ಕಾರನ್ನು ಹಿಂಬಾಲಿಸಿದ ಅಭಿಮಾನಿಗಳಿಗೆ ಖಡಕ್ ಆಗಿ ಕಿವಿಮಾತು ಹೇಳಿದ ರಶ್ಮಿಕಾ; ವಿಡಿಯೋ ವೈರಲ್
ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್ನಲ್ಲಿ ಕಾರಿನಲ್ಲಿ ಸಾಗುತ್ತಿದ್ದರು. ಈ ಕಾರನ್ನು ಅಭಿಮಾನಿಗಳು ಹಿಂಬಾಲಿಸಿದ್ದಾರೆ. ಅಷ್ಟೇ ಅಲ್ಲ ರಶ್ಮಿಕಾಗೆ ಹಾಯ್ ಹೇಳಬೇಕು ಎಂದು ಸಾಕಷ್ಟು ಕಷ್ಟಪಟ್ಟಿದ್ದಾರೆ.

ರಶ್ಮಿಕಾ ಮಂದಣ್ಣ (Rashmika Mandanna) ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಟಾಲಿವುಡ್, ಬಾಲಿವುಡ್, ಕಾಲಿವುಡ್ನಲ್ಲಿ ಅವರು ಖಾತೆ ತೆರೆದಿದ್ದಾರೆ. ನಿತ್ಯ ಹೊಸ ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಆದರೆ, ಒಂದು ವರ್ಗದ ಜನರಿಗೆ ರಶ್ಮಿಕಾ ಅವರನ್ನು ಕಂಡರೆ ಆಗುವುದೇ ಇಲ್ಲ. ಅವರನ್ನು ಸಿಕ್ಕಾಪಟ್ಟೆ ದ್ವೇಷ ಮಾಡುತ್ತಾರೆ. ಇದಕ್ಕೆ ಕಾರಣ ಹಲವು. ಆದರೆ, ಒಂದು ವರ್ಗದ ಜನರು ರಶ್ಮಿಕಾ ಮಂದಣ್ಣ ಅವರನ್ನು ಇಷ್ಟಪಡುತ್ತಾರೆ. ಇದಕ್ಕೆ ಸಾಕ್ಷ್ಯ ಎಂಬಂತೆ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ವಾಹನದ ಮೇಲೆ ನೆಚ್ಚಿನ ಸೆಲೆಬ್ರಿಟಿ ಕಂಡರೆ ಫ್ಯಾನ್ಸ್ ಆ ವಾಹನವನ್ನು ಹಿಂಬಾಲಿಸಿಕೊಂಡು ಹೋಗುತ್ತಾರೆ. ಇತ್ತೀಚೆಗೆ ಹಾಗೆಯೇ ಆಗಿದೆ. ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್ನಲ್ಲಿ ಕಾರಿನಲ್ಲಿ ಸಾಗುತ್ತಿದ್ದರು. ಈ ಕಾರನ್ನು ಅಭಿಮಾನಿಗಳು ಹಿಂಬಾಲಿಸಿದ್ದಾರೆ. ಅಷ್ಟೇ ಅಲ್ಲ ರಶ್ಮಿಕಾಗೆ ಹಾಯ್ ಹೇಳಬೇಕು ಎಂದು ಸಾಕಷ್ಟು ಕಷ್ಟಪಟ್ಟಿದ್ದಾರೆ.
ಅಭಿಮಾನಿಗಳಿಗೆ ರಶ್ಮಿಕಾ ಮುಖವನ್ನು ನೋಡಬೇಕು ಎಂಬ ಆಸೆ ಹೇಗೆ ಇತ್ತೋ ಅದೇ ರೀತಿ ರಶ್ಮಿಕಾಗೆ ನಮ್ಮ ಮುಖ ಕಾಣಲಿ ಎಂಬುದು ಫ್ಯಾನ್ಸ್ ಬಯಕೆ ಆಗಿತ್ತು. ಇದಕ್ಕಾಗಿ ಅಭಿಮಾನಿಗಳು ಬೈಕ್ ರೈಡ್ ಮಾಡುವಾಗಲೂ ಹೆಲ್ಮೆಟ್ ಹಾಕಿರಲಿಲ್ಲ. ಇದನ್ನು ರಶ್ಮಿಕಾ ಗಮನಿಸಿದ್ದಾರೆ. ಹಾಯ್ ಹೇಳಲು ಬಂದ ಅಭಿಮಾನಿಗಳಿಗೆ ‘ಈಗಲೇ ಹೆಲ್ಮೆಟ್ ಹಾಕಿಕೊಳ್ಳಿ’ ಎಂದು ಖಡಕ್ ಆಗಿಯೇ ಹೇಳಿದ್ದಾರೆ. ಫ್ಯಾನ್ಸ್ ಬಗ್ಗೆ ಅವರಿಗೆ ಇರುವ ಕಾಳಜಿ ಕಂಡು ಅನೇಕರು ಮೆಚ್ಚಿಕೊಂಡಿದ್ದಾರೆ.
I Still Wounder , How one can hate a Human being Like Our @iamRashmika ??pic.twitter.com/i0kaeVB3Af
— × Roвιɴ Roвerт × ?️ (@PeaceBrwVJ) December 25, 2022
ಇದನ್ನೂ ಓದಿ: Christmas 2022: ಸೆಲೆಬ್ರಿಟಿಗಳ ಕ್ರಿಸ್ಮಸ್ ಸಂಭ್ರಮ: ರಶ್ಮಿಕಾ, ಐಶ್ವರ್ಯಾ ರೈ, ಪ್ರೀತಿ ಜಿಂಟಾ ಮನೆಯಲ್ಲಿ ಸಡಗರ
ಕೆಲವರು ಈ ವಿಡಿಯೋ ಹಂಚಿಕೊಂಡು ‘ರಶ್ಮಿಕಾ ಅವರನ್ನು ದ್ವೇಷ ಮಾಡಲು ಹೇಗೆ ಸಾಧ್ಯ’ ಎಂದು ಪ್ರಶ್ನೆ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಬಗೆಬಗೆಯಲ್ಲಿ ಈ ವಿಡಿಯೋಗೆ ಕಮೆಂಟ್ಗಳು ಬರುತ್ತಿವೆ. ರಶ್ಮಿಕಾ ಸದ್ಯ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ಅಭಿನಯದ ‘ವಾರಿಸು’ ತೆರೆಗೆ ಬರಲು ರೆಡಿ ಆಗಿದೆ. ಜನವರಿ 12ರಂದು ಸಿನಿಮಾ ರಿಲೀಸ್ ಆಗಲಿದೆ. ‘ಪುಷ್ಪ 2’, ‘ಅನಿಮಲ್’ ಚಿತ್ರದ ಕೆಲಸಗಳು ಸಾಗುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ








