ರಾಕಿಂಗ್ ಸ್ಟಾರ್ ಯಶ್ ‘ಆಪ್​ ಕಿ ಅದಾಲತ್’ ಪ್ರೋಮೋ ರಿಲೀಸ್; ಶಾರುಖ್ ಬಗ್ಗೆ ನೇರ ಮಾತು

ರಜತ್ ಶರ್ಮಾ ಅವರ ಜನಪ್ರಿಯ 'ಆಪ್ ಕಿ ಅದಾಲತ್' ಶೋನಲ್ಲಿ ಪಾಲ್ಗೊಳ್ಳುವ ಮೂಲಕ ರಾಕಿಂಗ್ ಸ್ಟಾರ್ ಯಶ್ ಹೊಸ ದಾಖಲೆ ಬರೆದಿದ್ದಾರೆ. ಶೋನಲ್ಲಿ ಶಾರುಖ್ ಖಾನ್ ಅವರ 'ಜೀರೋ' ಚಿತ್ರದ ಎದುರು 'ಕೆಜಿಎಫ್' ತಂದ ಯಶಸ್ಸು ಹಾಗೂ ಅಭಿಮಾನಿಗಳಿಗೆ ಸೆಲ್ಫಿ ನೀಡುವ ಕುರಿತು ಮಾತನಾಡಿದ ಯಶ್, ಹಲವು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ‘ಆಪ್​ ಕಿ ಅದಾಲತ್’ ಪ್ರೋಮೋ ರಿಲೀಸ್; ಶಾರುಖ್ ಬಗ್ಗೆ ನೇರ ಮಾತು
ಯಶ್
Image Credit source: India Today

Updated on: Aug 14, 2026 | 7:45 AM

ಮುಖ್ಯಾಂಶಗಳು

  • 'ಆಪ್ ಕಿ ಅದಾಲತ್' ಅಖಾಡದಲ್ಲಿ ರಾಕಿಂಗ್ ಸ್ಟಾರ್
  • ಈ ಹೆಗ್ಗಳಿಕೆ ಪಡೆದ ಮೊದಲ ಕನ್ನಡಿಗ ಯಶ್
  • ಶಾರುಖ್ ಖಾನ್ ಸಿನಿಮಾ ಜೊತೆ ಸ್ಪರ್ಧೆ

ರಾಕಿಂಗ್ ಸ್ಟಾರ್ ಯಶ್ (Yash) ‘ಆಪ್​ ಕಿ ಅದಾಲತ್ ಶೋನಲ್ಲಿ ಭಾಗಿ ಆಗಿದ್ದಾರೆ. ರಜತ್ ಶರ್ಮ ಅವರು ನಡೆಸಿಕೊಡೋ ಈ ಶೋಗೆ ಭಾರೀ ಬೇಡಿಕೆ ಇದೆ. ಈ ಶೋನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯದವರೇ ಆಗಮಿಸಿದರೂ ಕೆಲವೊಮ್ಮೆ ಸಿನಿಮಾ ರಂಗದವರು ಕೂಡ ಆಗಮಿಸಿದ್ದು ಇದೆ. ಈಗ ಯಶ್ ಅವರನ್ನು ಇಲ್ಲಿಗೆ ಆಹ್ವಾನಿಸಲಾಗಿದೆ. ಕರ್ನಾಟಕದಿಂದ ವೇದಿಕೆ ಏರಿದ ಮೊದಲಿಗರು ಯಶ್. ಹಲವು ವಿಷಯಗಳನ್ನು ಅವರು ಈ ವೇದಿಕೆ ಮೇಲೆ ಚರ್ಚಿಸಿದ್ದಾರೆ. ಇದರ ಪ್ರೋಮೋ ಗಮನ ಸೆಳೆದಿದೆ.

ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಆಗಸ್ಟ್ 26ರಂದು ಸಿನಿಮಾ ತೆರೆಮೇಲೆ ಬರುತ್ತಿದೆ. ಈ ಚಿತ್ರದ ಪ್ರಚಾರದ ಭಾಗವಾಗಿ ಯಶ್ ಅವರು ಆಪ್​ ಕಿ ಅದಾಲತ್ ಶೋಗೆ ತೆರಳಿದ್ದಾರೆ. ಅಲ್ಲಿ ಅವರು ಶಾರುಖ್ ಖಾನ್ ಜೊತೆಗಿನ ಸ್ಪರ್ಧೆ ಬಗ್ಗೆ ಮಾತನಾಡಿದ್ದಾರೆ. 2018ರಲ್ಲಿ ಯಶ್ ನಟನೆಯ ‘ಕೆಜಿಎಫ್’ ಹಾಗೂ ಶಾರುಖ್ ಖಾನ್ ನಟನೆಯ ‘ಜೀರೋ’ ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗಿದ್ದವು. ‘ನಾನು ಅಂದು ಶಾರುಖ್ ಖಾನ್ ಅವರಿಗೆ ಅಭಿಮಾನಿಯಾಗಿದ್ದೆ, ಈಗಲೂ ಅಭಿಮಾನಿ. ಅಂದು ಎರಡು ಸಿನಿಮಾಗಳು ಒಟ್ಟಿಗೆ ಬಂದವು. ಅವರದ್ದು ದೊಡ್ಡ ಸಿನಿಮಾ ಆಗಿತ್ತು, ನಮ್ಮದು ಚಿಕ್ಕ ಸಿನಿಮಾ ಆಗಿತ್ತು’ ಎಂದ ಯಶ್ ಹೇಳಿದ್ದಾರೆ. ಆಗ ರಜತ್ ಶರ್ಮ ಅವರು ‘ಕೆಜಿಎಫ್’ ಸಿನಿಮಾ ಹೆಚ್ಚಿನ ಗಳಿಕೆ ಮಾಡಿತ್ತು ಎಂಬ ವಿಷಯವನ್ನು ರಿವೀಲ್ ಮಾಡಿದ್ದಾರೆ. ‘ನನ್ನ ಸೀನಿಯರ್​ಗಿಂತ ನಾನು ಯಾವಾಗ ದೊಡ್ಡವನು ಎನಿಸುತ್ತದೆಯೋ ಅಂದು ನನ್ನ ಅಂಗಡಿ ಬಂದ್’ ಎಂದಿದ್ದಾರೆ.
YouTube video player
ಅಭಿಮಾನಿಗಳಿಗೆ ಸೆಲ್ಫಿ ಕೊಡೋ ವಿಷಯದ ಬಗ್ಗೆ ಮಾತನಾಡಿದ್ದ ಯಶ್, ‘ಸೆಲ್ಫಿ ತೆಗೆದುಕೊಂಡರೆ ಅಥವಾ ಫೋಟೋ ತೆಗೆದುಕೊಂಡರೆ ಅದು ಅಭಿಮಾನಿಗಳಿಗೆ ಜೀವನಪೂರ್ತಿ ಇರುವ ನೆನಪಾಗುತ್ತದೆ. ಹೀಗಾಗಿ, ನನಗೆ ಸಮಯ ಇದ್ದರೆ ನಾನು ಸೆಲ್ಫಿ ಕೊಟ್ಟೇ ಕೊಡುತ್ತೇನೆ’ ಎಂದು ಯಶ್ ಹೇಳಿದ್ದಾರೆ.

ಇದನ್ನೂ ಓದಿ: ಮದುವೆಗೆ ಬರುವಂತೆ ಯಶ್-ರಾಧಿಕಾ ದಂಪತಿಗೆ ಆಹ್ವಾನ ನೀಡಿದ ಚಿಕ್ಕಣ್ಣ

‘ಆಪ್​ ಕಿ ಅದಾಲತ್’ ಶೋ ಇಂಡಿಯಾ ಟಿವಿನಲ್ಲಿ ಶನಿವಾರ ರಾತ್ರಿ 10 ಗಂಟೆಗೆ ಪ್ರಸಾರ ಕಾಣಲಿದೆ. ಈ ಶೋನಲ್ಲಿ ಯಶ್ ಅವರು ಆಡಿದ ಮಾತುಗಳು ಗಮನ ಸೆಳೆದಿವೆ. ಅವರು ಮುಂಬರುವ ರಾಮಾಯಣ ಸಿನಿಮಾ ಬಗ್ಗೆಯೂ ಮಾತನಾಡುವ ಸಾಧ್ಯತೆ ಇದೆ. ಸದ್ಯ ಅವರ ಗಮನ ಸಂಪೂರ್ಣವಾಗಿ ‘ಟಾಕ್ಸಿಕ್’ ಚಿತ್ರದ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:43 am, Fri, 14 August 26

Loading...
Unable to load recommendations.
Follow Us