
ರಾಕಿಂಗ್ ಸ್ಟಾರ್ ಯಶ್ ಅವರು ವೇದಿಕೆ ಏರಿದಾಗ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಇದರಲ್ಲಿ ಬಹುತೇಕವು ಅವರ ಅನುಭವದ ಮಾತು. ಇಂಡಸ್ಟ್ರಿಯ ಏಳ್ಗೆ ಬಗೆಗಿನ ಮಾತುಗಳೇ ಆಗಿರುತ್ತವೆ. 2025ರಲ್ಲಿ ರಿಲೀಸ್ ಆದ ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಸಿನಿಮಾದ ಈವೆಂಟ್ಗೆ ಯಶ್ ಅತಿಥಿಯಾಗಿ ತೆರಳಿದ್ದರು. ಈ ವೇದಿಕೆ ಮೇಲೆ ಯಶ್ ಒಂದು ಮಾತನ್ನು ಹೇಳಿದ್ದರು. ರಾಜ್ ಬಿ. ಶೆಟ್ಟಿ ಹಾಗೂ ಜೆಪಿ ತುಮಿನಾಡ ‘ಸು ಫ್ರಮ್ ಸೋ’ (Su From So Movie) ಚಿತ್ರದ ಮೂಲಕ ಇದನ್ನು ನಿಜ ಎಂದು ತೋರಿಸಿದ್ದಾರೆ.
ರಾಜ್ ಬಿ. ಶೆಟ್ಟಿ ಮೊದಲಾದವರು ನಿರ್ಮಿಸಿದ, ಜೆಪಿ ತುಮಿನಾಡ ನಿರ್ದೇಶನದ ‘ಸು ಫ್ರಮ್ ಸೋ’ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ. ಈ ಚಿತ್ರವನ್ನು ಜನರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ವಾರದ ದಿನಗಳಲ್ಲೂ ಸಿನಿಮಾಗೆ ಟಿಕೆಟ್ ಸಿಗುತ್ತಿಲ್ಲ. ‘ಜನರು ಥಿಯೇಟರ್ಗೆ ಬರುತ್ತಿಲ್ಲ ಎಂಬ ಸ್ಥಿತಿಯಿಂದ ವಾರದ ದಿನದಲ್ಲೂ ಟಿಕೆಟ್ ಸಿಗುತ್ತಿಲ್ಲ’ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ.
‘ಸು ಫ್ರಮ್ ಸೋ’ ಚಿತ್ರದಲ್ಲಿ ದೊಡ್ಡ ಪಾತ್ರವರ್ಗ ಇಲ್ಲ. ರಾಜ್ ಬಿ. ಶೆಟ್ಟಿ ಅವರು ಸೆಲೆಬ್ರಿಟಿಗಳಿಂದ ಸಿನಿಮಾ ಪ್ರಚಾರ ಮಾಡಿಸಿಲ್ಲ. ಪೋಸ್ಟರ್ ಅಂಟಿಸಿಲ್ಲ. ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಿ ಸಿನಿಮಾಗೆ ಬಾಯ್ಮಾತಿನ ಪ್ರಚಾರ ಕೊಟ್ಟರು. ಇದು ಸಿನಿಮಾಗೆ ಸಹಕಾರಿ ಆಗಿದೆ. ಸಿನಿಮಾನ ಜನರು ಮರಳಿ ಮರಳಿ ವೀಕ್ಷಿಸುತ್ತಿದ್ದಾರೆ. ಹಾಸ್ಯ ಮತ್ತು ಭಾವನಾತ್ಮಕ ವಿಚಾರ ಚಿತ್ರದ ಹೈಲೈಟ್. ಈ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಅನೇಕರು ಯಶ್ ಮಾತನ್ನು ನೆನಪಿಸಿಕೊಂಡಿದ್ದಾರೆ.
Time to post this again
Last week : #Ekka
Now : #SuFromSoKannada audience stand with Good movies 💯❤️pic.twitter.com/VC0AhicQSg
— Hithesh ᵀᵒˣᶦᶜ (@YashViratstan) July 26, 2025
‘ಜನರು ಕನ್ನಡ ಸಿನಿಮಾ ನೋಡಲ್ಲ ಎಂದು ನಾನು ಸಂದರ್ಶನದಲ್ಲಿ ಹೇಳಿದ್ದೆ. ಒಳ್ಳೆಯ ಕೆಲಸ ಮಾಡಿ, ಒಳ್ಳೆಯ ಚಿತ್ರ ಕೊಟ್ಟರೆ ಕನ್ನಡಿಗರು ಯಾವತ್ತಿಗೂ ಕೈ ಬಿಟ್ಟಿಲ್ಲ ಎಂದು ಒಂದು ದಿನ ನನಗೇ ಅನ್ನಿಸಿತು. ಹೊಸಬರಿಗೆ ಲಾಂಚ್ ಮಾಡಿ ಎಂದು ಕೇಳ್ತಾರೆ. ಆ ರೀತಿಯ ಈವೆಂಟ್ಗಳಿಂದ ಗಮನ ಸೆಳೆಯಬಹುದೇ ಹೊರತು, ಗೆಲುವು ಸಿಗಲ್ಲ. ಅದು ಸಿಗೋದು ನಮ್ಮ ಕೆಲಸದಿಂದ’ ಎಂದಿದ್ದರು ಯಶ್.
ಇದನ್ನೂ ಓದಿ: ಅಶ್ವಮೇಧದ ಕುದುರೆ ‘ಸು ಫ್ರಮ್ ಸೋ’; ಕೆಲೆಕ್ಷನ್ನಲ್ಲಿ ಚಿತ್ರವನ್ನು ತಡೆಯೋರೆ ಇಲ್ಲ
‘ಕೆಲಸ ಕಲಿಯೋಣ. ಗುರಿ ಇಟ್ಟುಕೊಳ್ಳೋಣ. ಬೇಡೋದು ಬೇಡ, ತಲೆ ತಗ್ಗಿಸೋದು ಬೇಡ. ಬೇರೆಯವರು ಗೌರವ ಕೊಡುವ ರೀತಿ ದುಡಿಯೋಣ’ ಎಂದಿದ್ದರು ಯಶ್. ಆ ಮಾತು ಈಗ ನಿಜವಾಗಿದೆ. ಜನರು ಒಳ್ಳೆಯ ಚಿತ್ರವನ್ನು ಗೆಲ್ಲಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.