‘ಟಾಕ್ಸಿಕ್’ನ ಆ ದೃಶ್ಯಗಳ ನೋಡಿ ಪತ್ನಿ ರಾಧಿಕಾ ಹೇಳಿದ್ದೇನು? ಸತ್ಯ ಹೇಳಿದ ಯಶ್

Toxic movie scene: ಕುಟುಂಬವೆಲ್ಲ ಸೇರಿ ನೋಡಲಾಗದ ಸಿನಿಮಾನಲ್ಲಿ ನಟಿಸಲ್ಲ ಎಂದಿದ್ದ ಯಶ್ ಇಂಥಹಾ ದೃಶ್ಯಗಳಲ್ಲಿ ನಟಿಸಿದ್ದಾರಲ್ಲ ಎಂದು ಕೆಲವರು ಟೀಕೆ ಸಹ ಮಾಡಿದ್ದಾರೆ. ಆದರೆ ಅದಕ್ಕೆಲ್ಲ ಯಶ್ ಉತ್ತರ ಕೊಟ್ಟಾಗಿದೆ. ಇದೀಗ, ‘ಟಾಕ್ಸಿಕ್’ ಸಿನಿಮಾದ ಹಸಿ ಬಿಸಿ ದೃಶ್ಯಗಳಲ್ಲಿ ನಟಿಸಿದ್ದಕ್ಕೆ ತಮ್ಮ ಪತ್ನಿ ರಾಧಿಕಾ ಪಂಡಿತ್ ಪ್ರತಿಕ್ರಿಯೆ ಏನಿತ್ತು ಎಂದು ಪ್ರಾಮಾಣಿಕವಾಗಿ ತಿಳಿಸಿದ್ದಾರೆ.

‘ಟಾಕ್ಸಿಕ್’ನ ಆ ದೃಶ್ಯಗಳ ನೋಡಿ ಪತ್ನಿ ರಾಧಿಕಾ ಹೇಳಿದ್ದೇನು? ಸತ್ಯ ಹೇಳಿದ ಯಶ್
Yash Radhika

Updated on: Aug 16, 2026 | 5:39 PM

ಮುಖ್ಯಾಂಶಗಳು

  • ಯಶ್ ನಟಿಸಿರುವ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ರೆಡಿ ಆಗಿದೆ.
  • ‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ಹಾಟ್ ದೃಶ್ಯಗಳಲ್ಲಿ ನಟಿಸಿದ್ದಾರೆ.
  • ಆ ದೃಶ್ಯಗಳ ನೋಡಿ ಪತ್ನಿ ರಾಧಿಕಾ ಹೇಳಿದ್ದೇನು?

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಇನ್ನು 10 ದಿನಗಳಷ್ಟೆ ಇದೆ. ಸಿನಿಮಾದ ಪ್ರಚಾರ ಕಾರ್ಯ ಚಾಲ್ತಿಯಲ್ಲಿದೆ. ಈಗಾಗಲೇ ಸಿನಿಮಾದ ಕೆಲ ಪ್ರೋಮೊ, ಟೀಸರ್, ಟ್ರೈಲರ್, ಹಾಡುಗಳು ಬಿಡುಗಡೆ ಆಗಿವೆ. ಹಾಡು, ಟೀಸರ್ ನೋಡಿದವರು ಸಿನಿಮಾನಲ್ಲಿ ಹಸಿ-ಬಿಸಿ ದೃಶ್ಯಗಳ ಬಗ್ಗೆ ಮಾತನಾಡಿದ್ದಾರೆ. ಕುಟುಂಬವೆಲ್ಲ ಸೇರಿ ನೋಡಲಾಗದ ಸಿನಿಮಾನಲ್ಲಿ ನಟಿಸಲ್ಲ ಎಂದಿದ್ದ ಯಶ್ ಇಂಥಹಾ ದೃಶ್ಯಗಳಲ್ಲಿ ನಟಿಸಿದ್ದಾರಲ್ಲ ಎಂದು ಕೆಲವರು ಟೀಕೆ ಸಹ ಮಾಡಿದ್ದಾರೆ. ಆದರೆ ಅದಕ್ಕೆಲ್ಲ ಯಶ್ ಉತ್ತರ ಕೊಟ್ಟಾಗಿದೆ. ಇದೀಗ, ‘ಟಾಕ್ಸಿಕ್’ ಸಿನಿಮಾದ ಹಸಿ ಬಿಸಿ ದೃಶ್ಯಗಳಲ್ಲಿ ನಟಿಸಿದ್ದಕ್ಕೆ ತಮ್ಮ ಪತ್ನಿ ರಾಧಿಕಾ ಪಂಡಿತ್ ಪ್ರತಿಕ್ರಿಯೆ ಏನಿತ್ತು ಎಂದು ಪ್ರಾಮಾಣಿಕವಾಗಿ ತಿಳಿಸಿದ್ದಾರೆ.

‘ಆಪ್ ಕಿ ಅದಾಲತ್’ ಸಂದರ್ಶನದಲ್ಲಿ ಭಾಗಿ ಆಗಿದ್ದ ನಟ ಯಶ್ ಅವರು, ‘ಟಾಕ್ಸಿಕ್’ ಸಿನಿಮಾದ ಬಗ್ಗೆ, ತಮ್ಮ ಸಿನಿಮಾ ಪಯಣದ ಬಗ್ಗೆ, ತಮ್ಮ ಸಂಭಾವನೆ, ರಾಜಕೀಯ ಎಂಟ್ರಿ ಬಗ್ಗೆ ಅಭಿಪ್ರಾಯ ಇನ್ನೂ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇದೇ ಸಂದರ್ಶನದಲ್ಲಿ, ‘ಟಾಕ್ಸಿಕ್’ ಸಿನಿಮಾನಲ್ಲಿರುವ ಹಸಿ ಬಿಸಿ ದೃಶ್ಯಗಳು, ಅಶ್ಲೀಲತೆ, ಅಪ್ರಾಪ್ತ ವಯಸ್ಕರಷ್ಟೆ ನೋಡಬಹುದಾದ ದೃಶ್ಯಗಳ ಬಗ್ಗೆಯೂ ಯಶ್ ಅವರಿಗೆ ಪ್ರಶ್ನೆಗಳು ಎದುರಾದವು. ಅವುಗಳಿಗೂ ಸಹ ಯಶ್ ಉತ್ತರ ನೀಡಿದ್ದಾರೆ. ಅದರಲ್ಲೂ, ಆ ಹಾಟ್ ದೃಶ್ಯಗಳಲ್ಲಿ ನಟಿಸಿರುವುದಕ್ಕೆ ಪತ್ನಿ ರಾಧಿಕಾರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಸಹ ಅವರು ಪ್ರಾಮಾಣಿಕವಾಗಿ ಹೇಳಿದ್ದಾರೆ.

ಇದನ್ನೂ ಓದಿ:‘ಯಶ್ ಮಿಸ್ಟರ್ ಶೋಆಫ್’ ಎಂದಿದ್ದ ರಶ್ಮಿಕಾಗೆ ಈಗ ಪ್ರತಿಕ್ರಿಯೆ ನೀಡಿದ ರಾಕಿ ಭಾಯ್

‘ಅವರಿಗೆ ಇಷ್ಟ ಆಗಲಿಲ್ಲ. ಪ್ರತಿಯೊಬ್ಬ ಪಾರ್ನರ್​​ಗೆ ಸಹ ಅದರ ಬಗ್ಗೆ ಬೇಸರ ಇದ್ದೆ ಇರುತ್ತದೆ. ತನ್ನ ಪತಿ ಅಥವಾ ಪತ್ನಿ ತೆರೆಯ ಮೇಲೆಯೇ ಆಗಲಿ ಇನ್ನೊಬ್ಬರ ಜೊತೆಗೆ ಅಂಥಹಾ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಾಗ ಬೇಸರ ಆಗುವುದು ಸಹಜವೇ. ರಾಧಿಕಾಗೂ ಸಹ ಬೇಸರ ಆಗಿದೆ. ಆದರೆ ಅಂತಿಮವಾಗಿ ಅರ್ಥ ಮಾಡಿಕೊಳ್ಳಬೇಕಿರುವುದು ಅದೊಂದು ಕಲೆ, ನಾವು ಏನನ್ನೋ ಸಾಧಿಸಲೆಂದು ಆ ಕಾರ್ಯವನ್ನು ಮಾಡುತ್ತಿದ್ದೇವೆ. ನನಗೂ ಸಹ ಅದನ್ನೆಲ್ಲ ಮಾಡುವುದು ಸುಲಭವಾಗಿರಲಿಲ್ಲ. ನಾನೂ ಸಹ ನನ್ನ ಇನ್​​ಸೆಕ್ಯೂರಿಟಿಗಳಿಂದ ಹೊರಗೆ ಬಂದು ಅದನ್ನೆಲ್ಲ ಮಾಡಿದ್ದೇನೆ’ ಎಂದಿದ್ದಾರೆ.

‘ಅದನ್ನೆಲ್ಲ ಬೇಕೆಂದು ಮಾಡಿದ್ದಲ್ಲ, ಆ ಕತೆಗೆ ಅದು ಬೇಕಿತ್ತು ಹಾಗಾಗಿ ಮಾಡಿದ್ದು. ಅವರು ಅದನ್ನು ನೋಡಿ ಖುಷಿಯಾಗಂತೂ ಇರಲಿಲ್ಲ, ಹಾಗೆಂದು ನನ್ನ ಮೇಲೆ ಮುನಿಸಿಕೊಂಡಿದ್ದಾರೆ ಎಂದೂ ಸಹ ಅಲ್ಲ. ಅವರು ನನ್ನನ್ನು ನಂಬುತ್ತಾರೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಅವರೂ ಸಹ ಒಬ್ಬ ನಟಿ. ಹಾಗಾಗಿ ಅದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ’ ಎಂದಿದ್ದಾರೆ ನಟ ಯಶ್.

‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ರಾಯ ಹಾಗೂ ಟಿಕೆಟ್ ಎರಡೂ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಯ ಪಾತ್ರವು ‘ಪ್ಲೇ ಬಾಯ್’ ರೀತಿಯ ಪಾತ್ರವಾಗಿದ್ದು, ನಟಿಯರೊಟ್ಟಿಗೆ ಬಹಳ ಇಂಟಿಮೇಟ್ ಆದ ದೃಶ್ಯಗಳಲ್ಲಿ ಯಶ್ ನಟಿಸಿದ್ದಾರೆ. ಸಿನಿಮಾದ ಟೀಸರ್ ನೋಡಿದ ಕೆಲವರು ಸಿಬಿಎಫ್​​ಸಿಗೆ ದೂರು ಸಹ ಸಲ್ಲಿಸಿದ್ದು, ಸಿನಿಮಾಕ್ಕೆ ಪ್ರಮಾಣ ಪತರ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:32 pm, Sun, 16 August 26

Loading...
Unable to load recommendations.
Follow Us