AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಲಿವುಡ್‌ ಶೈಲಿಯಲ್ಲಿ ಟ್ರಂಪ್‌ಗೆ ಇರಾನ್ ತಿರುಗೇಟು: ಬಾಲಯ್ಯ ಸಿನಿಮಾ ಕ್ಲಿಪ್ ಬಳಸಿ ವ್ಯಂಗ್ಯ

ಅಂತಾರಾಷ್ಟ್ರೀಯ ಮಟ್ಟದ ರಾಜಕೀಯ ಮತ್ತು ಸಂಘರ್ಷದ ನಡುವೆ ಭಾರತೀಯ ಸಿನಿಮಾದ ಸನ್ನಿವೇಶವೊಂದು ಈ ರೀತಿ ಚರ್ಚೆಗೆ ಗ್ರಾಸವಾಗಿರುವುದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಹೇಳಿಕೆಗೆ ತಿರುಗೇಟು ಕೊಡಲು ಇರಾನ್ ರಾಯಭಾರ ಕಚೇರಿಯು ತೆಲುಗು ಸಿನಿಮಾದ ದೃಶ್ಯವನ್ನು ಬಳಸಿಕೊಂಡಿದೆ.

ಟಾಲಿವುಡ್‌ ಶೈಲಿಯಲ್ಲಿ ಟ್ರಂಪ್‌ಗೆ ಇರಾನ್ ತಿರುಗೇಟು: ಬಾಲಯ್ಯ ಸಿನಿಮಾ ಕ್ಲಿಪ್ ಬಳಸಿ ವ್ಯಂಗ್ಯ
Balakrishna
ಮದನ್​ ಕುಮಾರ್​
|

Updated on: Sep 24, 2026 | 12:28 PM

Share

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ತಿರುಗೇಟು ನೀಡಲು ಇರಾನ್, ತೆಲುಗು ಚಿತ್ರರಂಗದ ಜನಪ್ರಿಯ ನಟ ನಂದಮೂರಿ ಬಾಲಕೃಷ್ಣ ಅವರ ಸಿನಿಮಾದ ಆ್ಯಕ್ಷನ್ ದೃಶ್ಯವನ್ನು ಬಳಸಿಕೊಂಡು ವ್ಯಂಗ್ಯ ಮಾಡಿದೆ. ಜಿಂಬಾಬ್ವೆಯಲ್ಲಿರುವ ಇರಾನ್ ರಾಯಭಾರ ಕಚೇರಿಯು ತನ್ನ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಬಾಲಕೃಷ್ಣ ಅಭಿನಯದ 2023ರ ಸೂಪರ್ ಹಿಟ್ ಚಿತ್ರ ‘ಭಗವಂತ್ ಕೇಸರಿ’ ಸಿನಿಮಾ 58 ಸೆಕೆಂಡುಗಳ ಆ್ಯಕ್ಷನ್ ಕ್ಲಿಪ್ ಒಂದನ್ನು ಹಂಚಿಕೊಂಡಿದೆ.

ಇರಾನ್ ರಾಯಭಾರ ಕಚೇರಿ ನೀಡಿದ ಸಂದೇಶವೇನು?

ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಟ್ರಂಪ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್, ‘ಇರಾನ್ ಅನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ ಎಂದು ಟ್ರಂಪ್ ಮಾತನಾಡುತ್ತಿದ್ದಾರೆ. ಆದರೆ ಇರಾನ್ ರಕ್ಷಣೆಯಿಲ್ಲದೆ ಕೈಕಟ್ಟಿ ಕುಳಿತಿಲ್ಲ ಎಂಬುದು ಅವರಿಗೆ ತಿಳಿದಿದೆ. ಇತ್ತೀಚೆಗೆ ಅವರು ಹಾಲಿವುಡ್ ಬಿಟ್ಟು ಬಾಲಿವುಡ್ ಸಿನಿಮಾಗಳನ್ನು ನೋಡಲು ಪ್ರಾರಂಭಿಸಿದ್ದಾರೆ ಎಂಬ ಮಾಹಿತಿ ನಮಗಿದೆ’ ಎಂದು ಟ್ರೋಲ್ ಮಾಡುವ ಶೈಲಿಯಲ್ಲಿ ಬರೆದುಕೊಂಡಿದೆ.

ಈ ಕ್ಲಿಪ್‌ನಲ್ಲಿ ಏನಿದೆ?

ಹಂಚಿಕೊಳ್ಳಲಾದ ವಿಡಿಯೋದಲ್ಲಿ ನಂದಮೂರಿ ಬಾಲಕೃಷ್ಣ ತಮ್ಮ ಸುತ್ತಲೂ ಬಂದೂಕು ಹಿಡಿದು ಸುತ್ತುವರಿದ ಶತ್ರುಗಳಿಂದ ರಕ್ಷಿಸಿಕೊಳ್ಳಲು ಗೇಟ್‌ನ ಶೀಲ್ಡ್ ಬಳಸಿ ಹೋರಾಡುವ ತೀವ್ರ ಆ್ಯಕ್ಷನ್ ದೃಶ್ಯವಿದೆ. ಇರಾನ್ ತನ್ನ ದೇಶ ಸ್ವಯಂರಕ್ಷಣೆಗೆ ಸಿದ್ಧವಾಗಿದೆ ಎಂಬುದನ್ನು ಸೂಚಿಸಲು ಈ ಸನ್ನಿವೇಶವನ್ನು ಬಳಸಿಕೊಂಡಿದೆ.

ಬಾಲಿವುಡ್ ಅಲ್ಲ, ಟಾಲಿವುಡ್:

ಇರಾನ್ ರಾಯಭಾರ ಕಚೇರಿ ತನ್ನ ಪೋಸ್ಟ್‌ನಲ್ಲಿ ‘ಬಾಲಿವುಡ್’ ಎಂದು ಉಲ್ಲೇಖಿಸಿತ್ತಾದರೂ, ನೆಟ್ಟಿಗರು ತಕ್ಷಣವೇ ಇದು ಹಿಂದಿ ಚಿತ್ರರಂಗವಲ್ಲ (ಬಾಲಿವುಡ್), ಬದಲಿಗೆ ತೆಲುಗು ಚಿತ್ರರಂಗದ (ಟಾಲಿವುಡ್) ಸಿನಿಮಾ ಎಂದು ತಿದ್ದುಪಡಿ ಮಾಡಿದ್ದಾರೆ.

ಇದನ್ನೂ ಓದಿ: ಅರಬ್ ದೇಶಗಳ ಸಂಘರ್ಷಕ್ಕೆ ಇರಾನ್ ಕಾರಣ; ವಿಶ್ವಸಂಸ್ಥೆ ಮಹಾಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಗಂಭೀರ ಆರೋಪ

ಟ್ರಂಪ್ ಹೇಳಿದ್ದೇನು?

ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ಇರಾನ್ ವಿಷಯದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಹೇಳಿದ್ದರು. ‘ಇರಾನ್ ಚೇತರಿಸಿಕೊಳ್ಳಲು ಒಪ್ಪಂದ ಮಾಡಿಕೊಳ್ಳಬೇಕೋ ಅಥವಾ ಇಸ್ಲಾಮಿಕ್ ರಿಪಬ್ಲಿಕ್ ಅನ್ನು ಸಂಪೂರ್ಣವಾಗಿ ಧ್ವಂಸ ಮಾಡಬೇಕೋ?’ ಎಂದು ಟ್ರಂಪ್ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಯಾಗಿ ಇರಾನ್ ಈ ಪಾಪ್-ಕಲ್ಚರ್ ಶೈಲಿಯ ತಿರುಗೇಟು ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More