ಸ್ಟಾರ್ ಹೀರೋಗಳಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಸಾಕಷ್ಟು ಮಂದಿ ಹಿಂಬಾಲಿಸುತ್ತಾರೆ. ಅವರು ಯಾವ ರೀತಿಯ ಸಿನಿಮಾ ಮಾಡಿದರೂ ಭಕ್ತಿಯಿಂದ ಅದನ್ನು ವೀಕ್ಷಿಸುತ್ತಾರೆ. ಅದೇ ರೀತಿ ಹೀರೋಗಳು ನೆಗೆಟಿವ್ ಶೇಡ್ನ ಪಾತ್ರಗಳನ್ನು ಮಾಡಿದ ಗಮನ ಸೆಳೆದ ಅನೇಕರಿದ್ದಾರೆ. ಅವರು ಮಾಡೋದು ಗ್ಯಾಂಗ್ಸ್ಟರ್ ಪಾತ್ರವಾದರೂ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ದಕ್ಷಿಣ ಭಾರತ ಹಾಗೂ ಬಾಲಿವುಡ್‌ನಲ್ಲಿ ಈ ಟ್ರೆಂಡ್ ಮುಂದುವರಿದಿದೆ. ‘ಕೆಜಿಎಫ್ 2’ (KGF Chapter 2) ಮೊದಲಾದ ಸಿನಿಮಾಗಳು ಇದಕ್ಕೆ ಹೊಸ ಸೇರ್ಪಡೆ.
‘ಕೆಜಿಎಫ್ 2’ ಚಿತ್ರದಲ್ಲಿ ಯಶ್ ಮಾಡಿದ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಅವರು ಗ್ಯಾಂಗ್ಸ್ಟರ್ ರೀತಿಯ ಪಾತ್ರ ಮಾಡಿ ಗಮನ ಸೆಳೆದರು. ವೃತ್ತಿಜೀವನದಲ್ಲಿ ಯಶ್ ಅವರು ಆ ರೀತಿಯ ಪಾತ್ರ ಮಾಡಿದ್ದು ಅದೇ ಮೊದಲು. ಆ ರೀತಿಯ ಪಾತ್ರದ ಮೂಲಕ ಅವರು ಜನರಿಗೆ ಇಷ್ಟವಾಗಿದ್ದಾರೆ. ಯಶ್ ಅವರಿಂದ ಜನರು ಈಗ ಅದೇ ರೀತಿಯ ಸಿನಿಮಾಗಳನ್ನು ನಿರೀಕ್ಷಿಸುತ್ತಿದ್ದಾರೆ.
ಶಿವರಾಜ್ಕುಮಾರ್ ಅವರು ಅನೇಕ ಸಿನಿಮಾಗಳಲ್ಲಿ ಮಚ್ಚು-ಲಾಂಗ್ ಹಿಡಿದಿದ್ದಾರೆ. ಶ್ರೀನಿ ನಿರ್ದೇಶನದ ‘ಘೋಸ್ಟ್’ ಸಿನಿಮಾದಲ್ಲಿ ಅವರದ್ದು ಗ್ಯಾಂಗ್ಸ್ಟರ್ ಪಾತ್ರ ಎನ್ನಲಾಗಿದೆ. ಇತ್ತೀಚೆಗೆ ರಿಲೀಸ್ ಆದ ಟೀಸರ್ ಸಾಕಷ್ಟು ಗಮನ ಸೆಳೆದಿದೆ. ಶಿವಣ್ಣ ಅವರು ‘ಒಜಿ, ಒರಿಜಿನಲ್ ಗ್ಯಾಂಗ್ಸ್ಟರ್’ ಎಂದು ಹೇಳುವ ಡೈಲಾಗ್ ಗಮನ ಸೆಳೆಯುತ್ತಿದೆ.
ಪ್ರಭಾಸ್ ಅವರು ‘ಸಲಾರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 28ರಂದು ರಿಲೀಸ್ ಆಗಲಿದೆ. ಅವರು ಈ ಚಿತ್ರದಲ್ಲಿ ಅವರು ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪಾತ್ರ ಮಾಡುತ್ತಾರೆ ಎನ್ನಲಾಗಿದೆ. ಈ ಚಿತ್ರದ ಮೊದಲ ಗ್ಲಿಂಪ್ಸ್ ಗಮನ ಸೆಳೆದಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರಕ್ಕೆ, ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ.
ಪವನ್ ಕಲ್ಯಾಣ್ ಅವರು ‘ಒಜಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ‘ಒರಿಜಿನಲ್ ಗ್ಯಾಂಗ್ಸ್ಟರ್’ ಅನ್ನೋದು ಶೀರ್ಷಿಕೆಯ ವಿಸ್ತ್ರತ ರೂಪ. ಪವನ್ ಕಲ್ಯಾಣ್ ಅವರದ್ದು ನೆಗೆಟಿವ್ ಶೇಡ್ನ ಪಾತ್ರ ಎನ್ನಲಾಗುತ್ತಿದೆ. ಈ ಸಿನಿಮಾ ಈಗಾಗಲೇ ಶೇ.50ರಷ್ಟು ಚಿತ್ರೀಕರಣ ಮುಗಿಸಿದೆ.
‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರು ರಕ್ತಚಂದನ ಕಳ್ಳಸಾಗಣೆ ಮಾಡುವ ವ್ಯಕ್ತಿಯ ಪಾತ್ರ ಮಾಡಿದ್ದಾರೆ. ಶೇಷಾಚಲಂ ಅರಣ್ಯದಲ್ಲಿ ರಕ್ತ ಚಂದನದ ಸ್ಮಗ್ಲರ್ ಆಗಿರುವ ಪುಷ್ಪರಾಜ್ ನಂತರ ದೊಡ್ಡ ಡಾನ್ ಆಗಿ ಬೆಳೆಯುತ್ತಾನೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಸದ್ದು ಮಾಡಿದೆ. ಸುಕುಮಾರ್ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ಸೀಕ್ವೆಲ್ ಸಿದ್ಧವಾಗುತ್ತಿದೆ.
ದಳಪತಿ ವಿಜಯ್ ಅವರು ‘ಲಿಯೋ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೊದಲ ಗ್ಲಿಂಪ್ಸ್ ಮೂಲಕ ಗಮನ ಸೆಳೆದಿದೆ. ಅವರದ್ದು ಗ್ಯಾಂಗ್ಸ್ಟರ್ ಪಾತ್ರ ಎನ್ನಲಾಗಿದೆ.
ಇದನ್ನೂ ಓದಿ: Shivarajkumar: ‘ಯು ಆರ್ ಸೋ ಕ್ಯೂಟ್’; ನವಾಜ್ ಡೈಲಾಗ್ಗೆ ಫಿದಾ ಆದ ಶಿವರಾಜ್ಕುಮಾರ್
ಕಳೆದ ವರ್ಷ ‘ಸೀತಾ ರಾಮಂ’ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ನಟ ದುಲ್ಖರ್ ಸಲ್ಮಾನ್ ‘ಕಿಂಗ್ ಆಫ್ ಕೋಟಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು ಅವರು ದರೋಡೆಕೋರನಂತೆ ಕಾಣುತ್ತಿದ್ದಾರೆ.
ಬಾಲಿವುಡ್‌ನಲ್ಲಿ ಎರಡನೇ ಹಿಟ್‌ಗಾಗಿ ಕಾಯುತ್ತಿದ್ದಾರೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ. ರಣಬೀರ್ ಕಪೂರ್ ಹೀರೋ ಆಗಿ ನಟಿಸಿದ ‘ಅನಿಮಲ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ರಣಬೀರ್ ಅವರದ್ದು ವಿಲನ್ ಪಾತ್ರ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ