗಬಹುದು ಎಂದು ಕೂಡ ನಿರೀಕ್ಷಿಸಲಾಗಿತ್ತು. ಅದು ಕೂಡ ಸುಳ್ಳಾಯಿತು. ಆದರೆ ಈಗ ಸ್ವತಃ ಯಶ್ ಕಡೆಯಿಂದಲೇ ಅಧಿಕೃತ ಮಾಹಿತಿ ಹೊರಬಿದ್ದಿದ್ದು ಡಿ.8ಕ್ಕೆ ಹೊಸ ಚಿತ್ರದ ಶೀರ್ಷಿಕೆ ಬಹಿರಂಗ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:37 pm, Thu, 7 December 23