ಕುಟುಂಬ ಸಮೇತ ಮಾಲ್ಡೀವ್ಸ್​ ಪ್ರವಾಸ ಕೈಗೊಂಡ ಯಶ್

ಇತ್ತೀಚೆಗಷ್ಟೇ ಯಶ್​ ತಮ್ಮ ಜನ್ಮದಿನ ಆಚರಿಸಿಕೊಂಡಿದ್ದರು. ಈ ದಿನ ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಟೀಸರ್​ ಕೂಡ ರಿಲೀಸ್ ಆಗಿ ಹೊಸ ದಾಖಲೆ ಸೃಷ್ಟಿಸಿತ್ತು. ಈ ಖುಷಿಯಲ್ಲೇ ಯಶ್​ ಮಾಲ್ಡೀವ್ಸ್​ ಪ್ರವಾಸ ಕೈಗೊಂಡಿದ್ದಾರೆ.

ಕುಟುಂಬ ಸಮೇತ ಮಾಲ್ಡೀವ್ಸ್​ ಪ್ರವಾಸ ಕೈಗೊಂಡ ಯಶ್
ಮಾಲ್ಡೀವ್ಸ್​ ಪ್ರವಾಸದಲ್ಲಿರುವ ಯಶ್
Edited By:

Updated on: Jan 18, 2021 | 9:21 PM

ಕೊರೊನಾ ವೈರಸ್​ ಅಬ್ಬರ ನಿಧಾನವಾಗಿ ಕಡಿಮೆ ಆಗುತ್ತಿದ್ದಂತೆ ಸ್ಟಾರ್​ ನಟ-ನಟಿಯರು ಮಾಲ್ಡೀವ್ಸ್​ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈಗ ನಟ ಯಶ್​ ಹಾಗೂ ಪತ್ನಿ ರಾಧಿಕಾ ಪಂಡಿತ್​ ಕುಟುಂಬ ಸಮೇತ ಮಾಲ್ಡೀವ್ಸ್​ಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ, ಹಾಯಾಗಿ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ.

ಇತ್ತೀಚೆಗಷ್ಟೇ ಯಶ್​ ತಮ್ಮ ಜನ್ಮದಿನ ಆಚರಿಸಿಕೊಂಡಿದ್ದರು. ಈ ಪ್ರಯುಕ್ತ ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಟೀಸರ್​ ಕೂಡ ರಿಲೀಸ್ ಆಗಿ ಹೊಸ ದಾಖಲೆ ಸೃಷ್ಟಿಸಿತ್ತು. ಈ ಖುಷಿಯಲ್ಲೇ ಯಶ್​ ಮಾಲ್ಡೀವ್ಸ್​ ಪ್ರವಾಸ ಕೈಗೊಂಡಿದ್ದಾರೆ.

ಉಷ್ಣವಲಯದ ಸ್ವರ್ಗ ಎಂದಿದ್ದರೆ ಅದು ಮಾಲ್ಡೀವ್ಸ್​ ಮಾತ್ರ. ನಾವು ಇಲ್ಲಿಗೆ ಬಂದಿದ್ದೇವೆ ಎಂದು ಯಶ್ ಇನ್​​ಸ್ಟಾಗ್ರಾಂನಲ್ಲಿ​ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಯಶ್-ರಾಧಿಕಾ​ ಮಗಳು ಆಯ್ರಾ ಹಾಗೂ ಮಗ ಯಥರ್ವ್​ ಜೊತೆ ಆನಂದದಿಂದ ಸಮಯ ಕಳೆಯುತ್ತಿರುವ ಫೋಟೋ ಹಾಕಿದ್ದಾರೆ.

ಕೆಜಿಎಫ್ ಚಾಪ್ಟರ್​ 2 ಟೀಸರ್​ ಯಶ್​ ಜನ್ಮದಿನದ ಅಂಗವಾಗಿ ಜನವರಿ 8ರಂದು ರಿಲೀಸ್​ ಆಗಬೇಕಿತ್ತು. ಆದರೆ, ಒಂದು ದಿನ ಮೊದಲೇ ಟೀಸರ್​ ಲೀಕ್​ ಆಗಿತ್ತು. ಹೀಗಾಗಿ ನವೆಂಬರ್ 7ರಂದು ಟೀಸರ್​ ರಿಲೀಸ್​ ಮಾಡಲಾಗಿತ್ತು. ಸದ್ಯ ಟೀಸರ್​ 15 ಕೋಟಿ ವೀಕ್ಷಣೆ ಕಂಡಿದೆ.

 

ಯಶ್​, ಸುದೀಪ್​ ಮಸ್ತ್​ ಡಾನ್ಸ್​: ಅದ್ದೂರಿಯಾಗಿ ನಡೆದ ರಮೇಶ್​ ಅರವಿಂದ್ ಮಗಳ ಆರತಕ್ಷತೆ ಕಾರ್ಯಕ್ರಮ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us