Yash: ರಾಧಿಕಾ ಪಂಡಿತ್ ನಿರೀಕ್ಷಿಸಿದ್ದೇ ಬೇರೆ, ವಾಸ್ತವವೇ ಬೇರೆ; ಫೋಟೋ ಮೂಲಕ ವಿವರಿಸಿದ ಯಶ್
ಯಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮಕ್ಕಳು ಬಂದ ನಂತರ ಬದುಕು ಯಾವ ರೀತಿಯಲ್ಲಿ ಬದಲಾಗಿದೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.
ಯಶ್ ಹಾಗೂ ರಾಧಿಕಾ ಪಂಡಿತ್ (Radhika Pandit) ಸ್ಟಾರ್ ದಂಪತಿ. ಇವರನ್ನು ಹಿಂಬಾಲಿಸುವವರ ಸಂಖ್ಯೆ ದೊಡ್ಡದಿದೆ. ಯಶ್ ಪಕ್ಕಾ ಫ್ಯಾಮಿಲಿಮ್ಯಾನ್. ಕುಟುಂಬಕ್ಕಾಗಿ ಹೆಚ್ಚು ಸಮಯ ಮೀಸಲಿಡುತ್ತಾರೆ. ಶೂಟಿಂಗ್ ವೇಳೆ ಬಿಡುವು ಸಿಕ್ಕರೆ ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳಾದ ಆಯ್ರಾ ಹಾಗೂ ಯಥರ್ವ್ ಜೊತೆ ಸಮಯ ಕಳೆಯೋಕೆ ಅವರು ಇಷ್ಟಪಡುತ್ತಾರೆ. ಸದ್ಯ ಯಶ್ (Yash) ಅವರು ಹೊಸ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಎಕ್ಸ್ಪೆಕ್ಟೇಷನ್ vs ರಿಯಾಲಿಟಿಯನ್ನು ವಿವರಿಸಿದ್ದಾರೆ.
ರಾಧಿಕಾ ಪಂಡಿತ್ ಹಾಗೂ ಯಶ್ ಮದುವೆ ಆಗಿ ಹಲವು ವರ್ಷಗಳು ಕಳೆದಿವೆ. ಇಬ್ಬರೂ ಪ್ರೀತಿಸಿ ಮದುವೆ ಆದವರು. ಈ ದಂಪತಿ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಇತ್ತೀಚೆಗೆ ಯಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮಕ್ಕಳು ಬಂದ ನಂತರ ಬದುಕು ಯಾವ ರೀತಿಯಲ್ಲಿ ಬದಲಾಗಿದೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.
ಮೊದಲ ಫೋಟೋದಲ್ಲಿ ರಾಧಿಕಾ ಪಂಡಿತ್ ಹಾಗೂ ಯಶ್ ಅವರು ಕೈಕೈ ಹಿಡಿದು ಬರುತ್ತಿದ್ದಾರೆ. ಇದನ್ನು ಅವರು ನಿರೀಕ್ಷೆ ಎಂದು ಕರೆದಿದ್ದಾರೆ. ಮತ್ತೊಂದು ಫೋಟೋದಲ್ಲಿ ಯಶ್ ಹಾಗೂ ರಾಧಿಕಾ ಮಕ್ಕಳನ್ನು ಎತ್ತಿಕೊಂಡು ನಡೆದು ಬರುತ್ತಿರುವುದು ಇದೆ. ಇದನ್ನು ಅವರು ರಿಯಾಲಿಟಿ ಎಂದು ಕರೆದಿದ್ದಾರೆ. ‘ನನ್ನ ಪತ್ನಿಯ ನಿರೀಕ್ಷೆ ಮತ್ತು ವಾಸ್ತವ’ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಹಲವು ಕಮೆಂಟ್ಗಳು ಬಂದಿವೆ. ‘ಇದುವೇ ಜೀವನ ಅಲ್ಲವೇ? ಮಕ್ಕಳು ಹುಟ್ಟಿದಮೇಲೆ ನಮ್ಮ ಜೀವನ ಪೂರ್ಣಗೊಳ್ಳೋದು’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು, ಯಶ್ ಕುಟುಂಬದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
View this post on Instagram
ಇದನ್ನೂ ಓದಿ: Radhika Pandit: ರಾಧಿಕಾ ಪಂಡಿತ್ ಹಂಚಿಕೊಂಡ ಈ ಫೋಟೋಗಳಲ್ಲಿ ಇದೆ ಒಂದು ವಿಶೇಷ; ಗುರುತಿಸಬಲ್ಲಿರಾ?
ಕಮೆಂಟ್ ಬಾಕ್ಸ್ನಲ್ಲಿ ಹಲವರು ಯಶ್ 19ನೇ ಸಿನಿಮಾ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ‘ಯಶ್ ಅವರೇ ನಿಮ್ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ಕೆಜಿಎಫ್ ಮೂರನೇ ಚಾಪ್ಟರ್ ಬರಲಿದೆಯೇ? ಅದಕ್ಕಾಗಿ ಇಷ್ಟೊಂದು ವಿಳಂಬವೇ’ ಕಮೆಂಟ್ ಮಾಡಿದ್ದಾರೆ. ರಾಧಿಕಾ ಪಂಡಿತ್ ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಅವರು ಕೂಡ ಕಂಬ್ಯಾಕ್ ಮಾಡಲಿ ಅನ್ನೋದು ಅನೇಕರ ಕೋರಿಕೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:32 am, Mon, 8 May 23