Year Ender 2022: ಮುಂದಿನ ವರ್ಷದ ಬಹುನಿರೀಕ್ಷಿತ ಚಿತ್ರಗಳಿವು; ಇವುಗಳನ್ನು ನೀವು ಮಿಸ್ ಮಾಡಿಕೊಳ್ಳುವಂತಿಲ್ಲ

ಮುಂದಿನ ವರ್ಷ ತೆರೆಗೆ ಬರಲಿರುವ ಕನ್ನಡ ಹಾಗೂ ಇತರ ಭಾಷೆಯ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ ಇಲ್ಲಿದೆ.

Year Ender 2022: ಮುಂದಿನ ವರ್ಷದ ಬಹುನಿರೀಕ್ಷಿತ ಚಿತ್ರಗಳಿವು; ಇವುಗಳನ್ನು ನೀವು ಮಿಸ್ ಮಾಡಿಕೊಳ್ಳುವಂತಿಲ್ಲ
2023ರ ನಿರೀಕ್ಷಿತ ಚಿತ್ರಗಳು
Edited By:

Updated on: Dec 28, 2022 | 11:50 AM

2022 ಪೂರ್ಣಗೊಂಡಿದೆ. ಕನ್ನಡದ (Kannada Film Industry) ಪಾಲಿಗೆ ಈ ವರ್ಷ ವಿಶೇಷವಾಗಿತ್ತು. ಹಲವು ಚಿತ್ರಗಳು ಹಿಟ್ ಆದವು. ಕನ್ನಡ ಚಿತ್ರರಂಗದ ಖ್ಯಾತಿ ವಿಶ್ವಾದ್ಯಂತ ಹಬ್ಬಿತು. ಎಲ್ಲರೂ ಕನ್ನಡ ಚಿತ್ರರಂಗದತ್ತ ಮುಖಮಾಡಿದರು. ಈ ಕಾರಣಕ್ಕೆ 2023ರ ಮೇಲೆ ನಿರೀಕ್ಷೆ ಇದೆ. ಮತ್ತಷ್ಟು ಹಿಟ್ ಚಿತ್ರಗಳು ಬರಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ. ಮುಂದಿನ ವರ್ಷ (Year Ender 2023) ತೆರೆಗೆ ಬರಲಿರುವ ಕನ್ನಡ ಹಾಗೂ ಇತರ ಭಾಷೆಯ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ ಇಲ್ಲಿದೆ.

 ‘ಕಬ್ಜ’

ಆರ್​. ಚಂದ್ರು ನಿರ್ದೇಶನದ, ಉಪೇಂದ್ರ ಹಾಗೂ ಸುದೀಪ್ ನಟನೆಯ ‘ಕಬ್ಜ’ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ ಈಗಾಗಲೇ ಟೀಸರ್ ಮೂಲಕ ಸದ್ದು ಮಾಡಿದೆ. ಈ ಸಿನಿಮಾ 2023ರಲ್ಲಿ ತೆರೆಗೆ ಬರಲಿದೆ.

ಮಾರ್ಟಿನ್

‘ಪೊಗರು’ ಬಳಿಕ ಧ್ರುವ ಸರ್ಜಾ ಅವರ ಬೇರೆ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಅವರ ಮುಂದಿನ ಚಿತ್ರ ‘ಮಾರ್ಟಿನ್​’ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಎಲ್ಲವೂ ಅಂದಕೊಂಡಂತೆ ಆಗಿದ್ದರೆ ಈ ವರ್ಷವೇ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರದ ಕೆಲಸಗಳು ವಿಳಂಬ ಆದವು. ಈ ಚಿತ್ರದ ಕ್ಲೈಮ್ಯಾಕ್ಸ್​​ನ ಬರೋಬ್ಬರಿ 60ಕ್ಕೂ ಹೆಚ್ಚು ದಿನ ಶೂಟ್ ಮಾಡಲಾಗಿದೆ.

ಸ್ವಾತಿ ಮುತ್ತಿನ ಮಳೆ ಹನಿಯೇ

ರಾಜ್​ ಬಿ. ಶೆಟ್ಟಿ ನಿರ್ದೇಶನದ, ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ 2023ರಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ರಮ್ಯಾ ನಟಿಸಬೇಕಿತ್ತು. ಆದರೆ, ಅವರ ಬದಲು ಸಿರಿ ರವಿಕುಮಾರ್ ಸಿನಿಮಾ ತಂಡ ಸೇರಿದ್ದರು. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.

ಭೀಮ

‘ಸಲಗ’ ಚಿತ್ರದ ಮೂಲಕ ದುನಿಯಾ ವಿಜಯ್ ದೊಡ್ಡ ಗೆಲುವು ಕಂಡಿದ್ದಾರೆ. ನಿರ್ದೇಶಕರಾಗಿ ಅವರು ಮೊದಲ ಸಿನಿಮಾದಲ್ಲೇ ಗೆದ್ದು ಬೀಗಿದ್ದಾರೆ. ಈಗ ಅವರು ‘ಭೀಮ’ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ 2023ರಲ್ಲಿ ತೆರೆಗೆ ಬರಲಿದೆ. ಈ ಸಿನಿಮಾದ ಪೋಸ್ಟರ್​​ಗಳು ಈಗಾಗಲೇ ಸದ್ದು ಮಾಡಿವೆ.

ಯುಐ

ಹಲವು ವರ್ಷಗಳ ಬಳಿಕ ಉಪೇಂದ್ರ ಅವರು ನಿರ್ದೇಶನಕ್ಕೆ ಮರಳಿದ್ದಾರೆ. ‘ಯುಐ’ ಚಿತ್ರವನ್ನು ಅವರು ನಿರ್ದೇಶನ ಮಾಡುತ್ತಿದ್ದಾರೆ. ಪೋಸ್ಟರ್ ಮೂಲಕ ತಲೆಗೆ ಹುಳಬಿಡುವ ಕೆಲಸ ಆಗಿದೆ. ಈ ಚಿತ್ರ ಕೂಡ ಮುಂದಿನ ವರ್ಷ ರಿಲೀಸ್ ಆಗುವ ಸಾಧ್ಯತೆ ಇದೆ.

ಬ್ಯಾಡ್ ಮ್ಯಾನರ್ಸ್​

ದುನಿಯಾ ಸೂರಿ ನಿರ್ದೇಶನದ, ಅಭಿಷೇಕ್ ಅಂಬರೀಷ್ ನಟನೆಯ ‘ಬ್ಯಾಡ್ ಮ್ಯಾನರ್ಸ್​’ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ. ಚಿತ್ರದಲ್ಲಿ ನಾಯಕಿಯರಾಗಿ ಪ್ರಿಯಾಂಕಾ ಕುಮಾರ್ ಮತ್ತು ರಚಿತಾ ರಾಮ್ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿಯಾಗಿದೆ.

ಹೊಯ್ಸಳ

ಡಾಲಿ ಧನಂಜಯ್ ಅವರು 2022ರಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. 2023ರಲ್ಲಿ ಅವರು ಮತ್ತಷ್ಟು ಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ನಟನೆಯ ‘ಹೊಯ್ಸಳ’ ಸಿನಿಮಾ 2023ರಲ್ಲಿ ತೆರೆಗೆ ಬರುತ್ತಿದೆ.

ಸಪ್ತ ಸಾಗರದಾಚೆ ಎಲ್ಲೋ

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ತೂಕ ಹೆಚ್ಚಿಸಿಕೊಂಡಿದ್ದರು. ಈ ಸಿನಿಮಾ ಪೋಸ್ಟರ್​ಗಳು ಈಗಾಗಲೇ ವೈರಲ್ ಆಗಿವೆ.

ಪರಭಾಷೆಯ ಸಿನಿಮಾಗಳು

2023ರಲ್ಲಿ ಪರಭಾಷೆಯ ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತಿವೆ. ಪ್ರಭಾಸ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ 2023ರಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಪ್ರಭಾಸ್ ಅವರ ‘ಆದಿಪುರುಷ್​’ ಕೂಡ ಮುಂದಿನ ವರ್ಷ ರಿಲೀಸ್ ಆಗುತ್ತಿದೆ. ಶಾರುಖ್ ಅಭಿಮಾನಿಗಳಿಗೆ 2023 ವಿಶೇವಾಗಿರಲಿದೆ. ಜನವರಿ 25ರಂದು ‘ಪಠಾಣ್​’ ರಿಲೀಸ್ ಆದರೆ, ಅದೇ ವರ್ಷ ‘ಜವಾನ್​’ ಕೂಡ ತೆರೆಗೆ ಬರುತ್ತಿದೆ.

ದಳಪತಿ ವಿಜಯ್ ಅಭಿನಯದ ‘ವಾರಿಸು’ (ಜನವರಿ 12) , ಅಜಿತ್ ಕುಮಾರ್ ‘ತುನಿವು (ಜನವರಿ 12)’, ಚಿರಂಜೀವಿ ಅಭಿನಯದ ‘ವಾಲ್ತೇರ್​ ವೀರಯ್ಯ’, ರಜನಿಕಾಂತ್​-ಶಿವಣ್ಣ ನಟನೆಯ ‘ಜೈಲರ್​’, ಮಣಿರತ್ನಂ ನಟನೆಯ ‘ಪೊನ್ನಿಯಿನ್​ ಸೆಲ್ವನ್ 2’ ಕೂಡ 2023ರಲ್ಲಿ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:30 am, Wed, 28 December 22