ರಾಕಿಂಗ್ ಸ್ಟಾರ್ ಯಶ್ ಜನ್ಮದಿನ; ಇಂದು ಆಗುತ್ತಾ ಆ ವಿಶೇಷ ಘೋಷಣೆ?

Yash Birthday: ನಟ ಯಶ್ ಅವರ 40ನೇ ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಜನ್ಮದಿನವನ್ನು ಆಚರಿಸುತ್ತಿದ್ದಾರೆ. 'ಕೆಜಿಎಫ್ 2' ಬಿಡುಗಡೆಯಾಗಿ ಹಲವು ವರ್ಷಗಳಾಗಿದ್ದು, 'ಕೆಜಿಎಫ್ 3' ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡುವುದಾಗಿ ಹೇಳಿತ್ತು. ಯಶ್ ಜನ್ಮದಿನದಂದು 'ಕೆಜಿಎಫ್ 3' ಬಗ್ಗೆ ಮಹತ್ವದ ಅಪ್‌ಡೇಟ್ ಬರಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಜನ್ಮದಿನ; ಇಂದು ಆಗುತ್ತಾ ಆ ವಿಶೇಷ ಘೋಷಣೆ?
ಯಶ್
Edited By:

Updated on: Jan 08, 2026 | 7:41 AM

ನಟ ಯಶ್ (Yash) ಅವರಿಗೆ ಇಂದು (ಜನವರಿ 8) ಜನ್ಮದಿನದ ಸಂಭ್ರಮ. ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬರ್ತ್​​ಡೇ ದಿನವನ್ನು ಸಂಭ್ರಮಿಸುತ್ತಿದ್ದಾರೆ. ವಿವಿಧ ಕಡೆಗಳಿಂದ ಅವರಿಗೆ ಬರ್ತ್​​ಡೇ ವಿಶ್​​ಗಳು ಬರುತ್ತಿವೆ. ಹಿಗಿರುವಾಗಲೇ ಯಶ್ ಅವರ ಬರ್ತ್​ಡೇ ದಿನ ಒಂದು ವಿಶೇಷ ಘೋಷಣೆ ಆಗುತ್ತದೆಯೇ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಅಷ್ಟಕ್ಕೂ ಏನದು ಆ ಘೋಷಣೆ? ಆ ಬಗ್ಗೆ ಇಲ್ಲಿದೆ ವಿವರ.

ಯಶ್ ಅವರಿಗೆ ಇದು 40ನೇ ವರ್ಷದ ಹುಟ್ಟುಹಬ್ಬ. ಮೈಸೂರಿನಲ್ಲಿ ಜನಿಸಿದ ಅವರು ಬೆಂಗಳೂರಿಗೆ ಬಂದು ನಟನೆ ಆರಂಭಿಸಿದರು. ಮೊದಲು ಧಾರಾವಾಹಿಗಳಲ್ಲಿ ನಟಿಸಿದ ಅವರು ನಂತರ ಸಿನಿಮಾಗಳನ್ನು ಮಾಡಿದರು. ಈಗ ಸೂಪರ್ ಸ್ಟಾರ್ ಆಗಿದ್ದಾರೆ. ಝೀರೋದಿಂದ ಆರಂಭಿಸಿ ಇಂದು ಹೀರೋ ಆಗಿದ್ದಾರೆ. ಈ ಕಾರಣದಿಂದಲೇ ಅವರ ಅಭಿಮಾನಿ ಬಳಗ ಸ್ವಲ್ಪ ಹಿರಿದಾಗಿಯೇ ಇದೆ. ಈಗ ಯಶ್​​ಗೆ ಎಲ್ಲ ಕಡೆಗಳಿಂದ ಜನ್ಮದಿನದ ವಿಶ್ ಬರುತ್ತಿದೆ. ಇದರ ಜೊತೆ ಒಂದು ಘೋಷಣೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅದುವೇ ‘ಕೆಜಿಎಫ್ 3’.

ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಟನೆಯ ‘ಕೆಜಿಎಫ್’ ಸಿನಿಮಾ ಸೂಪರ್ ಹಿಟ್ ಆಯಿತು. ಆ ಬಳಿಕ ಬಂದ ‘ಕೆಜಿಎಫ್ 2’ ಕೂಡ ಗಮನ ಸೆಳೆಯಿತು. ಈ ಸಿನಿಮಾದ ಕೊನೆಯಲ್ಲಿ ‘ಕೆಜಿಎಫ್ 3’ ಬಗ್ಗೆ ಘೋಷಣೆ ಮಾಡಲಾಯಿತು. ಇದಕ್ಕಾಗಿ ಅಭಿಮಾನಿಗಳು ಕಾದು ಕುಳಿತುಕೊಳ್ಳುವಂತೆ ಆಯಿತು. ಆದರೆ, ಈವರೆಗೆ ಸಿನಿಮಾದ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ: ‘ಹೂವಿನ ಬಾಣದಂತೆ’ ಹುಡುಗಿಗೆ ಜೀ ಕನ್ನಡ ಅವಕಾಶ; ಟ್ರೋಲ್ ಮಾಡಿದವರಿಗೆ ನಿತ್ಯಶ್ರೀ ತಿರುಗೇಟು 

‘ಕೆಜಿಎಫ್ 2’ ರಿಲೀಸ್ ಆಗಿ ನಾಲ್ಕು ವರ್ಷಗಳು ಕಳೆಯುತ್ತಾ ಬಂದಿವೆ. ಆದಾಗ್ಯೂ ಇದರ ಬಗ್ಗೆ ಮಾಹಿತಿ ಇಲ್ಲ. ‘ಕೆಜಿಎಫ್ 3’ ಘೋಷಣೆ ಬಗ್ಗೆ ಮಾಹಿತಿ ನೀಡುವುದಾಗಿ ಹೊಂಬಾಳೆ ಫಿಲ್ಮ್ಸ್ ಹೇಳಿತ್ತು. ಆದರೆ, ಯಾವುದೇ ಅಪ್​ಡೇಟ್ ಸಿಕ್ಕಿಲ್ಲ. ಇಂದು ಯಶ್ ಬರ್ತ್​​ಡೇ ದಿನ ಈ ಬಗ್ಗೆ ಘೋಷಣೆ ಆಗಬಹುದೇ ಎಂಬ ಕೌತುಕದಲ್ಲಿ ಫ್ಯಾನ್ಸ್ ಇದ್ದಾರೆ. ‘ಟಾಕ್ಸಿಕ್’ ಸಿನಿಮಾದ ಟೀಸರ್ ಇಂದು ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:41 am, Thu, 8 January 26