‘ಕೆಜಿಎಫ್ 2’ ಚಿತ್ರದ ಬಳಿಕ ಯಶ್ ಒಪ್ಪಿಕೊಂಡಿರುವ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ನಿರೀಕ್ಷೆ ಇದೆ. ಯಶ್ ಜನ್ಮದಿನದ (ಜನವರಿ 8) ಹಿನ್ನೆಲೆಯಲ್ಲಿ ಚಿತ್ರದ ಗ್ಲಿಂಪ್ಸ್ ರಿಲೀಸ್ ಮಾಡಲಾಗಿತ್ತು. ಈ ವಿಡಿಯೋ ಬಗ್ಗೆ ಮಲಯಾಳಂ ಚಿತ್ರರಂಗದಲ್ಲಿ ವಿರೋಧ ವ್ಯಕ್ತವಾಗಿದೆ. ಅನೇಕರು ಗೀತು ಮೋಹನ್‌ದಾಸ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ಮಹಿಳೆಯರನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ಅನೇಕರು ಆರೋಪಿಸಿದ್ದಾರೆ.
ಮಲಯಾಳಂ ನಿರ್ದೇಶಕ ನಿತಿನ್ ಅವರು ಗೀತು ಮೋಹನ್‌ದಾಸ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ‘ಟಾಕ್ಸಿಕ್’ ಟೀಸರ್ ನೋಡಿದ ಬಳಿಕ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅವರನ್ನು ಅನೇಕರು ಬೆಂಬಲಿಸಿದ್ದಾರೆ. ನಿತಿನ್ ಅವರು ಗೀತು ವಿರುದ್ಧ ಧ್ವನಿ ಎತ್ತಲು ಒಂದು ಕಾರಣ ಇದೆ ಎನ್ನಲಾಗಿದೆ.
2016ರಲ್ಲಿ ‘ಕಸಾಬ’ ಹೆಸರಿನ ಸಿನಿಮಾ ಬಂದಿತ್ತು. ಇದನ್ನು ನಿರ್ದೇಶನ ಮಾಡಿದ್ದು ನಿತಿನ್ ಅವರು. ಈ ಚಿತ್ರದಲ್ಲಿ ಬರುವ ಒಂದು ದೃಶ್ಯ ಸಾಕಷ್ಟು ವಿರೋಧ ಎದುರಿಸಿತ್ತು. ಪೊಲೀಸ್ ಅಧಿಕಾರಿ (ಮಮ್ಮೂಟಿ) ಮಹಿಳಾ ಪೊಲೀಸ್ ಅಧಿಕಾರಿ ಬಳಿ ಹೋಗಿ ಅವರ ಬೆಲ್ಟ್ ತೆಗೆದು, ‘ನಾನು ನಿಮ್ಮ ಋತುಚಕ್ರವನ್ನು ನಿಲ್ಲಿಸಬಹುದು’ ಎಂದು ಹೇಳುತ್ತಾನೆ. ಈ ದೃಶ್ಯವನ್ನು ಗೀತು ಮೋಹನ್‌ದಾಸ್ ಕೂಡ ವಿರೋಧಿಸಿದ್ದರು. ಈಗ ಅವರೇ ಮಹಿಳೆಯರನ್ನು ಕೆಟ್ಟದಾಗಿ ತೋರಿಸಿದ್ದು ಎಷ್ಟು ಸರಿ ಎಂಬುದು ನಿತಿನ್ ಅಭಿಪ್ರಾಯಪಟ್ಟಿದ್ದಾರೆ.
Nithin Renji Panicker calls out #GeethuMohandas for her hypocrisy.
He accuses Geethu Mohandas of hypocrisy, pointing out how she advocates for freedom of expression but suppresses opposing views, labeling it as toxic behavior.#Toxic#ToxicTheMovie#YashBOSS#Yash pic.twitter.com/JQjjwwqyFR
— Fully Films (@Reviews_Twee1t) January 8, 2025
ಇದನ್ನೂ ಓದಿ: ‘ಟಾಕ್ಸಿಕ್’ ಗ್ಲಿಂಪ್ಸ್ನಲ್ಲಿ ಯಶ್ ಲುಕ್ ಹೇಗಿದೆ? ಇಲ್ಲಿವೆ ವಿವಿಧ ಪೋಸ್
‘ಕಸಾಬದಲ್ಲಿ ಯಾವುದೇ ಕೆಟ್ಟ ವಿಚಾರ ಇರಲಿಲ್ಲ. ಆದಾಗ್ಯೂ ಇದು ತಪ್ಪು ತಪ್ಪು ಎಂದರು. ಈಗ ಅವರು ಬೇರೆ ರಾಜ್ಯಕ್ಕೆ ತೆರಳಿದಾಗ ಅವರು ತಮಗೆ ಸರಿಹೊಂದುವಂತೆ ಸ್ತ್ರೀದ್ವೇಷದ ವ್ಯಾಖ್ಯಾನವನ್ನು ಬದಲಾಯಿಸಿಕೊಂಡಿದ್ದಾರೆ’ ಎಂದು ನಿತೀನ್ ಹೇಳಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಅವರು ಕ್ಲಬ್ ಒಂದಕ್ಕೆ ಎಂಟ್ರಿ ಕೊಟ್ಟು ಮಹಿಳೆಯ ಮೇಲೆ ಎಣ್ಣೆ ಸುರಿಯುತ್ತಾರೆ. ಈ ರೀತಿಯಲ್ಲಿ ದೃಶ್ಯ ಇದೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಟೀಕಿಸಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:15 am, Thu, 9 January 25