
ನಟ ಯಶ್ (Yash) ಅವರು ಅನೇಕರಿಗೆ ಸ್ಫೂರ್ತಿದಾಯಕ ಆಗಿದ್ದಾರೆ. ಅವರು ತಮ್ಮ ಕೆಲಸದ ಮೂಲಕ ಅನೇಕರಿಗೆ ಮಾದರಿ ಆಗಿದ್ದಾರೆ. ಕನ್ನಡದ ಹೀರೋ ಒಬ್ಬರು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುವುದು ಎಂದರೆ ಅದು ಸುಲಭದ ವಿಚಾರ ಅಲ್ಲ. ‘ಟಾಕ್ಸಿಕ್’ ಚಿತ್ರವನ್ನು ಇಂಗ್ಲಿಷ್ನಲ್ಲೂ ಬಿಡುಗಡೆ ಮಾಡಲಾಗುತ್ತಿದೆ. ಯಶ್ ಕೆಲಸದ ಶೈಲಿ ಹಾಗೂ ಮಾನವೀಯತೆ ನೋಡಿ ಬಾಲಿವುಡ್ ನಟ ಅಕ್ಷಯ್ ಓಬೆರಾಯ್ ಸ್ಫೂರ್ತಿಗೊಂಡಿದ್ದಾರೆ. ಸಂದರ್ಶನ ಒಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ.
‘ನಾನು ಅದೃಷ್ಟವಂತ. ಹೃತಿಕ್ ರೋಷನ್ ಜೊತೆ ಬಾಲಿವುಡ್ನಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ಇದಾದ ಬಳಿಕ ಯಶ್ ಜೊತೆ ಸಿನಿಮಾ ಮಾಡುತ್ತಿದ್ದೇನೆ. ಅವರು ದೊಡ್ಡ ಸ್ಟಾರ್. ಆದರೆ, ಮೃದುವಾಗಿ ಮಾತನಾಡುತ್ತಾರೆ. ಅವರು ಮೈಸೂರಿನವರು. ಅವರ ತಂದೆ ಬಸ್ ಡ್ರೈವರ್ ಆಗಿದ್ದರಂತೆ. ಯಶ್ ಅವರು ತಮ್ಮ ದಾರಿಯನ್ನು ನಿರ್ಮಿಸಿಕೊಂಡರು. ಅವರ ಜೊತೆ ಕೆಲಸ ಮಾಡಿ ಸಾಕಷ್ಟು ಸ್ಫೂರ್ತಿ ಪಡೆದಿದ್ದೇನೆ’ ಎಂದಿದ್ದಾರೆ ಅಕ್ಷಯ್.
‘ನಾನು ಎಲ್ಲರಂತೆ ಕೆಜಿಎಫ್ ಸಿನಿಮಾ ಅಭಿಮಾನಿ. ಅವರು ನಿಜಕ್ಕೂ ಸ್ಪೆಷಲ್. ಅವರು ಎಲ್ಲರಿಗಿಂತಲೂ ಹೆಚ್ಚು ಯೋಚಿಸುತ್ತಾರೆ. ನನ್ನ ವೃತ್ತಿ ಜೀವನದ ಬಗ್ಗೆ ದೊಡ್ಡದಾಗಿ ಯೋಚಿಸುವಂತೆ ಅವರು ಮಾಡಿದ್ದಾರೆ’ ಎಂದು ಅಕ್ಷಯ್ ಹೇಳಿದ್ದಾರೆ.
‘ಟಾಕ್ಸಿಕ್’ ಸಿನಿಮಾಗೆ ಗೀತು ಮೋಹನ್ದಾಸ್ ನಿರ್ದೇಶನ ಇದೆ. ಈ ಚಿತ್ರವನ್ನು ವಿಎನ್ ಪ್ರೊಡಕ್ಷನ್ಸ್ ಮತ್ತು ಮಾಸ್ಟರ್ ಮೈಂಡ್ ಕ್ರಿಯೇಷನ್ ನಿರ್ಮಾಣ ಮಾಡಿದೆ. ಮುಂದಿನ ವರ್ಷ ಮಾರ್ಚ್ 19ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರ ಮೊದಲ ದಿನ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತದೆ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ: ಯಶ್ ನಟನೆಯ ‘ಟಾಕ್ಸಿಕ್’ಗೆ ಎಂಟ್ರಿ ಕೊಟ್ಟ ಕನ್ನಡದ ನಟಿ
ಯಶ್ ಅವರು ‘ರಾಮಾಯಣ’ ಸಿನಿಮಾದಲ್ಲೂ ಬ್ಯುಸಿ ಇದ್ದಾರೆ. ಈ ಚಿತ್ರ ಕೂಡ 2026ರಲ್ಲಿ ರಿಲೀಸ್ ಆಗಲಿದೆ. ಎರಡೂ ಬಿಗ್ ಬಜೆಟ್ ಸಿನಿಮಾಗಳೇ. ಈ ಚಿತ್ರಗಳನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. ಯಶ್ ಅವರು ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುವತ್ತ ಗಮನ ಹರಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:59 am, Wed, 20 August 25