ಯಶ್ ಇಷ್ಟ ಆಗೋದೆ ಇದಕ್ಕೆ; ಲೈಟ್ ಬಾಯ್ ಕೈಯಲ್ಲಿ ‘ಟಾಕ್ಸಿಕ್’ ಸಿನಿಮಾಗೆ ಕ್ಲ್ಯಾಪ್

‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ಬಗ್ಗೆ ಯಶ್ ಅವರು ಇಂದು ಬೆಳ್ಳಂಬೆಳಿಗ್ಗೆಯೇ ಅಪ್​ಡೇಟ್ ಕೊಟ್ಟಿದ್ದಾರೆ. ‘ಪಯಣ ಶುರುವಾಗಿದೆ’ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ‘ಟಾಕ್ಸಿಕ್’ ಸಿನಿಮಾದ ಶೂಟ್ ಇಂದಿನಿಂದ ಆರಂಭ ಆಗಿದೆ ಎಂಬುದನ್ನು ಅಧಿಕೃತ ಮಾಡಿದ್ದಾರೆ.

ಯಶ್ ಇಷ್ಟ ಆಗೋದೆ ಇದಕ್ಕೆ; ಲೈಟ್ ಬಾಯ್ ಕೈಯಲ್ಲಿ ‘ಟಾಕ್ಸಿಕ್’ ಸಿನಿಮಾಗೆ ಕ್ಲ್ಯಾಪ್
ಯಶ್
Edited By:

Updated on: Aug 08, 2024 | 11:31 AM

ಸಿನಿಮಾಗಳಿಗೆ ಕ್ಲ್ಯಾಪ್ ಮಾಡೋಕೆ ದೊಡ್ಡ ಸ್ಟಾರ್​ಗಳನ್ನು ಕರೆತರೋಕೆ ಫ್ಯಾನ್ಸ್ ಇಷ್ಟಪಡುತ್ತಾರೆ. ಆದರೆ, ‘ಟಾಕ್ಸಿಕ್’ ತಂಡ ಇದಕ್ಕೆ ಭಿನ್ನವಾಗಿದೆ. ಯಶ್ ಅವರು ತಮ್ಮ ಸಿನಿಮಾದಲ್ಲಿ ಲೈಟ್ ಆಫೀಸರ್ ಕೈಯಲ್ಲಿ ‘ಟಾಕ್ಸಿಕ್’ ಚಿತ್ರಕ್ಕೆ ಕ್ಲ್ಯಾಪ್ ಮಾಡಿಸಿದ್ದಾರೆ. ಯಶ್ ನಟನೆಯ ಅನೇಕ ಸಿನಿಮಾಗಳಿಗೆ ಈ ವ್ಯಕ್ತಿ ಕೆಲಸ ಮಾಡಿದ್ದಾರೆ. ಈ ವಿಚಾರ ಕೇಳಿ ಯಶ್ ಫ್ಯಾನ್ಸ್ ಖುಷಿಯಾಗಿದ್ದಾರೆ. ಯಶ್ ನಡೆಯನ್ನು ಬಾಯ್ತುಂಬ ಹೊಗಳಿದ್ದಾರೆ.

ಯಶ್ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ‘ಕೆಜಿಎಫ್ 2’ ರಿಲೀಸ್ ಆಗಿ ಎರಡೂವರೆ ವರ್ಷಗಳ ಬಳಿಕ ಅವರು ಈ ಸಿನಿಮಾದ ಕೆಲಸ ಆರಂಭಿಸಿದ್ದಾರೆ. ‘ಟಾಕ್ಸಿಕ್’ ಸಿನಿಮಾದ ಮುಹೂರ್ತ ಬೆಂಗಳೂರಿನ ಹೊರವಲಯದಲ್ಲಿ ನಡೆದಿದೆ. ಲೈಟ್ ಬಾಯ್ ಬಳಿ ಕ್ಲ್ಯಾಪ್ ಮಾಡಿಸಿ ತಂತ್ರಜ್ಞರು ಹಾಗೂ ಕಾರ್ಮಿಕರ ಮೇಲೆ ತಮಗಿರೋ ಗೌರವ ಮತ್ತು ಕಾಳಜಿಯನ್ನ ಯಶ್ ತೋರಿಸಿದ್ದಾರೆ.

ಇಂದು (ಆಗಸ್ಟ್ 8) ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ‘ಟಾಕ್ಸಿಕ್’ಗೆ ಮುಹೂರ್ತ ನೆರವೇರಿದೆ. ಬೆಂಗಳೂರಿನ ಹೊರವಲಯದಲ್ಲಿರುವ ಎಚ್​ಎಮ್​ಟಿ ಫ್ಯಾಕ್ಟರಿಯಲ್ಲಿ ಟಾಕ್ಸಿಕ್ ಸಿನಿಮಾಗೆ ಸೆಟ್ ಹಾಕಲಾಗಿದೆ. ಅಲ್ಲಿಯೇ ಮುಹೂರ್ತ ನಡೆದಿದೆ.

ಟಾಕ್ಸಿಕ್ ಶುರುಮಾಡುವ ಮೊದಲು ಹಲವು ದೇವರುಗಳ ದರ್ಶನವನ್ನು ಪಡೆದು ಯಶ್ ಆಗಮಿಸಿದ್ದಾರೆ. ಗೀತು ಮೋಹಮ್ ದಾಸ್ ನಿರ್ದೇಶನದ ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್​ನ ಕೆ. ವೆಂಕಟ್ ನಾರಾಯಣ  ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರದಲ್ಲಿ ನಯನತಾರಾ ಹಾಗೂ ಕಿಯಾರಾ ಅಡ್ವಾಣಿ ನಟಿಸಲಿದ್ದಾರೆ ಎನ್ನಲಾಗಿದೆ. ಅವರು ಶೀಘ್ರವೇ ಶೂಟಿಂಗ್ ಸೇರಿಕೊಳ್ಳಲಿದ್ದಾರೆ.

ಇದನ್ನೂ ಓದಿ: ‘ಪಯಣ ಶುರುವಾಗಿದೆ’; ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ಬಗ್ಗೆ ಅಪ್​ಡೇಟ್ ಕೊಟ್ಟ ಯಶ್

‘ಟಾಕ್ಸಿಕ್’ ಪ್ಯಾನ್ ಇಂಡಿಯಾ ಸಿನಿಮಾ. ತುಂಬಾನೇ ದೊಡ್ಡ ಮಟ್ಟದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಕನ್ನಡದ ಜೊತೆಗೆ ಹಿಂದಿ, ತೆಲುಗು ಮೊದಲಾದ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಏಪ್ರಿಲ್​ನಲ್ಲಿ ಚಿತ್ರ ಬಿಡುಗಡೆ ಆಗಲಿದೆ ಎಂದು ತಂಡ ಹೇಳಿದೆ. ಆದರೆ, ಶೂಟಿಂಗ್ ವಿಳಂಬ ಆಗಿರುವುದರಿಂದ ಮತ್ತಷ್ಟು ವಿಳಂಬ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:19 am, Thu, 8 August 24