Yash: ವಿಜಯ್ನ ಮಗುವಂತೆ ಸಂತೈಸಿದ ರಾಕಿಂಗ್ ಸ್ಟಾರ್ ಯಶ್; ಇಲ್ಲಿದೆ ಭಾವುಕ ಕ್ಷಣ
ಯಶ್ ಹಾಗೂ ವಿಜಯ್ ಇಬ್ಬರೂ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಇವರು ಭೇಟಿ ಆಗಿದ್ದಾರೆ. ಈ ಕಾರಣಕ್ಕೆ ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಈ ಕಾರಣಕ್ಕೆ ಗೆಳೆಯನ ಸಂತೈಸಲು ಯಶ್ ಅವರು ಆಗಮಿಸಿದ್ದಾರೆ.
ಸ್ಪಂದನಾ ಅವರನ್ನು ಕಳೆದುಕೊಂಡು ವಿಜಯ್ ರಾಘವೇಂದ್ರ (Vijay Raghavendra) ಅವರು ಕುಗ್ಗಿದ್ದಾರೆ. ಅವರ ಮನಸ್ಸಲ್ಲಿ ನೋವು ತುಂಬಿದೆ. ವಿಜಯ್ ಅವರನ್ನು ಎಲ್ಲರೂ ಸಮಾಧಾನ ಪಡಿಸುತ್ತಿದ್ದಾರೆ. ಯಶ್ ಆಗಮಿಸಿ ವಿಜಯ್ ಅವರನ್ನು ಸಂತೈಸಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ. ವಿಜಯ್ ಅವರಿಗೆ ಯಶ್ ಅವರು ಧೈರ್ಯ ತುಂಬಿದ್ದಾರೆ. ಧೈರ್ಯದಿಂದ ಮುನ್ನಡೆಯುವಂತೆ ವಿಜಯ್ ಅವರನ್ನು ಹುರಿದುಂಬಿಸಿದ್ದಾರೆ. ಆಗಸ್ಟ್ 6ರ ರಾತ್ರಿ ಸ್ಪಂದನಾ (Spandana) ಮೃತಪಟ್ಟರು. ಇಂದು (ಆಗಸ್ಟ್ 9) ಅವರ ಅಂತ್ಯಕ್ರಿಯೆ ಬೆಂಗಳೂರಿನ ಹರೀಶ್ಚಂದ್ರ ಘಾಟ್ನಲ್ಲಿ ನಡೆಯಲಿದೆ.
ಯಶ್ ಹಾಗೂ ವಿಜಯ್ ಇಬ್ಬರೂ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಇವರು ಭೇಟಿ ಆಗಿದ್ದಾರೆ. ಈ ಕಾರಣಕ್ಕೆ ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಈ ಕಾರಣಕ್ಕೆ ಗೆಳೆಯನ ಸಂತೈಸಲು ಯಶ್ ಅವರು ಆಗಮಿಸಿದ್ದಾರೆ. ಈ ವೇಳೆ ಅವರು ವಿಜಯ್ ಜೊತೆ ನಡೆದುಕೊಂಡ ರೀತಿಯ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
ಯಶ್ ನೇರವಾಗಿ ಸ್ಪಂದನಾ ಪಾರ್ಥಿವ ಶರೀರ ಇಟ್ಟ ಜಾಗಕ್ಕೆ ಆಗಮಿಸಿದರು. ಅಲ್ಲಿ ಕೈ ಮುಗಿದು ಅವರು ವಿಜಯ್ ರಾಘವೇಂದ್ರ ಬಳಿ ತೆರಳಿದರು. ಅಲ್ಲಿ ವಿಜಯ್ನ ತಬ್ಬಿ ಸಂತೈಸಿದರು. ವಿಜಯ್ಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದರು. ಬಳಿಕ ಅಲ್ಲಿಂದ ನಡೆದರು.
ಇದನ್ನೂ ಓದಿ: ಪೋಸ್ ಕೊಡೋದ್ರಲ್ಲಿ ರಾಧಿಕಾ ಪಂಡಿತ್ನ ಮೀರಿಸಿದ ಆಯ್ರಾ ಯಶ್
ಯಶ್ ಅವರ 19ನೇ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಆದರೆ, ಇಲ್ಲಿಯವರೆಗೆ ಅವರ ಹೊಸ ಸಿನಿಮಾ ಯಾವುದು ಎಂಬುದು ಇಲ್ಲಿಯವರೆಗೆ ಘೋಷಣೆ ಆಗಿಲ್ಲ. ಕಳೆದ ಒಂದೂವರೆ ವರ್ಷಗಳಿಂದ ಈ ಸಿನಿಮಾ ಕೆಲಸದ ಮೇಲೆ ಅವರು ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ. ಶೀಘ್ರವೇ ಈ ಬಗ್ಗೆ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ