‘ರಾಮಾಯಣ’ ಸಿನಿಮಾ ಬಜೆಟ್​​ ಬಗ್ಗೆ ನಟ ಯಶ್ ಸ್ಪಷ್ಟನೆ?

‘ರಾಮಾಯಣ’ ಸಿನಿಮಾಕ್ಕೆ ನಾಲ್ಕು ಸಾವಿರ ಕೋಟಿ ಖರ್ಚಾಗಿದೆ ಎನ್ನುತ್ತಿದ್ದಾರೆ. ಸಿನಿಮಾದ ಟ್ರೈಲರ್ ನೋಡಿದವರಿಗೆ ಇದು ಸಾಮಾನ್ಯ ಸಿನಿಮಾ ಅಂತೂ ಅಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಿನ್ನೆ (ಅಕ್ಟೋಬರ್ 15) ಬೆಂಗಳೂರಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಯಶ್, ಹಲವಾರು ವಿಷಯಗಳನ್ನು ಮಾತನಾಡುವ ಜೊತೆಗೆ ಸಿನಿಮಾದ ಬಜೆಟ್ ಬಗ್ಗೆಯೂ ಮಾತನಾಡಿದರು.

‘ರಾಮಾಯಣ’ ಸಿನಿಮಾ ಬಜೆಟ್​​ ಬಗ್ಗೆ ನಟ ಯಶ್ ಸ್ಪಷ್ಟನೆ?
Ramayana Budget

Updated on: Oct 16, 2026 | 1:11 PM

ಮುಖ್ಯಾಂಶಗಳು

  • ‘ರಾಮಾಯಣ’ ಸಿನಿಮಾ ಬಜೆಟ್ ಬಗ್ಗೆ ಯಶ್ ಮಾತು
  • ‘ರಾಮಾಯಣ’ ಸಿನಿಮಾ ಬಜೆಟ್ 4000 ಕೋಟಿ ಎನ್ನಲಾಗುತ್ತಿದೆ
  • ಬಜೆಟ್ ಬಗ್ಗೆ ವಿವರಿಸಿದ್ದಾರೆ ನಟ ಯಶ್

‘ರಾಮಾಯಣ’ ಸಿನಿಮಾ ಮುಂದಿನ ತಿಂಗಳು ಬಿಡುಗಡೆ ಆಗಲಿದೆ. ಈ ಸಿನಿಮಾ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್​​ನ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾಕ್ಕೆ 2000 ಕೋಟಿ ಖರ್ಚಾಗಿದೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಈ ಸಿನಿಮಾಕ್ಕೆ ನಾಲ್ಕು ಸಾವಿರ ಕೋಟಿ ಖರ್ಚಾಗಿದೆ ಎನ್ನುತ್ತಿದ್ದಾರೆ. ಸಿನಿಮಾದ ಟ್ರೈಲರ್ ನೋಡಿದವರಿಗೆ ಇದು ಸಾಮಾನ್ಯ ಸಿನಿಮಾ ಅಂತೂ ಅಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಿನ್ನೆ (ಅಕ್ಟೋಬರ್ 15) ಬೆಂಗಳೂರಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಯಶ್, ಹಲವಾರು ವಿಷಯಗಳನ್ನು ಮಾತನಾಡುವ ಜೊತೆಗೆ ಸಿನಿಮಾದ ಬಜೆಟ್ ಬಗ್ಗೆಯೂ ಮಾತನಾಡಿದರು.

ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ನಟ ಯಶ್, ‘ನಾನೂ ಸಹ ಈ ಸಿನಿಮಾದ ಸಹ ನಿರ್ಮಾಪಕ. ಸಿನಿಮಾದ ಬಜೆಟ್ 4000 ಕೋಟಿ ಎಂದೆಲ್ಲ ಹೇಳುತ್ತಿದ್ದಾರೆ. ಎರಡೂ ಭಾಗಗಳಿಗೆ ಸೇರಿ ದೊಡ್ಡ ಬಜೆಟ್ ಅನ್ನು ಈ ಸಿನಿಮಾಕ್ಕೆ ಮೀಸಲಿಡಲಾಗಿದೆ. ಆದರೆ ಕೆಲವೊಂದನ್ನು ಹೇಳಬೇಕಾಗುತ್ತದೆ. ಭಾರತದಲ್ಲಿ ಸಿನಿಮಾ ಬಗ್ಗೆ ಆತ್ಮವಿಶ್ವಾಸದಿಂದ ಮಾತನಾಡಿದರೆ ಅಹಂ ಅಂತಾರೆ, ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ ಆತ್ಮವಿಶ್ವಾಸ ಇಲ್ಲದಿದ್ದರೆ ನಡೆಯಲ್ಲ. ಅಲ್ಲಿ ಹೋಗಿ ನಾವು ವಿನಯದಿಂದ ಸಿನಿಮಾ ಮಾಡಿದ್ದೀವಿ, ಇಷ್ಟು ಬಜೆಟ್ ಹಾಕಿದ್ದೀವಿ, ತಗೋಳಿ ಅಂದರೆ ಆಗಲ್ಲ. ‘ಯಾವುದೋ ಸಣ್ಣ ಸಿನಿಮಾ ನಿಮ್ಮದು ಸೈಡಿಗೆ ಹೋಗಿ ಅಂದು ಬಿಡ್ತಾರೆ. ಅಲ್ಲಿನವರಿಗೆ ನಮ್ಮ ತಾಕತ್ತು ಹೇಳಬೇಕೆಂದರೆ ನಾವು ಇಷ್ಟು ಬಜೆಟ್ ಹಾಕಿ ಸಿನಿಮಾ ಮಾಡ್ತಿದ್ದೀವಿ, ನಮ್ಮ ತಾಕತ್ ಇದು ಅಂತ ಗಟ್ಟಿಯಾಗಿ ಹೇಳಬೇಕಾಗುತ್ತದೆ. ಹಾಗಾಗಿ ನಮಿತ್ ಅವರು ಬಜೆಟ್​ ಬಗ್ಗೆ ಮಾತನಾಡಿದ್ದಾರೆ’ ಎಂದರು ಯಶ್.

ಇದನ್ನೂ ಓದಿ:‘ರಾಮಾಯಣ’ ಸಿನಿಮಾಗೆ ಅಮೆರಿಕದಲ್ಲಿ ‘ಪಿಜಿ 13’ ಪ್ರಮಾಣಪತ್ರ: ಚಿತ್ರದ ಅವಧಿ 3 ಗಂಟೆ 15 ನಿಮಿಷ

‘ಆದರೆ ಇಡೀ ಎರಡು ಪಾರ್ಟ್, ಪ್ರಚಾರ, ಇತರೆ ಖರ್ಚುಗಳೆಲ್ಲ ಸೇರಿ ಅಷ್ಟು ದೊಡ್ಡ ಮೊತ್ತ ಆಗುತ್ತೆ. ನಾವು ಜನಗಳನ್ನು ನಂಬಿ ಸಿನಿಮಾ ಮಾಡುತ್ತಿದ್ದೀವಿ. ಜನರಲ್ಲಿ ನನ್ನ ಮನವಿ ಏನೆಂದರೆ ನೂರು ಜನ ನೂರು ಕೊಂಕು ಹುಡುಕಬಹುದು. ಆದರೆ ನೀವು ನೋಡಿ, ನಿಮಗೆ ಏನನ್ನಿಸುತ್ತದೆ ಎಂಬುದನ್ನು ನೋಡಿ. ಇಷ್ಟ ಆದರೆ ಆಶೀರ್ವದಿಸಿ, ಈ ರೀತಿಯ ಇನ್ನೂ ಒಳ್ಳೊಳ್ಳೆ ಪ್ರಯತ್ನಗಳನ್ನು ಮಾಡಲು ನಿರ್ಮಾಪಕರಿಗೆ ಶಕ್ತಿ ಕೊಡಿ’ ಎಂದರು ಯಶ್.

ಸಿನಿಮಾದ ಬಜೆಟ್ ನಾಲ್ಕು ಸಾವಿರ ಕೋಟಿ ಆದರೆ ಅದು ಎರಡೂ ಭಾಗ ಸೇರಿಸಿ, ಎರಡೂ ಭಾಗದ ಪ್ರಚಾರ, ರಿಲೀಸ್ ಖರ್ಚುಗಳನ್ನೆಲ್ಲ ಸೇರಿ ಅಷ್ಟು ಬಜೆಟ್ ಆಗುತ್ತದೆ ಎಂದು ಯಶ್ ವಿವರಿಸಿದ್ದಾರೆ. ಯಶ್ ಅವರೂ ಸಹ ಈ ಸಿನಿಮಾದ ಸಹ ನಿರ್ಮಾಪಕ ಆಗಿದ್ದಾರೆ. ಕೆಲ ಮೂಲಗಳ ಪ್ರಕಾರ, ಯಶ್ ಅವರು ಸಂಭಾವನೆ ಬದಲಿಗೆ ಪ್ರಾಫಿಟ್ ಶೇರ್ ಲೆಕ್ಕಾಚಾರದಲ್ಲಿ ಈ ಸಿನಿಮಾ ಮಾಡಿದ್ದಾರೆ ಎನ್ನಲಾಗುತ್ತಿದೆ. ಯಶ್ ಅವರು ಹಲವು ವರ್ಷಗಳಿಂದಲೂ ಇದೇ ಮಾದರಿಯಲ್ಲೇ ಸಿನಿಮಾ ಮಾಡಿಕೊಂಡು ಬರುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us